ನರಸರಾವ್ ಪೇಟೆ (ಆಂಧ್ರಪ್ರದೇಶ): ಕಳೆದ 14 ತಿಂಗಳಿನಿಂದ ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬರು ಕೊಲೆಯಾಗಿರುವ ಘಟನೆ ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆ ಬಾಪುಲಪಾಡು ಮಂಡಲದ ಬೊಮ್ಮುಲೂರು ಉಪನಗರದಲ್ಲಿ ನಡೆದಿದೆ.
ಪಲ್ನಾಡು ಜಿಲ್ಲೆಯ ನಾದೆಂಡ್ಲ ಮಂಡಲದ ಗೊರಿಜವೋಲುವಿನ ಜಂಗಮ ಚಂಟಿ (28) ಎಂಬ ವ್ಯಕ್ತಿ ಕಳೆದ ವರ್ಷ ಸೆ.16ರಂದು ನಾಪತ್ತೆಯಾಗಿದ್ದರು. ಆತನ ಅಣ್ಣ ಬಾಜಿ ದೂರಿನ ಮೇರೆಗೆ ಅದೇ ವರ್ಷ ಅಕ್ಟೋಬರ್ 24 ರಂದು ನಾದೆಂಡ್ಲ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ಬಾಜಿಯೂ ಸಹ ತನ್ನ ಸಹೋದರನನ್ನು ಹುಡುಕತೊಡಗಿದ ಎಂದು ಪೊಲೀಸರು ತಿಳಿಸಿದ್ದಾರೆ.
ನರಸರಾವ್ ಪೇಟೆ ಮಂಡಲದ ಕೇಸನುಪಲ್ಲಿ ನಿವಾಸಿ ರವಿಪತಿ ವೆಂಕಣ್ಣ, ದಾಗೇಪಲ್ಲಿಯ ನಾಗೂರ್ ಅಲಿಯಾಸ್ ಬಿಲ್ಲ ಎಂಬಾತನೊಂದಿಗೆ ಸೇರಿ ಚಂಟಿ ಕಳ್ಳತನ ಮಾಡುತ್ತಿದ್ದ ಎನ್ನಲಾಗ್ತಿದೆ. ಕದ್ದ ಚಿನ್ನವನ್ನು ಮಾರಲು ಜೊನ್ನಲಗಡ್ಡ ನಿವಾಸಿ ಹಾಗೂ ನರಸರಪೇಟೆಯ ಚಿನ್ನಾಭರಣ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಸಿಲಿವೇರು ರಾಮಾಂಜನೇಯು ಸಹಾಯ ಪಡೆಯುತ್ತಿದ್ದರು ಎಂಬ ಆರೋಪ ಮಾಡಲಾಗಿದೆ. ಈ ವರ್ಷ ಏಪ್ರಿಲ್ 22 ರಂದು ಬಾಜಿ, ರಾಮಾಂಜನೇಯನನ್ನು ಅಪಹರಿಸಿದ್ದನು. ನಂತರ ನಾದೆಂಡ್ಲ-ಯಡ್ಲಪಾಡು ನಡುವಿನ ಹೊಳೆಯಲ್ಲಿ ಆತನ ಶವ ಸಿಕ್ಕಿತ್ತು.
ಬಾಜಿ ಮೇಲೆ ಹತ್ಯೆ ಯತ್ನ: ಇತ್ತೀಚೆಗಷ್ಟೇ ರಾಮಾಂಜನೇಯುಲು ಕೊಲೆ ಪ್ರಕರಣದಲ್ಲಿ ನರಸರಾವ್ ಪೇಟೆ ಒಂದನೇ ಠಾಣೆಯಿಂದ ವಾಪಸಾಗುತ್ತಿದ್ದ ಬಾಜಿ ಎಂಬಾತನ ಮೇಲೆ ಹತ್ಯೆ ಯತ್ನ ನಡೆದಿತ್ತು. ಗಂಭೀರ ಗಾಯಗಳೊಂದಿಗೆ ಬದುಕುಳಿದ ಆತ ಪೊಲೀಸರಿಗೆ ದೂರು ನೀಡಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರವಿಪತಿ ವೆಂಕಣ್ಣ, ಬಿಲ್ಲ ಹಾಗೂ ಕೆಲವರನ್ನು ಪೊಲೀಸರು ಬಂಧಿಸಿದ್ದರು. ಅವರ ತನಿಖೆಯಲ್ಲಿ ಹಲವು ಕುತೂಹಲಕಾರಿ ಸಂಗತಿಗಳು ಬೆಳಕಿಗೆ ಬಂದಿವೆ.
