ವಿಜಯವಾಡ(ಆಂಧ್ರಪ್ರದೇಶ) : ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಎನ್.ವಿ.ರಮಣ ತಾವು ಸಿಜೆಐ ಅಧಿಕಾರ ಸ್ವೀಕರಿಸಿಕೊಂಡ ನಂತರ ಮೊದಲ ಬಾರಿಗೆ ತಮ್ಮ ಹುಟ್ಟೂರಿಗೆ ಭೇಟಿ ನೀಡಿದ್ದಾರೆ. ಆಂಧ್ರ ಪ್ರದೇಶದ ವಿಜಯವಾಡ ಜಿಲ್ಲೆಯಲ್ಲಿರುವ ತಮ್ಮ ಹುಟ್ಟೂರಾದ ಪೊನ್ನವರಂ ಗ್ರಾಮಕ್ಕೆ ಭೇಟಿ ನೀಡಿದ ಅವರನ್ನು ಗ್ರಾಮಸ್ಥರು ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ.
ಗ್ರಾಮಕ್ಕೆ ಬಂದ ಎನ್.ವಿ.ರಮಣ ಅವರನ್ನು ಗ್ರಾಮಸ್ಥರು ಎತ್ತಿನಗಾಡಿಯಲ್ಲಿ ಮೆರವಣಿಗೆ ಮಾಡಿದರು. ಅವರು ತೆರಳಿದ ದಾರಿಯಲ್ಲಿ ಪುಷ್ಪವೃಷ್ಟಿಯನ್ನು ಸುರಿಸಲಾಯಿತು. ಗ್ರಾಮದಲ್ಲಿನ ಶಿವ ದೇವಸ್ಥಾನಕ್ಕೆ ಭೇಟಿ ನೀಡಿದ ಮುಖ್ಯ ನ್ಯಾಯಮೂರ್ತಿಗಳು ವಿಶೇಷ ಪೂಜೆಯನ್ನೂ ಸಲ್ಲಿಸಿದರು.
ಗ್ರಾಮಸ್ಥರು ಪೂರ್ಣಕುಂಭದೊಂದಿಗೆ ಎನ್.ವಿ.ರಮಣ ಅವರನ್ನು ಸ್ವಾಗತಿಸಿದರು, ರಸ್ತೆಗಳಲ್ಲಿ ಫ್ಲೆಕ್ಸ್ಗಳು, ತಳಿರು-ತೋರಣ ಕಟ್ಟಲಾಗಿತ್ತು. ಅವರು ಸುಮಾರು 4 ಗಂಟೆಗಳ ಕಾಲ ಗ್ರಾಮದಲ್ಲಿಯೇ ಉಳಿದಿದ್ದರು. ಮೊದಲು ಜಿಲ್ಲಾಡಳಿತ ಎನ್.ವಿ.ರಮಣ ಅವರನ್ನು ಗರಿಕಪಡ ಚೆಕ್ಪೋಸ್ಟ್ ಬಳಿ ಸ್ವಾಗತಿಸಿತು. ಜಿಲ್ಲಾಧಿಕಾರಿ ಜೆ.ನಿವಾಸ್ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ ಈ ವೇಳೆ ಹಾಜರಿದ್ದರು.
ಇದನ್ನೂ ಓದಿ: ತಿರುಮಲವಾಸನ ವಿಶೇಷ ದರ್ಶನಕ್ಕೆ ಬಿಡುಗಡೆಯಾದ 4.6 ಲಕ್ಷ ಟಿಕೆಟ್.. 80 ನಿಮಿಷದಲ್ಲೇ ಟಿಕೆಟ್ ಸೋಲ್ಡ್ ಔಟ್