ETV Bharat / bharat

35 ಬಾರಿ ಓಡಿ ಹೋದ ಹೆಂಡತಿ, ಸಣ್ಣ ಮಕ್ಕಳೊಂದಿಗೆ ಭಿಕ್ಷೆಗೆ ಇಳಿದ ಪತಿ: ಹೆಂಡತಿ ತಿರುಗಿ ಬರದಿದ್ದರೆ ಆತ್ಯಹತ್ಯೆ ಬೆದರಿಕೆ!

ನನ್ನ ಹೆಂಡತಿ ನನ್ನ ಹಾಗೂ ಇಬ್ಬರು ಪುಟ್ಟ ಮಕ್ಕಳನ್ನು ಬಿಟ್ಟು ಒಂದಲ್ಲ ಎರಡಲ್ಲ, ಬರೋಬ್ಬರಿ 35 ಬಾರಿ ಓಡಿ ಹೋಗಿದ್ದಾಳೆ ಎಂದು ಪತಿಯ ಆರೋಪ - ಮಕ್ಕಳನ್ನೂ ನೋಡಿಕೊಳ್ಳವರು ಯಾರೂ ಇಲ್ಲ ಎಂದು ಅಳಲು - ನನಗೆ ಭಿಕ್ಷಾಟನೆ ಇಷ್ಟವಿಲ್ಲ. ಆದರೆ ಮಕ್ಕಳೊಂದಿಗೆ ಭಿಕ್ಷೆಗೆ ಇಳಿದಿದ್ದೇನೆ ಎಂದ ಬಿಹಾರದ ವ್ಯಕ್ತಿ

Krishna Murari with children
ಮಕ್ಕಳೊಂದಿಗೆ ಕೃಷ್ಣ ಮುರಾರಿ
author img

By

Published : Jan 6, 2023, 4:49 PM IST

ಕೈಮೂರ್ (ಬಿಹಾರ): ನನ್ನ ಹೆಂಡತಿ ನನ್ನ ಹಾಗೂ ಇಬ್ಬರು ಪುಟ್ಟ ಮಕ್ಕಳನ್ನು ಬಿಟ್ಟು ಒಂದಲ್ಲ ಎರಡಲ್ಲ ಬರೋಬ್ಬರಿ 35 ಬಾರಿ ಓಡಿ ಹೋಗಿದ್ದಾಳೆ. ದೊಡ್ಡ ಮಗುವಿಗೆ 4 ವರ್ಷ ಮತ್ತು ಮಗಳಿಗೆ ಬರೀ 4 ತಿಂಗಳು. ಇಷ್ಟು ಸಣ್ಣ ಮಕ್ಕಳು ಇರುವಾಗ ನಾನು ಹೇಗೆ ಕೆಲಸ ಮಾಡಲಿ ? ನನಗೆ ಕೆಲಸ ಕೊಡುವವರು ಯಾರು? ನನ್ನ ಮನೆಯಲ್ಲಿ ಮಕ್ಕಳನ್ನು ನೋಡಿಕೊಳ್ಳಲು ನನ್ನವರಂತೂ ಯಾರೂ ಇಲ್ಲ. ಮಕ್ಕಳನ್ನೂ ನನ್ನೊಂದಿಗೆ ಕರೆದುಕೊಂಡು ಭಿಕ್ಷೆ ಬೇಡುತ್ತಿರುವೆ ಎಂದು ನೊಂದ ವ್ಯಕ್ತಿಯೊಬ್ಬ ಅಳಲು ತೋಡಿಕೊಂಡಿದ್ದಾನೆ.

ತಾಯಿಯಿಲ್ಲದೇ ಮಕ್ಕಳಿಬ್ಬರೂ ದುಃಖಿತರಾಗುತ್ತಿರುತ್ತಾರೆ..ಅವರನ್ನು ರಮಿಸುವದರಲ್ಲಿ ನಾನು ದಿನಾಲೂ ಹೈರಾಣಾಗುತ್ತಿದ್ದೇನೆ. ನನ್ನ ಹೆಂಡತಿ ಬೇಗ ಹಿಂತಿರುಗದಿದ್ದರೆ ನಾನು ಆತ್ಮಹತ್ಯೆ ಮಾಡಿಕೊಳ್ಳಲು ಇಚ್ಛಿಸಿದ್ದೇನೆ ಎಂದು ವ್ಯಕ್ತಿಯೊಬ್ಬ ತನ್ನ ಇಬ್ಬರು ಮಕ್ಕಳ ಸಹಿತ ಭಿಕ್ಷೆ ಬೇಡುತ್ತ, ಹೆಂಡತಿ ಕಾಣೆಯಾಗಿರುವ ಪೋಸ್ಟರ್ ಹಿಡಿದು ಕೈಮೂರ್ ಪಟ್ಟಣದಲ್ಲಿ ಅಲೆಯುತ್ತಿದ್ದಾನೆ.

