ನವದೆಹಲಿ: ಈಶಾನ್ಯ ಭಾರತದ ನಾಗಾಲ್ಯಾಂಡ್ ಮತ್ತು ಮೇಘಾಲಯ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆಗೆ ಮತದಾನ ಆರಂಭವಾಗಿದೆ. ಇದಕ್ಕಾಗಿ ಅಧಿಕಾರಿಗಳು ಸಕಲ ಸಿದ್ಧತೆ ನಡೆಸಿದ್ದರು. ಈ ಎರಡು ರಾಜ್ಯಗಳು ತಲಾ 60 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿವೆ. ಆದರೆ, ನಾಗಾಲ್ಯಾಂಡ್‌ನಲ್ಲಿ ಒಂದು ಸ್ಥಾನ (ಅಕುಲುಟೊ) ಅವಿರೋಧವಾಗಿ ಚುನಾಯಿತವಾದರೆ, ಮೇಘಾಲಯದಲ್ಲಿ ಒಬ್ಬ ಅಭ್ಯರ್ಥಿ (ಸೋಹಿಯಾಂಗ್‌ಗೆ) ನಿಧನರಾಗಿದ್ದಾರೆ. ಇದರ ಫಲವಾಗಿ ಇಂದು ಎರಡೂ ರಾಜ್ಯಗಳ 59 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ.
-
Voting for #MeghalayaElections & #NagalandElections begins
— ANI (@ANI) February 27, 2023 " class="align-text-top noRightClick twitterSection" data="
Polling being held on 59 of the 60 seats in both states - in Nagaland, BJP candidate Kazheto Kinimi from Akuluto won unopposed; in Meghalaya, election to Sohiong deferred following the demise of UDP candidate HDR Lyngdoh pic.twitter.com/xK9anLXnD5
">Voting for #MeghalayaElections & #NagalandElections begins
— ANI (@ANI) February 27, 2023
Polling being held on 59 of the 60 seats in both states - in Nagaland, BJP candidate Kazheto Kinimi from Akuluto won unopposed; in Meghalaya, election to Sohiong deferred following the demise of UDP candidate HDR Lyngdoh pic.twitter.com/xK9anLXnD5Voting for #MeghalayaElections & #NagalandElections begins
— ANI (@ANI) February 27, 2023
Polling being held on 59 of the 60 seats in both states - in Nagaland, BJP candidate Kazheto Kinimi from Akuluto won unopposed; in Meghalaya, election to Sohiong deferred following the demise of UDP candidate HDR Lyngdoh pic.twitter.com/xK9anLXnD5
ನಾಗಾಲ್ಯಾಂಡ್‌ನಲ್ಲಿ ಒಟ್ಟು 183 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಈ ರಾಜ್ಯದಲ್ಲಿ ಸುಮಾರು 13 ಲಕ್ಷ ಮತದಾರರಿದ್ದಾರೆ. ಅವರಿಗಾಗಿ 2,291 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ರಾಜ್ಯದಲ್ಲಿ ಆಡಳಿತಾರೂಢ ನ್ಯಾಷನಲಿಸ್ಟ್ ಡೆಮಾಕ್ರಟಿಕ್ ಪ್ರೋಗ್ರೆಸಿವ್ ಪಾರ್ಟಿ (ಎನ್‌ಡಿಪಿಪಿ) ಮತ್ತು ಬಿಜೆಪಿ ಮೈತ್ರಿ ಮಾಡಿಕೊಂಡಿವೆ. ಅವರು ಕಾಂಗ್ರೆಸ್, ಎನ್‌ಪಿಪಿ, ಎನ್‌ಸಿಪಿ ಮತ್ತು ಜೆಡಿಯುಗಳಿಂದ ತೀವ್ರ ಪೈಪೋಟಿ ಎದುರಿಸುತ್ತಿದ್ದಾರೆ.
ಮತ್ತೊಂದೆಡೆ- 369 ಅಭ್ಯರ್ಥಿಗಳು ಮೇಘಾಲಯದಲ್ಲಿ ತಮ್ಮ ಅದೃಷ್ಟ ಪರೀಕ್ಷೆ ನಡೆಸುತ್ತಿದ್ದಾರೆ. ರಾಜ್ಯದಲ್ಲಿ 21.6 ಲಕ್ಷಕ್ಕೂ ಹೆಚ್ಚು ಮತದಾರರಿದ್ದಾರೆ. ಅವರಿಗಾಗಿ 3,419 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಆಡಳಿತಾರೂಢ ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್‌ಪಿಪಿ), ಪ್ರತಿಪಕ್ಷ ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.
