ETV Bharat / bharat

ತಾಯಿ ಸೋನಿಯಾ ಆರೋಗ್ಯ ವಿಚಾರಿಸಿದ ರಾಹುಲ್​: ಭಾರತ್​ ಜೋಡೋ ಯಾತ್ರೆಯಲ್ಲಿ ನಮಾಜ್​ ಸಲ್ಲಿಸಿದ ಮಹಿಳೆ - ಸೋನಿಯಾ ಗಾಂಧಿ

ಭಾರತ್​ ಜೋಡೋ ಯಾತ್ರೆ ಭಾಗವಾಗಿ ರಾಹುಲ್​ ಗಾಂಧಿ ಕಳೆದ ರಾತ್ರಿ ಹರಿಯಾಣದ ಪಾಣಿಪತ್​ನಲ್ಲಿ ವಾಸ್ತವ್ಯ ಹೂಡಬೇಕಾಗಿತ್ತು. ಆದರೆ, ತಾಯಿ ಸೋನಿಯಾ ಗಾಂಧಿ ಆಸ್ಪತ್ರೆಗೆ ದಾಖಲಾಗಿದ್ದರಿಂದ ದೆಹಲಿಗೆ ಬಂದಿದ್ದರು. ಹೀಗಾಗಿ ಇಂದು ಎರಡು ಗಂಟೆಗಳ ಕಾಲ ಯಾತ್ರೆ ತಡವಾಗಿ ಆರಂಭವಾಗಿದೆ.

Etv Bharat
Etv Bharat
author img

By

Published : Jan 6, 2023, 6:11 PM IST

ಪಾಣಿಪತ್ (ಹರಿಯಾಣ): ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆ ಇಂದು ಹರಿಯಾಣ ಪ್ರವೇಶಿಸಿದೆ. ಇದರ ನಡುವೆ ಯಾತ್ರೆಯಲ್ಲೇ ಮಹಿಳೆಯೊಬ್ಬರು ನಮಾಜ್ ಮಾಡಿರುವ ವಿಚಾರ ಮುನ್ನೆಲೆಗೆ ಬಂದಿದೆ. ಕೂಲಿ ಕಾರ್ಮಿಕಳಾಗಿರುವ ಈ ಮಹಿಳೆ ರಾಹುಲ್​ ಗಾಂಧಿ ಮುಂದೆ ತನ್ನ ಸಮಸ್ಯೆಯನ್ನು ಹೇಳಿಕೊಂಡು ಬಂದಿದ್ದರು. ಇದೇ ವೇಳೆ ಶುಕ್ರವಾರದ ಪ್ರಾರ್ಥನೆಯನ್ನು ಯಾತ್ರೆ ಸಾಗುತ್ತಿದ್ದ ರಸ್ತೆ ಮಧ್ಯೆಯೇ ಸಲ್ಲಿಸಿ ಎಲ್ಲರ ಗಮನ ಸೆಳೆದರು.

ತಮಿಳುನಾಡಿನ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ರಾಹುಲ್​ ಗಾಂಧಿ ಭಾರತ್​ ಜೋಡೋ ಯಾತ್ರೆ ನಡೆಸುತ್ತಿದ್ದಾರೆ. ಡಿ.24ರಂದು ರಾಷ್ಟ್ರ ರಾಜಧಾನಿ ದೆಹಲಿಯನ್ನು ಯಾತ್ರೆ ತಲುಪಿದ ನಂತರ 9 ದಿನಗಳ ಕಾಲ ವಿರಾಮ ತೆಗೆದುಕೊಳ್ಳಲಾಗಿತ್ತು. ಜನವರಿ 3 ರಿಂದ ಮತ್ತೆ ಭಾರತ್​ ಜೋಡೋ ಯಾತ್ರೆ ಆರಂಭವಾಗಿದ್ದು, ಈಗಾಗಲೇ ದೆಹಲಿ ಮೂಲಕ ಉತ್ತರ ಪ್ರದೇಶವನ್ನು ತಲುಪಿ, ಹರಿಯಾಣದ ಪಾಣಿಪತ್​ ಜಿಲ್ಲೆಗೆ ಪ್ರವೇಶಿಸಿದೆ.

