ETV Bharat / bharat

2024ರ ಸಮರಕ್ಕೆ ಈಗಲೇ ಸಿದ್ಧವಾಯ್ತು ಬಿಜೆಪಿ ರಣತಂತ್ರ: ಕೊರೊನಾ ನಡುವೆಯೂ ದೇಶಾದ್ಯಂತ ನಡ್ಡಾ 100 ದಿನ ಪ್ರವಾಸ!

2024ರ ಸಾರ್ವತ್ರಿಕ ಚುನಾವಣೆಗಳಿಗೆ ಕಾರ್ಯತಂತ್ರ ರೂಪಿಸುವ ಕೆಲಸಕ್ಕೆ ಬೇರೆ ರಾಜ್ಯಗಳಲ್ಲಿ ಉಳಿದುಕೊಳ್ಳುವ ದಿನಗಳನ್ನು ಮತ್ತಷ್ಟು ವಿಸ್ತರಿಸಿದ್ದಾರೆ. 2019ರಲ್ಲಿ ಪಕ್ಷವು ಅಭೂತಪೂರ್ವ ಗೆಲುವು ಸಾಧಿಸಿದ ಬಳಿಕ 2024ರಲ್ಲಿ ಆ ಸ್ಥಾನಗಳನ್ನು ಹೇಗೆ ಗೆಲ್ಲುವುದು ಎಂಬುದರ ಕುರಿತು ಬಿಜೆಪಿ ಮುಖ್ಯಸ್ಥರ ಜತೆ ಶೀಘ್ರದಲ್ಲೇ ನಡ್ಡಾ ಚರ್ಚಿಸಲಿದ್ದಾರೆ.

Nadda
ನಡ್ಡಾ
author img

By

Published : Nov 14, 2020, 5:37 PM IST

ನವದೆಹಲಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ 2024ರ ಸಾರ್ವತ್ರಿಕ ಚುನಾವಣೆಗೆ ಸಿದ್ಧತೆ ಆರಂಭಿಸಿದ್ದು, ದೇಶಾದ್ಯಂತ 100 ದಿನಗಳ ಕಾಲ ಪ್ರವಾಸ ಕೈಗೊಂಡು ಪಕ್ಷ ಸಂಘಟನೆಗೆ ಸಜ್ಜಾಗುತ್ತಿದ್ದಾರೆ.

ದೊಡ್ಡ ವಿಜಯದ ಬಳಿಕ ವಿಶ್ರಾಂತಿ ಪಡೆಯದ ನಡ್ಡಾ, ಶೀಘ್ರದಲ್ಲೇ ದೇಶಾದ್ಯಂತ 100 ದಿನಗಳ ಕಾಲ ಸುದೀರ್ಘ 'ರಾಷ್ಟ್ರೀಯ ವಿಸ್ತೃತ್​ ಪ್ರವಾಸ' ಕೈಗೊಳ್ಳಲಿದ್ದಾರೆ.

2024ರ ಸಾರ್ವತ್ರಿಕ ಚುನಾವಣೆಗಳಿಗೆ ಕಾರ್ಯತಂತ್ರ ರೂಪಿಸುವ ಕೆಲಸಕ್ಕೆ ಬೇರೆ ರಾಜ್ಯಗಳಲ್ಲಿ ಉಳಿದುಕೊಳ್ಳುವ ದಿನಗಳನ್ನು ಮತ್ತಷ್ಟು ವಿಸ್ತರಿಸಿದ್ದಾರೆ. 2019ರಲ್ಲಿ ಪಕ್ಷವು ಅಭೂತಪೂರ್ವ ಗೆಲುವು ಸಾಧಿಸಿದ ಬಳಿಕ 2024ರಲ್ಲಿ ಆ ಸ್ಥಾನಗಳನ್ನು ಹೇಗೆ ಗೆಲ್ಲುವುದು ಎಂಬುದರ ಕುರಿತು ಬಿಜೆಪಿ ಮುಖ್ಯಸ್ಥರ ಜತೆ ಶೀಘ್ರದಲ್ಲೇ ಚರ್ಚಿಸಲಿದ್ದಾರೆ.

ಬಿಹಾರ ಚುನಾವಣೆಯಲ್ಲಿ ಜಯ ಗಳಿಸಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಮೆಚ್ಚುಗೆಗೆ ಪಾತ್ರರಾದ ನಡ್ಡಾ, ಪಕ್ಷದ ಸಾರ್ವಜನಿಕ ಪ್ರತಿನಿಧಿಗಳನ್ನು ಭೇಟಿ ಮಾಡುವುದು, ಹೊಸ ಸಂಭಾವ್ಯ ಘಟಗಳ ಬಗ್ಗೆ ಚರ್ಚೆ, ರಾಜ್ಯ ಸರ್ಕಾರಗಳ ಈಗಿನ ಅಧಿಕಾರ ಚಿತ್ರಣ ಸುಧಾರಿಸುವುದು, ನಾನಾ ಪ್ರಭಾವಿ ಗುಂಪುಗಳೊಂದಿಗೆ ಸಂವಹನ, ಕೇಡರ್‌ ಮಟ್ಟದಲ್ಲಿ ಪಕ್ಷದ ಸಿದ್ಧಾಂತದ ಬಗ್ಗೆ ಸ್ಪಷ್ಟತೆ ನೀಡುವುದು, ಪಕ್ಷದ ಹಿರಿಯ ಕಾರ್ಯಕರ್ತರು ಮತ್ತು ರಾಜ್ಯಗಳಲ್ಲಿನ ಮಿತ್ರ ಪಕ್ಷಗಳ ಜತೆ ಸಂವಾದ ನಡೆಸಲಿದ್ದಾರೆ.

