ETV Bharat / bharat

ಸಶಸ್ತ್ರ ಪೊಲೀಸ್ ಶಿಬಿರದ ಆವರಣದಲ್ಲಿ ನಿಗೂಢ ಸ್ಫೋಟ: ಪೊಲೀಸ್​ ಇಲಾಖೆಯಿಂದ ತನಿಖೆ ಚುರುಕು - ಪೊಲೀಸ್​ ಇಲಾಖೆ

Mysterious blast in Surankote area of Poonch: ಜಮ್ಮುವಿನ ಪೂಂಚ್ ಜಿಲ್ಲೆಯ ಸುರನ್‌ಕೋಟೆ ಪ್ರದೇಶದ ಸಶಸ್ತ್ರ ಪೊಲೀಸ್ ಶಿಬಿರದ ಆವರಣದಲ್ಲಿ ನಿಗೂಢ ಸ್ಫೋಟ ಸಂಭವಿಸಿದೆ.

Mysterious blast
ಸಶಸ್ತ್ರ ಪೊಲೀಸ್ ಶಿಬಿರದ ಆವರಣದಲ್ಲಿ ನಿಗೂಢ ಸ್ಫೋಟ: ಪೊಲೀಸ್​ ಇಲಾಖೆಯಿಂದ ತನಿಖೆ ಚುರುಕು
author img

By ETV Bharat Karnataka Team

Published : Dec 20, 2023, 12:43 PM IST

ಪೂಂಚ್ (ಜಮ್ಮು ಮತ್ತು ಕಾಶ್ಮೀರ): ಪೂಂಚ್ ಜಿಲ್ಲೆಯ ಸುರನ್‌ಕೋಟೆ ಪ್ರದೇಶದ ಸಶಸ್ತ್ರ ಪೊಲೀಸ್ ಶಿಬಿರದ ಆವರಣದಲ್ಲಿ ನಿಗೂಢ ಸ್ಫೋಟ ಸಂಭವಿಸಿದೆ. ಆದರೆ, ಯಾವುದೇ ನಷ್ಟ, ಪ್ರಾಣ ಹಾನಿ ಕುರಿತಂತೆ ತಕ್ಷಣಕ್ಕೆ ವರದಿಯಾಗಿಲ್ಲ. ಡಿಸೆಂಬರ್ 19 ಮತ್ತು 20 ರ ಮಧ್ಯರಾತ್ರಿಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಸಶಸ್ತ್ರ ಪೊಲೀಸ್ 6ನೇ ಬೆಟಾಲಿಯನ್ ‘ಡಿ ಕಾಯ್’ ಶಿಬಿರದಲ್ಲಿ ನಿಲ್ಲಿಸಲಾಗಿದ್ದ ಕೆಲವು ವಾಹನಗಳ ಕಿಟಕಿ ಗಾಜುಗಳು ಹಾನಿಗೊಳಗಾಗಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

"ಕಳೆದ ರಾತ್ರಿ ಸುರನ್‌ಕೋಟೆಯ ಜೆಕೆ ಪೊಲೀಸ್‌ನ ಸಶಸ್ತ್ರ ಬೆಟಾಲಿಯನ್‌ನ ಪಾರ್ಕಿಂಗ್ ಪ್ರದೇಶದಲ್ಲಿ ಕಡಿಮೆ ತೀವ್ರತೆಯ ನಿಗೂಢ ಬ್ಲಾಸ್ಟ್ ಸಂಭವಿಸಿದ ಬಗ್ಗೆ ವರದಿಯಾಗಿದೆ. ಇದರಿಂದಾಗಿ ಕೆಲವು ನಿಲುಗಡೆ ಮಾಡಿದ ವಾಹನಗಳ ಕಿಟಕಿ ಗಾಜುಗಳಿಗೆ ಹಾನಿ ಉಂಟಾಗಿದೆ. ನಿಗೂಢ ಸ್ಫೋಟದ ಕುರಿತು ತನಿಖೆ ಚುರುಕುಗೊಳಿಸಲಾಗಿದೆ'' ಜಮ್ಮು ವಲಯದ ಐಜಿಪಿ ಕಚೇರಿ ತಿಳಿಸಿದೆ. ಘಟನೆ ಕುರಿತಂತೆ ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.