ಹೌದು.. ಇದು ರಾಮಗಢ ಪೊಲೀಸ್ ಠಾಣೆ ವ್ಯಾಪ್ತಿಯ ಧಾರಕ್ ಗ್ರಾಮದ ಪ್ರಕರಣ. ಕೃಷ್ಣ ಮುರಾರಿ ಎಂಬ ಪತಿ ಈಗ ರಾಮಗಢ ಪೊಲೀಸ್ ಠಾಣೆಯನ್ನು ಸುತ್ತುತ್ತಿದ್ದಾನೆ. ಈ ವೇಳೆ, ತನ್ನ ಹೆಂಡತಿಯನ್ನೂ ನನಗೆ ಹುಡುಕಿಕೊಡಿ ಎಂದು ಮನವಿ ಮಾಡುತ್ತಿದ್ದಾನೆ. ಕೈಮೂರ್‌ನಲ್ಲಿ ನನ್ನ ಹೆಂಡತಿ 30-35 ಬಾರಿ ಓಡಿಹೋದಳು. ನನ್ನ ಹೆಂಡತಿ ಹಿಂತಿರುಗದಿದ್ದರೆ, ನಾನು ಜೀವನ ಮುಂದುವರಿಸುವದು ಕಷ್ಟ ಎಂದು ಪರಿಪರಿಯಾಗಿ ಬೇಡಿಕೊಳ್ಳುತ್ತಿದ್ದಾನೆ.

ಪತ್ನಿಯ ದ್ರೋಹದಿಂದ ಆತ್ಮಹತ್ಯೆ ಬೆದರಿಕೆ: ಈ ಕಲಿಯುಗವೂ ನಿಜ ಜೀವನದಲ್ಲಿ ಪತ್ನಿಯ ದ್ರೋಹಕ್ಕೆ ನನಗೆ ಉಸಿರುಗಟ್ಟಿ ಸಾಯುವಂತೆ ಮಾಡಿದೆ. ಪತಿ ತನ್ನ ಇಬ್ಬರು ಮುಗ್ಧ ಮಕ್ಕಳೊಂದಿಗೆ ಈ ಕೊರೆಯುವ ಚಳಿಯಲ್ಲಿ ಭಿಕ್ಷೆ ಬೇಡುವಂತಾಗಿದೆ. ಕೃಷ್ಣ ಮುರಾರಿ ಗುಪ್ತಾ ತನ್ನ ಹೆಂಡತಿಯ ದಾಂಪತ್ಯ ದ್ರೋಹದಿಂದ ತೊಂದರೆಗೀಡಾಗುತ್ತಾನೆ. ಮನೆ ಮತ್ತು ಬಾರ್ ತೊರೆದು ರಾಮಗಢ ಮಾರುಕಟ್ಟೆಯಲ್ಲಿ ತನ್ನ ಹೆಂಡತಿ ಪೋಸ್ಟರ್‌ನೊಂದಿಗೆ ತಿರುಗಾಡುತ್ತಿದ್ದಾನೆ. ಅವರ ಪತ್ನಿ ಕಳೆದ ಹಲವು ತಿಂಗಳಿಂದ ನಾಪತ್ತೆಯಾಗಿದ್ದರೂ, ಇನ್ನೂ ಎಲ್ಲಿಯೂ ಪತ್ತೆಯಾಗಿಲ್ಲ ಎಂದು ಖೇದ ವ್ಯಕ್ತಪಡಿಸುತ್ತಿದ್ದಾನೆ.

ಕೃಷ್ಣ ಮುರಾರಿ ಗುಪ್ತಾ 2017 ರಲ್ಲಿ ವಿವಾಹ: ಕೃಷ್ಣ ಮುರಾರಿ ಗುಪ್ತಾ ಮತ್ತು ಅವರ ಪತ್ನಿ ಕೈಮೂರ್ ಜಿಲ್ಲೆಯ ನಿವಾಸಿಗಳು. 2017ರಲ್ಲಿ ಇಬ್ಬರೂ ಪ್ರೇಮ ವಿವಾಹವಾಗಿದ್ದರು. ಕೃಷ್ಣ ಮುರಾರಿ ಗುಪ್ತಾ ಜಿಲ್ಲೆಯ ರಾಮಗಢ ಪೊಲೀಸ್ ಠಾಣೆಯ ನಿವಾಸಿ. ಅವರ ಪತ್ನಿ ನುವಾ ಪೊಲೀಸ್ ಠಾಣೆಯ ನಿವಾಸಿ. ಮದುವೆಯಾದ ಒಂದು ವರ್ಷದ ನಂತರ ಹೆಂಡತಿ ಮನೆಯಿಂದ ಓಡಿಹೋಗಿದ್ದಳು. ನನ್ನನ್ನು ಬಿಟ್ಟು ಎಷ್ಟೋ ಸಲ ಮನೆ ಬಿಟ್ಟು ಹೋಗಿದ್ದಾಳೆ. ಅನೇಕ ಬಾರಿ ಪೊಲೀಸ್ ಇಲಾಖೆಯ ಸಹಾಯ ಒದಗಿಸಿದರೆ, ಹೆಂಡತಿಯನ್ನು ಮರಳಿ ಕರೆ ತರಬಹುದು ಎಂದು ಕೃಷ್ಣ ಮುರಾರಿ ಗುಪ್ತಾ ಹೇಳುತ್ತಾರೆ.