ಕೋವಿಡ್​-19 ಹರಡುವಿಕೆ ಗಣನೆಗೆ ತೆಗೆದುಕೊಂಡು ವಿವಿಧ ರಾಜ್ಯಗಳ ಪ್ರವಾಸದ ಸಮಯದಲ್ಲಿ ದೊಡ್ಡ ಸಭಾಂಗಣದಲ್ಲಿ 200ಕ್ಕೂ ಹೆಚ್ಚು ಜನರನ್ನು ಒಟ್ಟುಗೂಡಿಸದಂತೆ ಮನವಿ ಮಾಡಿದ್ದಾರೆ. ತಾಪಮಾನ ತಪಾಸಣೆ ಯಂತ್ರ, ಸ್ಯಾನಿಟೈಸರ್ ಮತ್ತು ಕಡ್ಡಾಯ ಫೇಸ್ ಮಾಸ್ಕ್ ಧರಿಸಲು ಸೂಚಿಸಲಿದ್ದಾರೆ. ಶಾಲು, ಹೂಮಾಲೆ, ಉಡುಗೊರೆ ನೀಡುವ ಯಾವುದೇ ಕಾರ್ಯಕ್ರಮ ಇರಬಾರದು. ಸಭೆಯ ಪ್ರತಿಯೊಂದು ಅಂಶವನ್ನು ಉತ್ತಮವಾಗಿ ದಾಖಲಿಸಬೇಕು ಎಂದು ಉನ್ನತ ಮೂಲಗಳು ಕಾರ್ಯಸೂಚಿ ಬಗ್ಗೆ ತಿಳಿಸಿವೆ.

ರಾಜ್ಯಗಳನ್ನು ಎ, ಬಿ, ಸಿ ಮತ್ತು ಡಿ ವಿಭಾಗಗಳಲ್ಲಿ ವರ್ಗೀಕರಿಸಲಾಗಿದೆ. ವರ್ಗ ಎ ಎಂದರೆ ಬಿಜೆಪಿ ಸರ್ಕಾರ ಇರುವ ನಾಗಾಲ್ಯಾಂಡ್, ಬಿಹಾರ, ಕರ್ನಾಟಕ, ತ್ರಿಪುರದಂತಹ ರಾಜ್ಯಗಳು.

'ಬಿ' ವರ್ಗವು ರಾಜಸ್ಥಾನ, ಛತ್ತೀಸ್‌ಗಢ, ಮಹಾರಾಷ್ಟ್ರ, ದೆಹಲಿ, ಪಂಜಾಬ್, ಒಡಿಶಾದಂತಹ ಬಿಜೆಪಿ ಅಧಿಕಾರದಲ್ಲಿರದ ರಾಜ್ಯಗಳು.

'ಸಿ' ವರ್ಗವು ಲಕ್ಷದ್ವೀಪ, ಮೇಘಾಲಯ ಮತ್ತು ಮಿಜೋರಾಂನಂತಹ ಸಣ್ಣ ರಾಜ್ಯಗಳಾಗಿವೆ. ಕ್ಯಾಟಗರಿ 'ಡಿ' ಅಡಿ ಕೇರಳ, ಪಶ್ಚಿಮ ಬಂಗಾಳ, ಅಸ್ಸೊಂ, ಪುದುಚೇರಿ ಮತ್ತು ತಮಿಳುನಾಡು ರಾಜ್ಯಗಳಿವೆ.

ಉತ್ತರ ಪ್ರದೇಶ ಹೊರತುಪಡಿಸಿ, 'ಎ' ಮತ್ತು 'ಬಿ' ವಿಭಾಗಗಳಲ್ಲಿ ನಡ್ಡಾ ಅವರು 'ಸಿ' ವಿಭಾಗದಲ್ಲಿ 2 ದಿನಗಳ ಕಾಲ ಉಳಿಯುವರು. ಉಳಿದ ರಾಜ್ಯಗಳಲ್ಲಿ 3 ದಿನಗಳ ಕಾಲ ಇರುತ್ತಾರೆ. ಯುಪಿಯಲ್ಲಿ 8 ದಿನಗಳ ಕಾಲ ಪ್ರವಾಸ ಮಾಡಲಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.