ಇಂದು ಬೆಳಗ್ಗೆ ಪಾಣಿಪತ್​ ಜಿಲ್ಲೆಯಲ್ಲಿ ಪಾದಯಾತ್ರೆ ಆರಂಭವಾಗುವ ಮುನ್ನ ರಸ್ತೆಯಲ್ಲಿ ಮಹಿಳೆಯೊಬ್ಬರು ನಮಾಜ್ ಮಾಡಿದ್ದಾರೆ. ಇದೇ ವೇಳೆ, ಈಟಿವಿ ಭಾರತ್​ನೊಂದಿಗೆ ಮಾತನಾಡಿದ ಈ ಮಹಿಳೆ, ನಾನು ಕೂಲಿ ಕಾರ್ಮಿಕಳಾಗಿರುವೆ. ಆದರೆ, ನನ್ನ ಎಲ್ಲ ಸರ್ಕಾರಿ ಸೌಲಭ್ಯದ ಕಾರ್ಡ್​ಗಳನ್ನು ತೆಗೆದು ಹಾಕಲಾಗಿದೆ. ಆದ್ದರಿಂದ ಈ ಬಗ್ಗೆ ರಾಹುಲ್​ ಗಾಂಧಿ ಬಳಿ ಹೇಳಿಕೊಳ್ಳಲು ಯಾತ್ರೆಯಲ್ಲಿ ಭಾಗವಹಿಸಿರುವೆ ಎಂದು ತಿಳಿಸಿದರು.

ಅಲ್ಲದೇ, ರಾಹುಲ್ ಗಾಂಧಿ ನನ್ನ ಎಲ್ಲ ಸಮಸ್ಯೆಗಳನ್ನು ಪರಿಹರಿಸಬೇಕು. ಈ ನಿಟ್ಟಿನಲ್ಲಿ ಭೇಟಿಯಾಗಿ ಮನವಿ ಸಲ್ಲಿಸಲು ಬಂದಿರುವೆ. ಭಾರತ್​ ಜೋಡೋ ಯಾತ್ರೆಯಿಂದ ರಾಹುಲ್ ಗಾಂಧಿ ಅವರಿಗೆ ಯಶಸ್ಸು ಸಿಗಲಿದೆ. ಅವರ ಪ್ರಧಾನಿ ಸಹ ಆಗಲಿ. ಇಂದು ಜುಮ್ಮಾ ಇದ್ದು, ಎಲ್ಲರಿಗೂ ದೇವರ ಆಶೀರ್ವಾದ ಸಿಗಲಿದೆ ಎಂದು ನಮಾಜ್ ಸಲ್ಲಿಸಿದ ಮಹಿಳೆ ಹೇಳಿದರು.

ಸೋನಿಯಾ ಭೇಟಿಗೆ ತೆರಳಿದ್ದ ರಾಹುಲ್​: ಉತ್ತರ ಪ್ರದೇಶದಿಂದ ಹರಿಯಾಣದ ಪಾಣಿಪತ್ ಪ್ರವೇಶಿಸಿರುವ ಭಾರತ್ ಜೋಡೋ ಯಾತ್ರೆಯು ಇಂದು ಬೆಳಗ್ಗೆ 6 ಗಂಟೆ ಬದಲಿಗೆ ಎರಡು ಗಂಟೆಗಳ ಕಾಲ ತಡವಾಗಿ 8 ಗಂಟೆಗೆ ಆರಂಭವಾಯಿತು. ಯಾಕೆಂದರೆ, ರಾಹುಲ್ ಗಾಂಧಿ ತಾಯಿ ಸೋನಿಯಾ ಗಾಂಧಿ, ತಮ್ಮ ಆರೋಗ್ಯದ ತಪಾಸಣೆಗಾಗಿ ಬುಧವಾರ ದೆಹಲಿಯ ಗಂಗಾರಾಮ್​ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆದ್ದರಿಂದ ಉತ್ತರ ಪ್ರದೇಶದಿಂದ ರಾಹುಲ್​ ನೇರವಾಗಿ ಅಮ್ಮನ ಆರೋಗ್ಯ ವಿಚಾರಿಸಲು ಕಳೆದ ರಾತ್ರಿ ದೆಹಲಿಗೆ ತೆರಳಿದ್ದರು. ಹೀಗಾಗಿ ಇಂದು ದೆಹಲಿಯಿಂದ ರಾಹುಲ್​ ಗಾಂಧಿ ಹಿಂತಿರುಗಲು ಸ್ವಲ್ಪ ಸಮಯ ತಡವಾಯಿತು ಎಂದು ತಿಳಿದು ಬಂದಿದೆ.

