ಕೋಲ್ಕತಾ(ಪಶ್ಚಿಮ ಬಂಗಾಳ): ವಿಧಾನಸಭಾ ಚುನಾವಣೆಗೆ ಹಿನ್ನೆಲೆ ಸಾರ್ವಜನಿಕರ ಬೆಂಬಲವನ್ನು ಬೂಸ್ಟ್ ಮಾಡಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಇಂದು ಕೋಲ್ಕತ್ತಾಗೆ ಆಗಮಿಸಿದ್ದು, 'ಬಿಜೆಪಿ ಪರಿವರ್ತನ ಯಾತ್ರೆ'ಯನ್ನು ನಬಾದ್‌ವಿಪ್ ನೈಡಾ ಜಿಲ್ಲೆಯಿಂದ ಪ್ರಾರಂಭಿಸಲು ಸಕಲ ರೀತಿಯಲ್ಲೂ ಸಜ್ಜಾಗಿದೆ.
ಡಿಸೆಂಬರ್ 10 ರಂದು ಕೋಲ್ಕತ್ತಾದಿಂದ ಡೈಮಂಡ್ ಹಾರ್ಬರ್‌ಗೆ ಪ್ರಯಾಣಿಸುವಾಗ ತನ್ನ ಬೆಂಗಾವಲು ಮೇಲೆ ದಾಳಿ ನಡೆಸಿದ ನಂತರ, ನಡ್ಡಾ ಇಂದು ರಾಜ್ಯಕ್ಕೆ ಮಾಡಿದ ಎರಡನೇ ಭೇಟಿಯಾಗಿದೆ. ಇದಕ್ಕೂ ಮೊದಲು ಅವರು ಜನವರಿ 9 ರಂದು ರಾಜ್ಯಕ್ಕೆ ಭೇಟಿ ನೀಡಿ, ತಮ್ಮ ಪಕ್ಷದ ಮನೆ-ಮನೆಗೆ ಅಕ್ಕಿ ಸಂಗ್ರಹ ಕಾರ್ಯಕ್ರಮ ಪ್ರಾರಂಭಿಸಿ, ರೈತರನ್ನು ಸೆಳೆಯುವಲ್ಲಿ ಶ್ರಮಿಸಿದ್ದರು.
-
Schedule of BJP National President Shri @JPNadda's public programs on 6th February 2021 in West Bengal.
— BJP (@BJP4India) February 5, 2021 " class="align-text-top noRightClick twitterSection" data="
Watch on
• https://t.co/KrGm5idRUX
• https://t.co/vpP0MInUi4
• https://t.co/lcXkSnNPDn
• https://t.co/jtwD1z6SKE pic.twitter.com/jfoBRX1gjG
">Schedule of BJP National President Shri @JPNadda's public programs on 6th February 2021 in West Bengal.
— BJP (@BJP4India) February 5, 2021
Watch on
• https://t.co/KrGm5idRUX
• https://t.co/vpP0MInUi4
• https://t.co/lcXkSnNPDn
• https://t.co/jtwD1z6SKE pic.twitter.com/jfoBRX1gjGSchedule of BJP National President Shri @JPNadda's public programs on 6th February 2021 in West Bengal.
— BJP (@BJP4India) February 5, 2021
Watch on
• https://t.co/KrGm5idRUX
• https://t.co/vpP0MInUi4
• https://t.co/lcXkSnNPDn
• https://t.co/jtwD1z6SKE pic.twitter.com/jfoBRX1gjG
ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ಮುಕುಲ್ ರಾಯ್ ಹಾಗೂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗಿಯ ನಡ್ಡಾಗೆ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು. 15 ನೇ ಶತಮಾನದ ಸಂತ ಚೈತನ್ಯ ಮಹಾಪ್ರಭು ಅವರ ಜನ್ಮಸ್ಥಳ ನಾಡಿಯಾ ಜಿಲ್ಲೆಯ ನಬಾದ್‌ವಿಪ್‌ನಿಂದ ನಡ್ಡಾ ಶನಿವಾರ 'ಪರಿವರ್ತನ ಯಾತ್ರೆಯನ್ನು' ಪ್ರಾರಂಭಿಸಲಿದ್ದಾರೆ ಎಂದು ಕೇಸರಿ ಪಡೆಯ ಮೂಲಗಳು ತಿಳಿಸಿವೆ.
ಬಳಿಕ ಅವರು ನಬದ್ವೀಪದಿಂದ 'ಪರಿವರ್ತನ ಯಾತ್ರೆ' ಎಂದೂ ಹೆಸರಿಸಿರುವ ರಥಯಾತ್ರೆಯನ್ನು ಪ್ರಾರಂಭಿಸಲಿದ್ದಾರೆ. ಇದೇ ಸಂದರ್ಭ ಅವರು ಮಾಲ್ಡಾದ ರೈತರ ಮನೆಯಲ್ಲಿ ಊಟ ಸೇವಿಸಲಿದ್ದಾರೆ. ಬಿಜೆಪಿಯ ಅಧಿಕೃತ ಟ್ವಿಟರ್ ಹ್ಯಾಂಡಲ್ ಫೆಬ್ರವರಿ 6 ರಂದು ಪಶ್ಚಿಮ ಬಂಗಾಳದಲ್ಲಿ ಜೆಪಿ ನಡ್ಡಾ ಅವರ ಸಾರ್ವಜನಿಕ ಕಾರ್ಯಕ್ರಮಗಳ ವೇಳಾಪಟ್ಟಿಯನ್ನು ಪೋಸ್ಟ್ ಮಾಡಿದೆ.
ಇಂದು ನಾಡಿಯಾದಿಂದ ಪ್ರಾರಂಭವಾಗಲಿರುವ ಒಂದು ತಿಂಗಳ ಅವಧಿಯ ಈ ಅಭಿಯಾನದಲ್ಲಿ ಹಲವಾರು ಹಿರಿಯ ಬಿಜೆಪಿ ನಾಯಕರು ಪಶ್ಚಿಮ ಬಂಗಾಳಕ್ಕೆ ಆಗಮಿಸಲಿದ್ದಾರೆ.