-
Voting for Assembly elections in Meghalaya, Nagaland today
— ANI Digital (@ani_digital) February 27, 2023 " class="align-text-top noRightClick twitterSection" data="
Read @ANI Story | https://t.co/KgaL3fDlk5#Nagaland #Meghalaya #NagalandElection2023 #MeghalayaElections pic.twitter.com/s0I7wO6Y9L
">Voting for Assembly elections in Meghalaya, Nagaland today
— ANI Digital (@ani_digital) February 27, 2023
Read @ANI Story | https://t.co/KgaL3fDlk5#Nagaland #Meghalaya #NagalandElection2023 #MeghalayaElections pic.twitter.com/s0I7wO6Y9LVoting for Assembly elections in Meghalaya, Nagaland today
— ANI Digital (@ani_digital) February 27, 2023
Read @ANI Story | https://t.co/KgaL3fDlk5#Nagaland #Meghalaya #NagalandElection2023 #MeghalayaElections pic.twitter.com/s0I7wO6Y9L
35 ಮತದಾರರಿಗಾಗಿ..: ಮೇಘಾಲಯದ ಹಲವು ಭಾಗಗಳಲ್ಲಿ ಅಧಿಕಾರಿಗಳು ತೀವ್ರ ತೊಂದರೆಗಳನ್ನು ನಿವಾರಿಸಿಕೊಂಡು ಮತಗಟ್ಟೆಗಳನ್ನು ತಲುಪಿದ್ದಾರೆ. ಅನೇಕ ಕಡೆ ಹೊಳೆ, ನದಿ, ಬೆಟ್ಟ, ಕಣಿವೆಗಳನ್ನು ದಾಟಬೇಕಿತ್ತು. ಗಂಟೆಗಟ್ಟಲೆ ನಡೆಯಬೇಕಿತ್ತು. ಅಮ್ಲಾರೆಮ್ ಕ್ಷೇತ್ರದ ವ್ಯಾಪ್ತಿಯ ಕಾಮ್ಸಿಂಗ್ ಮತಗಟ್ಟೆಯಲ್ಲಿ 35 ಮತದಾರರಿದ್ದಾರೆ. ಚುನಾವಣಾ ಸಿಬ್ಬಂದಿ ದೋಣಿಯ ಸಹಾಯದಿಂದ ನದಿ ದಾಟಿ ಅಲ್ಲಿಗೆ ತಲುಪಿದ್ದಾರೆ. ಮತದಾನ ಆರಂಭವಾಗಿದೆ..
ಇಂದು ತಮಿಳುನಾಡಿನ ಈರೋಡ್ನಲ್ಲಿ ಉಪ ಚುನಾವಣೆ ನಡೆಯಲಿದ್ದು, ಮತದಾನಕ್ಕೆ ಎಲ್ಲ ಸಿದ್ಧತೆಗಳು ಪೂರ್ಣಗೊಂಡಿದ್ದು, 7 ಗಂಟೆಯಿಂದ ಮತದಾನ ಆರಂಭವಾಗಲಿದೆ. ಈ ಚುನಾವಣೆ ತೀವ್ರ ಕುತೂಹಲ ಕೆರಳಿಸಿದ್ದು, ಈರೋಡ್ ಮತದಾರರು ಅಭ್ಯರ್ಥಿಗಳ ಹಣೆ ಬರಹವನ್ನು ಇಂದು ಬರೆಯಲಿದ್ದಾರೆ.
ಓದಿ: ಕಾಂಗ್ರೆಸ್ನಲ್ಲಿ ರಾಷ್ಟ್ರೀಯ ನಾಯಕರಿಲ್ಲ, ನಮ್ಮ ಪಕ್ಷದಲ್ಲಿ ಇದ್ದಾರೆ: ಪ್ರಹ್ಲಾದ್ ಜೋಶಿ
ತಮಿಳುನಾಡಿನಲ್ಲಿ ಉಪಚುನಾವಣೆಗೆ ಮತದಾನ ಆರಂಭ: ಈರೋಡ್ ಪೂರ್ವ ಉಪಚುನಾವಣೆಯಲ್ಲಿ ಮತದಾನ ಆರಂಭವಾಗಿದೆ. ಮಾಜಿ ಶಾಸಕ ಇ.ವಿ.ರಾ ತಿರುಮಗನ್ ನಿಧನದ ಹಿನ್ನೆಲೆಯಲ್ಲಿ ಈರೋಡ್ ಪೂರ್ವ ಕ್ಷೇತ್ರಕ್ಕೆ ಚುನಾವಣಾ ಆಯೋಗ ಉಪಚುನಾವಣೆ ಘೋಷಿಸಿತ್ತು. ಜನವರಿ 31ರಂದು ನಾಮಪತ್ರ ಸಲ್ಲಿಕೆ ಆರಂಭವಾಗಿದ್ದು, ಫೆಬ್ರವರಿ 7ಕ್ಕೆ ಮುಕ್ತಾಯವಾಗಿದೆ. ಒಟ್ಟಾರೆ ಉಪಚುನಾವಣೆಯಲ್ಲಿ 77 ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಇಂದು ಮತದಾನ ನಡೆಯುತ್ತಿದ್ದು, ಬೆಳಗ್ಗೆ 7 ಗಂಟೆಯಿಂದಲೇ ಮತದಾನ ಆರಂಭವಾಗಿದೆ.