ಇಂದು ಸಹ ರಾಹುಲ್​ ದೆಹಲಿಗೆ?: ಬೆಳಗ್ಗೆ ಎರಡು ಗಂಟೆ ತಡವಾಗಿ ಬಂದ ರಾಹುಲ್​ ಪಾಣಿಪತ್​ನಿಂದ ತಮ್ಮ ಪಾದಯಾತ್ರೆ ಶುರು ಮಾಡಿದರು. ಸಂಜೆಯವರೆಗೆ ಈ ಯಾತ್ರೆ ನಡೆಸಲಿದ್ದು, ಇಂದು ರಾತ್ರಿ ಕೂಡ ಅವರು ಪಾಣಿಪತ್‌ನಲ್ಲಿ ವಾಸ್ತವ್ಯ ಹೂಡುವುದಿಲ್ಲ. ಸಂಜೆ ಯಾತ್ರೆ ನಂತರ ಅವರು ಸೋನಿಯಾ ಗಾಂಧಿ ಅವರ ಆರೋಗ್ಯ ವಿಚಾರಣೆಗಾಗಿ ದೆಹಲಿಗೆ ತೆರಳಲಿದ್ದಾರೆ. ಇದಕ್ಕಾಗಿ ದೆಹಲಿಯಿಂದ ಕಾರು ಚಾಲಕನನ್ನು ಕರೆಸಲಾಗಿದೆ ಎಂದು ಹರಿಯಾಣ ಕಾಂಗ್ರೆಸ್​ ಮೂಲಗಳು ತಿಳಿಸಿವೆ.

ಸೋನಿಯಾ ಗಾಂಧಿ ಆರೋಗ್ಯ ಸ್ಥಿರ: ಇನ್ನು, ಉಸಿರಾಟದ ಸೋಂಕಿನಿಂದಾಗಿ ಗಂಗಾರಾಮ್ ಆಸ್ಪತ್ರೆಗೆ ದಾಖಲಾಗಿರುವ ಸೋನಿಯಾ ಗಾಂಧಿ ಅವರ ಆರೋಗ್ಯ ಸ್ಥಿರವಾಗಿದ್ದು, ಅವರು ಕ್ರಮೇಣ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಶುಕ್ರವಾರ ಆಸ್ಪತ್ರೆಯಲ್ಲಿ ಆಡಳಿತ ಮಂಡಳಿಯ ಅಧ್ಯಕ್ಷ ಡಾ.ಅಜಯ್ ಸ್ವರೂಪ್ ತಿಳಿಸಿದ್ದಾರೆ. ಸೋನಿಯಾ ಅವರನ್ನು ಚೆಸ್ಟ್ ವೈದ್ಯಕೀಯ ವಿಭಾಗದಲ್ಲಿ ದಾಖಲಿಸಲಾಗಿದ್ದು, ಡಾ.ಅರೂಪ್ ಬಸು ಮತ್ತವರ ತಂಡ ಆರೈಕೆ ಮಾಡುತ್ತಿದೆ ಎಂದು ಕಾಂಗ್ರೆಸ್​ ಮೂಲಗಳು ಮಾಹಿತಿ ನೀಡಿವೆ.

ಇದನ್ನೂ ಓದಿ: ಶಂಕರಾಚಾರ್ಯರಂತೆ ರಾಹುಲ್​ ಗಾಂಧಿ ಕನ್ಯಾಕುಮಾರಿಯಿಂದ ಕಾಶ್ಮೀರಕ್ಕೆ ಹೆಜ್ಜೆ ಹಾಕುತ್ತಿದ್ದಾರೆ: ಜೈರಾಮ್​ ರಮೇಶ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.