ಅಮರಾವತಿ: ಮಹಾರಾಷ್ಟ್ರದ 'ಲೇಡಿ ಸಿಂಗಂ' ಜನಪ್ರಿಯತೆಯ ದೀಪಾಲಿ ಚವ್ಹಾಣ್ ಮೆಲ್ಗಾಟ್, ಹುಲಿ ಸಂರಕ್ಷಿತ ಅರಣ್ಯ ವ್ಯಾಪ್ತಿಯಲ್ಲಿ ವಲಯ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಕಳೆದ ಗುರುವಾರ ಇವರು ದಿಢೀರ್ ಆತ್ಮಹತ್ಯೆಗೆ ಶರಣಾಗಿದ್ದು, ಮಹಾರಾಷ್ಟ್ರದಲ್ಲಿ ಈ ಪ್ರಕರಣ ಸಂಚಲನವನ್ನೇ ಸೃಷ್ಟಿಸಿದೆ.
![Deepali](https://etvbharatimages.akamaized.net/etvbharat/prod-images/str-deepali-chavan-mother_31032021105146_3103f_1617168106_42.jpg)
ಅಮರಾವತಿ ಜಿಲ್ಲೆಯ ಹರಿಸಾಲ್ ಗ್ರಾಮದ ತನ್ನ ನಿವಾಸದಲ್ಲಿ ಸರ್ವಿಸ್ ರಿವಾಲ್ವರ್ನಿಂದ ಗುಂಡು ಹಾರಿಸಿಕೊಂಡಿರುವ ಮಹಿಳಾಧಿಕಾರಿ ಆತ್ಮಹತ್ಯೆಗೆ ಶರಣಾಗಿದ್ದರು. ಇದೀಗ ತಾಯಿ ತನ್ನ ಮಗಳನ್ನು ಕಳೆದುಕೊಂಡ ವೇದನೆಯಲ್ಲಿ ಆಕ್ರೋಶ ಹೊರಹಾಕಿದ್ದಾರೆ.
'ನನ್ನ ಹುಲಿ(ಮಗಳು) ಇಲ್ಲದ ಮೇಲೆ ಅರಣ್ಯ ಸಂರಕ್ಷಿಸಿ ಉಪಯೋಗವೇನು?: ತಾಯಿ ರೋಧನೆ
ನನ್ನ ಹುಲಿ (ಮಗಳು) ಇಲ್ಲದ ಮೇಲೆ ಅರಣ್ಯ ಸಂರಕ್ಷಿಸಿ ಉಪಯೋವೇನು?, ನನ್ನ ಮಗಳ ಸಾವಿಗೆ ಕಾರಣವಾಗಿರುವ ಅಧಿಕಾರಿಯನ್ನು ಗಲ್ಲಿಗೇರಿಸಲು ನಿಮಗೆ ಸಾಧ್ಯವಾಗದಿದ್ದರೆ, ನನ್ನ ಮುಂದೆ ಕರೆತನ್ನಿ. ನಾನು ಅವನನ್ನು ಗಲ್ಲಿಗೇರಿಸುತ್ತೇನೆ ಎಂದು ಆಕ್ರೋಶ ನುಡಿಗಳನ್ನಾಡಿದ್ದಾರೆ. ಸರ್ಕಾರ ತೆಗೆದುಕೊಳ್ಳುವ ಯಾವುದೇ ಕ್ರಮವನ್ನು ಎದುರಿಸಲು ನಾನು ಸಿದ್ಧ. ತಪ್ಪಿತಸ್ಥರ ವಿರುದ್ಧ ಸರಿಯಾದ ಕ್ರಮ ಕೈಗೊಂಡಿದ್ದರೆ, ನನ್ನ ಮಗಳು ಇದೀಗ ಜೀವಂತವಾಗಿರುತ್ತಿದ್ದಳು ಎಂದು ಅವರು ನೋವು ತೋಡಿಕೊಂಡರು.
ಇದನ್ನೂ ಓದಿ: ಹಿರಿಯ ಅರಣ್ಯಾಧಿಕಾರಿ ಕಿರುಕುಳ.. ‘ಲೇಡಿ ಸಿಂಗಂ' ಖ್ಯಾತಿಯ ಆರ್ಎಫ್ಓ ದೀಪಾಲಿ ಆತ್ಮಹತ್ಯೆ
ದೀಪಾಲಿ ವಿದರ್ಭ ಕ್ಷೇತ್ರದ ಸಂಸದರು ಹಾಗೂ ಶಾಸಕರ ಭೇಟಿಯಾಗಿ ತಮ್ಮ ಶೋಚನೀಯ ಸ್ಥಿತಿ ಬಗ್ಗೆ ಹೇಳಿಕೊಂಡಿದ್ದಳು. ಆದರೆ ಮಗಳ ಸಹಾಯಕ್ಕೆ ಯಾರು ಬರಲಿಲ್ಲ ಎಂದಿದ್ದಾಳೆ. ನನ್ನ ಮಗಳು ಯಾವುದೇ ಬೆಂಬಲವಿಲ್ಲದೆ ಶಿಕ್ಷಣ ಪಡೆದಳು. ಇಲಾಖೆಗೆ ಆಯ್ಕೆಯಾದ ಬಳಿಕ ನೇರವಾಗಿ ಮೆಲ್ಗಾಟ್ಗೆ ಆಕೆಗೆ ಪೋಸ್ಟಿಂಗ್ ನೀಡಲಾಗಿದೆ. ಅಲ್ಲಿ ಫೋನ್ನಂತಹ ಸೌಲಭ್ಯ ಕೂಡ ಇಲ್ಲ. ಇದರ ಬಗ್ಗೆ ದೂರು ನೀಡದೆ ತನ್ನ ಕೆಲಸ ಮುಂದುವರೆಸಿದ್ದಳು. ಆಕೆಗೆ ಸಹೋದರಿ ಅಥವಾ ಇತರ ಸಂಬಂಧಿಕರು ಇಲ್ಲ. ಹಿರಿಯ ಅಧಿಕಾರಿಗಳು ದೀಪಾಲಿಗೆ ಕಿರುಕುಳ ನೀಡಿದ್ದಾರೆ ಎಂದು ತಾಯಿ ಶಕುಂತಲಾ ಚವ್ಹಾಣ ದೂರು ನೀಡಿದ್ದಾರೆ.
ಮೆಲ್ಗಾಟ್ ಹುಲಿ ಯೋಜನೆಯಲ್ಲಿ ಕೆಲಸ ಮಾಡುತ್ತಿರುವ ಅರಣ್ಯ ಶ್ರೇಣಿ ಅಧಿಕಾರಿ ದೀಪಾಲಿ ಚವ್ಹಾಣ್, ಅರಣ ಆತ್ಮಹತ್ಯೆ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದ್ದು, ಆಕೆಯ ಬಳಿ ಡೆತ್ ನೋಟ್ ಸಹ ಲಭ್ಯವಾಗಿದೆ. ಅದರಲ್ಲಿ ಹಿರಿಯ ಅಧಿಕಾರಿ ವಿನೋದ್ ಶಿವಕುಮಾರ್ ಅವರ ಹೆಸರು ಉಲ್ಲೇಖಿಸಲಾಗಿದೆ.