“ಏಳು ತಿಂಗಳಲ್ಲಿ ನನ್ನ ಹೆಂಡತಿ ಹಲವಾರು ಬಾರಿ ಮನೆ ಬಿಟ್ಟು ಹೋಗಿದ್ದಾಳೆ, ಮಕ್ಕಳಿಬ್ಬರೂ ನನ್ನೊಂದಿಗಿದ್ದಾರೆ, ಈ ಮಕ್ಕಳನ್ನು ನೋಡಿಕೊಳ್ಳಲು ನನ್ನ ಮನೆಯಲ್ಲಿ ಯಾರೂ ಇಲ್ಲ, ನಾನು ಭಿಕ್ಷೆ ಬೇಡಲು ಬಯಸುವುದಿಲ್ಲ. ಆದರೆ, ಮಕ್ಕಳ ಸಲುವಾಗಿ ಇಂದು ಭಿಕ್ಷೆ ಮಾಡಬೇಕಾಗಿದೆ. ನಾನೇನು ಮಾಡಬೇಕು? ನನಗೆ ಯಾರು ಕೆಲಸ ಕೊಡುತ್ತೀರಿ? ಎಂದು ಸಂತ್ರಸ್ತ ಕೃಷ್ಣ ಮುರಾರಿ ಪ್ರಶ್ನಿಸುತ್ತಿದ್ದಾರೆ.

ಮಕ್ಕಳನ್ನು ಸಾಕಲು ಭಿಕ್ಷೆಗೆ ಇಳಿದೆ...ಇಬ್ಬರೂ ಮುಗ್ಧ ಮಕ್ಕಳನ್ನೂ ಹಿಂದೆ ನೋಡಿಕೊಳ್ಳಲು ಯಾರೂ ಇಲ್ಲ. ಮಕ್ಕಳನ್ನೂ ಜತೆಗೆ ಕರೆದುಕೊಂಡು ಭಿಕ್ಷೆ ಬೇಡುತ್ತಿದ್ದೇನೆ, ಈಗ ಭಿಕ್ಷೆಯಿಂದ ಬಂದ ಹಣದಲ್ಲಿ ಇಬ್ಬರನ್ನೂ ಪ್ರೀತಿಯಿಂದ ಸಾಕುತ್ತಿದ್ದೇನೆ ಎಂದ ಕೃಷ್ಣ ಮುರಾರಿ, ಮದುವೆಯಾದಾಗಿನಿಂದ ನನ್ನ ಹೆಂಡತಿ ನನ್ನ ಮೇಲೆ ದೌರ್ಜನ್ಯ ಎಸಗಿದ್ದಾರೆ. ಇವತ್ತು ನನ್ನ ಸ್ಥಿತಿ ಭಿಕ್ಷುಕನಿಗಿಂತ ಕೆಟ್ಟದ್ದಾಗಿದೆ. ಮಕ್ಕಳಿಬ್ಬರೂ ಹುಟ್ಟಿದಾಗಿನಿಂದ ನಾನೊಬ್ಬನೇ ಸಾಕುತ್ತಿದ್ದೇನೆ. ಮಕ್ಕಳಿಗೆ ಜನ್ಮ ನೀಡಿದ ನಂತರ ಪತ್ನಿ ತಲೆಮರೆಸಿಕೊಂಡಿದ್ದಾಳೆ. 5 ವರ್ಷಗಳಲ್ಲಿ ಸುಮಾರು 30 ರಿಂದ 35 ಬಾರಿ ಮನೆ ಬಿಟ್ಟು ಹೋಗಿದ್ದಾಳೆ ಎಂದು ಅಳಲು ತೋಡಿಕೊಂಡಿದ್ದಾನೆ.

ಇದನ್ನೂಓದಿ:'ನನಗೆ ಕ್ಯಾನ್ಸರ್ ಇದೆ ಎಂದು ಪೋಷಕರಿಗೆ ಹೇಳಬೇಡಿ...': ಕಣ್ಣೀರು ತರಿಸುವ ಪುಟ್ಟ ಬಾಲಕನ ಬದುಕಿನ ಕಥೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.