ವೆಂಕಣ್ಣ ಮತ್ತು ಬಿಲ್ಲ ಸೇರಿ ಕೇರಳದಲ್ಲಿ ಸೆಪ್ಟೆಂಬರ್‌ನಲ್ಲಿ ಕದ್ದ ಚಿನ್ನಾಭರಣಗಳನ್ನು ಮಾರಾಟ ಮಾಡುವ ಜವಾಬ್ದಾರಿಯನ್ನು ಚಂಟಿಗೆ ವಹಿಸಿದ್ದರು. ನಂತರ ಹಣದ ಬಗ್ಗೆ ಕೇಳಿದಾಗ ಆತ ಹೇಳದಾಗ ಸಿಟ್ಟಿಗೆದ್ದರು. ಬಳಿಕ ಚಂಟಿಯನ್ನು ವಿಜಯವಾಡದ ಲಾಡ್ಜ್‌ನಲ್ಲಿ ಬಂಧಿಸಿ ಚಿತ್ರಹಿಂಸೆ ನೀಡಿ ಸಾಯಿಸಿದ್ದಾರೆ ಎನ್ನಲಾಗ್ತಿದೆ. ಅಲ್ಲದೇ ಕೃಷ್ಣಾ ಜಿಲ್ಲೆಯ ಬಾಪುಲಪಾಡು ಮಂಡಲದ ಬೊಮ್ಮುಲೂರು ಟೋಲ್‌ಗೇಟ್ ಬಳಿ ಮೃತದೇಹವನ್ನು ಹೂತಾಕಿದ್ದಾರೆ. ಏಪ್ರಿಲ್ 22ರಂದು ರಾಮಾಂಜನೇಯರ ಹತ್ಯೆಯಾದ ತಕ್ಷಣ, ಎಲ್ಲಿ ಬಾಜಿ ಇವರನ್ನು ಕೊಂದುಬಿಡುತ್ತಾನೋ ಎಂಬ ಭಯದಿಂದ ಆತನನ್ನು ಕೊಲ್ಲಲು ಯತ್ನಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಮರ್ಡರ್ ಮಾಡಿ ಕಾರಿನಲ್ಲೇ ಪೊಲೀಸ್ ಠಾಣೆಗೆ ಶವ ತಂದ ಸ್ನೇಹಿತ...!
ಆರೋಪಿ ನೀಡಿದ ಮಾಹಿತಿ ಮೇರೆಗೆ ನರಸರಾವ್‌ಪೇಟೆ ಡಿಎಸ್‌ಪಿ ಜಿ. ವಿಜಯಭಾಸ್ಕರ ರಾವ್, ಚಿಲಕಲೂರಿಪೇಟೆ ಗ್ರಾಮಾಂತರ ಸಿಐ ವೈ.ಅಚ್ಚಯ್ಯ, ಎಸ್‌ಎಸ್‌ಐ ಎ.ಭಾಸ್ಕರ್, ವಿ.ಬಾಲಕೃಷ್ಣ ನೇತೃತ್ವದ ಪೊಲೀಸ್ ತಂಡ ಬೊಮ್ಮೂಲೂರಿಗೆ ಆಗಮಿಸಿ ಮೃತದೇಹಕ್ಕಾಗಿ ಹುಡುಕಾಟ ಆರಂಭಿಸಿದೆ. ಬಳಿಕ ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ.
ಕುಟುಂಬ ಸದಸ್ಯರು ಮೃತದೇಹವನ್ನು ಮಚ್ಚೆ, ತಾಯಿತ ಮತ್ತು ಇತರ ಕೆಲವು ಅವಶೇಷಗಳೊಂದಿಗೆ ಗುರುತಿಸಿದ್ದಾರೆ. ವೈದ್ಯರು ಶವಪರೀಕ್ಷೆ ನಡೆಸಿ, ಡಿಎನ್ಎ ಪರೀಕ್ಷೆಗಾಗಿ ಮಾದರಿಗಳನ್ನು ಸಂಗ್ರಹಿಸಿದ್ದಾರೆ. ಈ ಪ್ರಕರಣದಲ್ಲಿ ಈಗಾಗಲೇ ರವಿಪತಿ ವೆಂಕಣ್ಣ, ಬಿಲ್ಲ ಹಾಗೂ ಮೂವರನ್ನು ಬಂಧಿಸಲಾಗಿದೆ ಎಂದು ನಾದೆಂಡ್ಲ ಎಸ್‌ಐ ಭಾಸ್ಕರ್ ತಿಳಿಸಿದ್ದಾರೆ.