ಸಾತ್ಪುರ(ಮಧ್ಯಪ್ರದೇಶ): ಟಿವಿ, ಸಿನಿಮಾಗಳಲ್ಲಿ ಅಥವಾ ಪುಸ್ತಕಗಳಲ್ಲಿ ನಾವು 'ನಾಗಲೋಕ'ದ ಬಗ್ಗೆ ನೋಡಿರುತ್ತೇವೆ ಇಲ್ಲವೇ ಓದಿರುತ್ತೇವೆ. ನಮ್ಮ ಮನಸ್ಸಿನಲ್ಲಿ ಈ ಪ್ರದೇಶ ಒಂದು ಕಾಲ್ಪನಿಕ ಸ್ಥಳವಾಗಿ ನೆಲೆಗೊಳ್ಳುವುದು ಸಹಜ. ಆದರೆ, ನಿಜಕ್ಕೂ ನಾಗಲೋಕ ಇದೆಯೇ? ಅಲ್ಲಿ ನಾವು ಹೋಗಬಹುದೇ?. ಇಂಥ ಅನೇಕ ಪ್ರಶ್ನೆಗಳು ಜನಮಾನಸದಲ್ಲಿವೆ. ಇಂಥಾ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.!
![ನಾಗಲೋಕಕ್ಕೆ ತೆರಳಿ ಪೂಜೆ ಸಲ್ಲಿಸುವ ಭಕ್ತರು](https://etvbharatimages.akamaized.net/etvbharat/prod-images/15982050_kkk.jpeg)
ನಾಗಲೋಕದೊಂದಿಗೆ ನೇರ ಸಂಪರ್ಕ ಹೊಂದಿರುವ ಪುರಾಣ ಪ್ರಸಿದ್ಧ ಸ್ಥಳಗಳು ಭಾರತದ ನಾನಾ ಕಡೆಗಳಲ್ಲಿವೆ. ದೇಶದಲ್ಲಿ ನಾಗಲೋಕ ಸಂಧಿಸುವ ಐದು ಪ್ರಮುಖ ಮಾರ್ಗಗಳಿವೆ. ಅವು ನೇರವಾಗಿ ನಾಗಲೋಕಕ್ಕೆ ಭಕ್ತರನ್ನು ಕರೆದೊಯ್ಯುತ್ತವೆ. ಇಂಥ ಮಾರ್ಗಗಳನ್ನು ತಲುಪಲು ನೀವು ದಟ್ಟವಾದ ಕಾಡುಗಳು ಮತ್ತು ಅಪಾಯಕಾರಿ ಹಾದಿಯಲ್ಲಿ ಕ್ರಮಿಸಬೇಕು.
![ಮಧ್ಯಪ್ರದೇಶದ ಸಾತ್ಪುರದಲ್ಲಿ ನಾಗಚಂದ್ರೇಶ್ವರ ಎಂಬ ದೇವಾಲಯ](https://etvbharatimages.akamaized.net/etvbharat/prod-images/15982050_ppp.jpeg)
ಇಂಥವುಗಳ ಪೈಕಿ ಮಧ್ಯಪ್ರದೇಶದ ಸಾತ್ಪುರ ಎಂಬಲ್ಲಿಯೂ ಒಂದು ಮಾರ್ಗವಿದೆ. ಇದು ದಟ್ಟ ಕಾನನದ ಮೂಲಕ ನಿಗೂಢವೆಂಬ ನಾಗಲೋಕಕ್ಕೆ ತೆರಳುತ್ತದೆ. ಇಲ್ಲಿಗೆ ತಲುಪಲು ಅನೇಕ ಅಪಾಯಕಾರಿ ಪರ್ವತಗಳನ್ನೇರಬೇಕು ಮತ್ತು ನೀರಿನಲ್ಲಿ ಮುಳುಗಿರುವ ಅರಣ್ಯರಾಶಿಗಳ ಮೂಲಕವೂ ಹಾದು ಹೋಗಬೇಕು. ವರ್ಷದಲ್ಲಿ ಒಂದು ಅಥವಾ ಎರಡು ದಿನ ಮಾತ್ರ ಇದರ ಬಾಗಿಲು ತೆರೆದಿರುತ್ತದಂತೆ.