-
Tamil Nadu| Erode (East)bypolls: Mock poll begins pic.twitter.com/V9eK0Ixvo7
— ANI (@ANI) February 27, 2023 " class="align-text-top noRightClick twitterSection" data="
">Tamil Nadu| Erode (East)bypolls: Mock poll begins pic.twitter.com/V9eK0Ixvo7
— ANI (@ANI) February 27, 2023Tamil Nadu| Erode (East)bypolls: Mock poll begins pic.twitter.com/V9eK0Ixvo7
— ANI (@ANI) February 27, 2023
ತ್ರಿಪುರಾದಲ್ಲಿ 60 ಸ್ಥಾನಗಳಿಗೆ 86.10 ರಷ್ಟು ಮತದಾನ: ಬಿಗಿ ಭದ್ರತೆಯ ನಡುವೆ ತ್ರಿಪುರಾ ವಿಧಾನಸಭೆಯ ಎಲ್ಲಾ 60 ಸ್ಥಾನಗಳಿಗೆ ಗುರುವಾರ (ಫೆಬ್ರವರಿ 16) ಶೇ.86.10ರಷ್ಟು ಮತದಾನವಾಗಿದೆ. ಬೆಳಗ್ಗೆ ಏಳು ಗಂಟೆಗೆ ಮತದಾನ ಆರಂಭವಾಗುವ ಮುನ್ನವೇ ಹಲವು ಬೂತ್‌ಗಳಲ್ಲಿ ಜನ ಜಮಾಯಿಸಿದ್ದರು. ರಾಜ್ಯದಲ್ಲಿ ಒಟ್ಟು 259 ಅಭ್ಯರ್ಥಿಗಳು ಕಣದಲ್ಲಿದ್ದರು. ರಾಜ್ಯದ 3,337 ಮತಗಟ್ಟೆಗಳಲ್ಲಿ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಈ ಪೈಕಿ 1,100 ಮತಗಟ್ಟೆಗಳನ್ನು ಸೂಕ್ಷ್ಮ ಹಾಗೂ 28 ಮತಗಟ್ಟೆಗಳನ್ನು ಅತಿ ಸೂಕ್ಷ್ಮ ಎಂದು ಘೋಷಿಸಲಾಗಿತ್ತು. ಅದೇ ಸಮಯದಲ್ಲಿ ಮಹಿಳಾ ಚುನಾವಣಾ ಕಾರ್ಯಕರ್ತರು 97 ಬೂತ್‌ಗಳ ನಿರ್ವಹಣೆಯನ್ನು ವಹಿಸಿಕೊಂಡಿದ್ದರು. ಸಂಜೆ ವೇಳೆಗೆ ಒಟ್ಟು ಶೇ.86.10ರಷ್ಟು ಮತದಾನವಾಗಿದೆ ಎಂದು ಚುನಾವಣಾ ಅಧಿಕಾರಿಗಳು ಘೋಷಿಸಿದ್ದರು.
ಮಹಾರಾಷ್ಟ್ರ ಉಪಚುನಾವಣೆ: ಮಹಾರಾಷ್ಟ್ರದ ಚಿಂಚ್‌ವಾಡ್ ಮತ್ತು ಕಸ್ಬಾ ವಿಧಾನಸಭಾ ಕ್ಷೇತ್ರಗಳಿಗೆ ಭಾನುವಾರ ನಡೆದ ಉಪಚುನಾವಣೆಯಲ್ಲಿ ಶೇ.45 ಮತ್ತು ಶೇ.50ರಷ್ಟು ಮತದಾನವಾಗಿದೆ. ಮಾರ್ಚ್ 2 ರಂದು ಮತ ಎಣಿಕೆ ನಡೆಯಲಿದೆ. ಭಾರತೀಯ ಜನತಾ ಪಕ್ಷದ (ಬಿಜೆಪಿ) ಶಾಸಕರಾದ ಮುಕ್ತಾ ತಿಲಕ್ ಮತ್ತು ಲಕ್ಷ್ಮಣ್ ಜಗತಾಪ್ ಅವರ ನಿಧನದಿಂದಾಗಿ ಕಸ್ಬಾ ಮತ್ತು ಚಿಂಚ್‌ವಾಡ್ ಸ್ಥಾನಗಳಿಗೆ ಉಪಚುನಾವಣೆ ನಡೆಸುವುದು ಅನಿವಾರ್ಯವಾಗಿತ್ತು.