ETV Bharat / bharat

ಹವಾಲಾ ದಂಧೆ ನಡೆಸುತ್ತಿದ್ದವರ ಮೇಲೆ ದಾಳಿ.. ₹4.2 ಕೋಟಿ ವಶಕ್ಕೆ ಪಡೆದ ಪೊಲೀಸ್

Police raids on hawala traders: ಹವಾಲಾ ದಂಧೆ ನಡೆಸುತ್ತಿದ್ದವರ ಮೇಲೆ ಪೊಲೀಸ್ ತಂಡಗಳು ದಾಳಿ ನಡೆಸಿದ್ದು, ದಾಖಲೆಯ 4.2 ಕೋಟಿ ರೂ. ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

Nagpur Raid
Nagpur Raid
author img

By

Published : Mar 5, 2022, 3:05 PM IST

ನಾಗ್ಪುರ(ಮಹಾರಾಷ್ಟ್ರ): ಹವಾಲಾ ದಂಧೆಕೋರರ ಮೇಲೆ ದಾಳಿ ನಡೆಸಿರುವ ಪೊಲೀಸರು 4.2 ಕೋಟಿ ರೂ. ವಶಕ್ಕೆ ಪಡೆದಿದ್ದಾರೆ. ನಾಗ್ಪುರ ಪೊಲೀಸ್​​ ಇಲಾಖೆಯ ಮೂರು ಪೊಲೀಸ್ ತಂಡಗಳು ಸುರೇಶ್ ವಡಾಲಿಯಾ, ವರ್ಧಮಾನ್​ ಮತ್ತು ಶಿವಕುಮಾರ್ ಎಂಬುವವರ ಮೇಲೆ ದಾಳಿ ನಡೆಸಿದ್ದಾಗಿ ತಿಳಿದು ಬಂದಿದೆ.

Nagpur Raid
ಹವಾಲಾ ವ್ಯಾಪಾರಿಗಳ ಮೇಲೆ ದಾಳಿ

ಪೊಲೀಸ್ ಆಯುಕ್ತ ಅಮಿತೇಶ್ ಕುಮಾರ್ ಆದೇಶದ ಮೇರೆಗೆ ಉಪ ಪೊಲೀಸ್​ ಆಯುಕ್ತ ಗಜಾನನ ರಾಜಮಾನೆ ಮತ್ತು ಸಹಾಯಕ ಪೊಲೀಸ್ ಆಯುಕ್ತ ಸುರ್ವೆ ನೇತೃತ್ವದಲ್ಲಿ ಈ ದಾಳಿ ನಡೆಸಲಾಗಿದೆ.

ಇದನ್ನೂ ಓದಿರಿ: ಕಾಶಿ ಕ್ಷೇತ್ರದಲ್ಲಿ ಪೂಜೆ ಸಲ್ಲಿಸಿದ ಅಖಿಲೇಶ್ ಯಾದವ್.. ಎಸ್‌ಪಿ ಗೆಲುವಿಗಾಗಿ ಪ್ರಾರ್ಥನೆ

ನಾಗ್ಪುರ ನಗರದ ಕೊತ್ವಾಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಅಪಾರ್ಟ್​ಮೆಂಟ್​​ನಲ್ಲಿ ದೊಡ್ಟ ಮಟ್ಟದ ಹವಾಲಾ ದಂಧೆ ನಡೆದಿರುವ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿತ್ತು. ಇದರ ಬೆನ್ನಲ್ಲೇ ದಾಳಿ ನಡೆಸಿ, ಇಷ್ಟೊಂದು ಮಟ್ಟದ ಹಣ ವಶಕ್ಕೆ ಪಡೆಯಲಾಗಿದೆ. ಜೊತೆಗೆ ಮೂವರು ವ್ಯಾಪಾರಿಗಳ ಬಂಧಿಸಲಾಗಿದ್ದು, ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.