![ಅನೇಕ ಕಡಿದಾದ ಹಾದಿಗಳಲ್ಲಿ ರಸ್ತೆ](https://etvbharatimages.akamaized.net/etvbharat/prod-images/15982050_gjgjg.jpeg)
![ನಾಗಲೋಕಕ್ಕೆ ತೆರಳಿ ಪೂಜೆ ಸಲ್ಲಿಸುವ ಭಕ್ತರು](https://etvbharatimages.akamaized.net/etvbharat/prod-images/15982050_kkk.jpeg)
ಸಾತ್ಪುರದಲ್ಲಿರುವ ನಾಗಚಂದ್ರೇಶ್ವರ ದೇವಾಲಯದಲ್ಲಿ ಸಾವಿರಾರು ಹಾವುಗಳ ದರ್ಶನವಾಗುತ್ತದೆ. ಆದರೆ, ಅವು ಮನುಷ್ಯನಿಗೆ ಯಾವುದೇ ರೀತಿಯ ತೊಂದರೆ ನೀಡುವಂಥವಲ್ಲ. ಈ ದೇವಾಲಯಕ್ಕೆ ತೆರಳುವ ಮೊದಲು ಭಕ್ತರು ಆರೋಗ್ಯದ ಬಗ್ಗೆ ವಿಶೇಷ ಕಾಳಜಿವಹಿಸಬೇಕಿದೆ. ಏಕೆಂದರೆ ರಸ್ತೆಗಳು ಅತ್ಯಂತ ದುರ್ಗಮವಾಗಿವೆ. ಕೆಲವು ಪ್ರದೇಶಗಳಲ್ಲಿ ಆಮ್ಲಜನಕದ ಪ್ರಮಾಣವೂ ತುಂಬಾ ಕಡಿಮೆ.
![Amazing Naglog Temple](https://etvbharatimages.akamaized.net/etvbharat/prod-images/15982050_ldldld.jpeg)
ದೇಶದ ಅತ್ಯಂತ ಹಳೆಯ ದೇವಾಲಯವೆಂದು ಇದನ್ನು ಪರಿಗಣಿಸಲಾಗಿದೆ. ಇಂಥದ್ದೊಂದು ರಹಸ್ಯ ಪವಿತ್ರ ತಾಣ ತಲುಪಲು ಜನರು ಹಿಂದೇಟು ಹಾಕುತ್ತಾರೆ. ಆದರೆ, ಇಲ್ಲಿಗೆ ಭೇಟಿ ನೀಡುವ ಭಕ್ತರ ಎಲ್ಲ ಆಸೆಗಳು ಈಡೇರುತ್ತವೆ ಎಂಬುದು ಬಲವಾದ ನಂಬಿಕೆ. ಇಲ್ಲಿ ಕಾಲಿರಿಸಿ ದರ್ಶನ ಭಾಗ್ಯ ದೊರೆತರೆ ಕಾಳಸರ್ಪ ದೋಷ ನಿವಾರಣೆಯಾಗುತ್ತದಂತೆ. ನಾಗದ್ವಾರಕ್ಕೆ ಹೋಗುವ ದಾರಿಯಲ್ಲಿ ನಾಗಮಣಿಯೆಂಬ ದೇವಸ್ಥಾನವಿದೆ. ಇಲ್ಲಿಗೆ ಆಗಮಿಸುವ ಭಕ್ತರಿಗೆ ಅನೇಕ ಹಾವುಗಳು ಕಾಣಿಸಿಕೊಳ್ಳುತ್ತವೆ. ಇಲ್ಲಿಯವರೆಗೆ ಇವು ಭಕ್ತರಿಗೆ ಯಾವುದೇ ರೀತಿಯ ತೊಂದರೆ ಮಾಡಿಲ್ಲ ಎಂಬುದು ಈ ಸ್ಥಳದ ಮಹಿಮೆ ಎನ್ನುತ್ತಾರೆ ಭಕ್ತರು. ಇದೇ ಕಾರಣಕ್ಕೆ ನಾಗದೇವ ಸ್ವತಃ ತನ್ನ ಭಕ್ತರನ್ನು ರಕ್ಷಿಸುತ್ತಾನೆಂದು ನಂಬಿಕೊಂಡು ಬರಲಾಗುತ್ತಿದೆ.
![ನಾಗಲೋಕಕ್ಕೆ ತೆರಳಿ ಪೂಜೆ ಸಲ್ಲಿಸುವ ಭಕ್ತರು](https://etvbharatimages.akamaized.net/etvbharat/prod-images/15982050_ththh.jpeg)
ಕಡಿದಾದ ಬೆಟ್ಟ ಪ್ರದೇಶಗಳಲ್ಲಿ ಹುಲಿ, ಚಿರತೆ ಸೇರಿದಂತೆ ಅನೇಕ ಅಪಾಯಕಾರಿ ಪ್ರಾಣಿಗಳೂ ಕಾಣಸಿಗುತ್ತವೆ. ಇವುಗಳಿಂದ ತಪ್ಪಿಸಿಕೊಂಡು ಹೋಗುವುದು ಸವಾಲಿನ ಕೆಲಸವೂ ಹೌದು. ಇನ್ನೂ ವಿಶೇಷವೆಂದರೆ ಇಲ್ಲಿ 100 ರಿಂದ 150 ಅಡಿ ಆಳದ ಅನೇಕ ಗುಹೆಗಳೂ ಇವೆ.