ಇತ್ತೀಚಿನ ಪ್ರಕರಣ, ಕಾರ್ಗಿಲ್​ನಲ್ಲಿ ನಿಗೂಢ ಸ್ಫೋಟ: ಅನುಮಾನಾಸ್ಪದ ವಸ್ತು ಸ್ಫೋಟಗೊಂಡಿದ್ದ ಪರಿಣಾಮ ಮೂವರು ಸಾವನ್ನಪ್ಪಿದ್ದರು ಹಾಗೂ ಎಂಟು ಮಂದಿ ಗಾಯಗೊಂಡಿದ್ದ ಘಟನೆ ಕೇಂದ್ರಾಡಳಿತ ಪ್ರದೇಶವಾದ ಲಡಾಖ್​ನ ಕಾರ್ಗಿಲ್​ ಜಿಲ್ಲೆಯಲ್ಲಿ ಇತ್ತೀಚೆಗೆ ಜರುಗಿತ್ತು. ನಿಗೂಢ ಸ್ಫೋಟದಲ್ಲಿ ಒಬ್ಬ ಮಹಿಳೆ ಸೇರಿದಂತೆ ಮೂವರು ಮೃತಪಟ್ಟಿದ್ದರು.

ದ್ರಾಸ್​ ಪಣ್ಣದ ಕಬಾಡಿ ನಲ್ಹಾದಲ್ಲಿ ಇತ್ತೀಚೆಗೆ ಸಂಭವಿಸಿದ್ದ ಈ ಸ್ಫೋಟದಲ್ಲಿ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿದ್ದರು. ಗಾಯಾಳುಗಳನ್ನು ಜಿಲ್ಲಾ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆದಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದರು. ಈ ಮೂಲಕ ಮೃತರ ಸಂಖ್ಯೆ ಮೂರಕ್ಕೆ ಏರಿಕೆಯಾಗಿತ್ತು ಎಂದು ಕಾರ್ಗಿಲ್ ಜಿಲ್ಲಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರು ಮಾಹಿತಿ ನೀಡಿದ್ದರು. ಗಾಯಾಳುಗಳನ್ನು ದ್ರಾಸ್​ನ ಉಪವಿಭಾಗೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪರಿಶೀಲನೆ ನಡೆಸಿದ್ದ ಪೊಲೀಸ್ ಪಡೆ: ಕಬಾಡಿ ನಲ್ಹಾದ ಸ್ಕ್ರ್ಯಾಪ್ ಅಂಗಡಿಯಲ್ಲಿ ಸ್ಫೋಟ ಸಂಭವಿಸಿದ್ದರಿಂದ ಮಹಿಳೆ ಸೇರಿದಂತೆ ಮೂವರು ಮೃತಪಟ್ಟಿದ್ದರು. ಈ ಘಟನೆಯಲ್ಲಿ ಎಂಟು ಮಂದಿ ಗಾಯಗೊಂಡಿದ್ದರು. ಮಾಹಿತಿ ತಿಳಿದ ಕ್ಷಣವೇ ಸ್ಥಳಕ್ಕೆ ಪೊಲೀಸ್ ಪಡೆ ದೌಡಾಯಿಸಿ ಪರಿಶೀಲನೆ ನಡೆಸಿತ್ತು. ಸ್ಫೋಟದ ಸ್ವರೂಪ ಬಗ್ಗೆ ತನಿಖೆ ಕೈಗೊಂಡಿದ್ದರು. ಗಾಯಗೊಂಡವರನ್ನು ದ್ರಾಸ್​ ಉಪ ಜಿಲ್ಲಾ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು. ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ಹೆಚ್ಚಿನ ಪುರಾವೆಗಳನ್ನು ಸಂಗ್ರಹಿಸುವ ಕಾರ್ಯದಲ್ಲಿ ತೊಡಗಿದ್ದರು.

ಇದನ್ನೂ ಓದಿ: ರಾಜ್ಯ ಸಿಐಡಿಯಿಂದ ಸೈಬರ್ ತನಿಖಾ ತರಬೇತಿ ಪಡೆಯಲು ಆಸಕ್ತಿ ತೋರಿದ ಅನ್ಯ ರಾಜ್ಯಗಳ ಪೊಲೀಸರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.