ETV Bharat / bharat

"ಬಿಜೆಪಿ ಮಿತ್ರರೊಂದಿಗೆ ಮಾತನಾಡಿದ ಬಳಿಕ ನನ್ನ ಫೋನ್​​ಗೆ ಕರೆ ಬರುತ್ತಿಲ್ಲ, ಕರೆ ಮಾಡಲು ಸಾಧ್ಯವಾಗುತ್ತಿಲ್ಲ"

ತಮ್ಮ ಪೋನಿನಿಂದ ಯಾವುದೇ ಕರೆ ಮಾಡಲು ಸಾಧ್ಯವಾಗುತ್ತಿಲ್ಲ ಹಾಗೂ ಹೊರಗಿನಿಂದ ಕರೆಗಳು ಬರುತ್ತಿಲ್ಲ ಎಂದು ಪ್ರತಿಪಕ್ಷಗಳ ಒಕ್ಕೂಟದ ಉಪರಾಷ್ಟ್ರಪತಿ ಅಭ್ಯರ್ಥಿ ಮಾರ್ಗರೇಟ್ ಆಳ್ವ ದೂರಿದ್ದಾರೆ.

"ನನ್ನ ಫೋನ್​​ಗೆ ಕರೆ ಬರುತ್ತಿಲ್ಲ, ಕರೆ ಮಾಡಲು ಸಾಧ್ಯವಾಗುತ್ತಿಲ್ಲ" ಮಾರ್ಗರೇಟ್ ಆಳ್ವ ಆರೋಪ
My phone is not working: Margaret Alva
author img

By

Published : Jul 26, 2022, 12:13 PM IST

Updated : Jul 26, 2022, 12:38 PM IST

ನವದೆಹಲಿ: ಕೇಂದ್ರದ ಮಾಜಿ ಸಚಿವೆ, ಮಾಜಿ ರಾಜ್ಯಪಾಲೆ ಹಾಗೂ ಪ್ರಸ್ತುತ ಪ್ರತಿಪಕ್ಷಗಳ ಒಕ್ಕೂಟದ ಉಪರಾಷ್ಟ್ರಪತಿ ಅಭ್ಯರ್ಥಿ ಮಾರ್ಗರೇಟ್ ಆಳ್ವಾ ವಿಚಿತ್ರ ಪರಿಸ್ಥಿತಿಯೊಂದನ್ನು ಎದುರಿಸುತ್ತಿದ್ದಾರೆ. ತನ್ನ ಫೋನಿಗೆ ಹೊರಗಿನಿಂದ ಕರೆಗಳು ಬರುತ್ತಿಲ್ಲ, ಹೊರಗಿನಿಂದ ಕರೆ ಮಾಡುವಾಗ ಕಾಲ್ ಡೈವರ್ಟ್ ಆಗುತ್ತಿವೆ ಮತ್ತು ನಾನು ಯಾರಿಗಾದರೂ ಕರೆ ಮಾಡಲು ಯತ್ನಿಸಿದಾಗ ಕರೆಗಳು ಸರಿಯಾಗಿ ಕನೆಕ್ಟ್​ ಆಗುತ್ತಿಲ್ಲ ಎಂದು ಅವರು ಆರೋಪಿಸಿದ್ದಾರೆ.

ಈ ಬಗ್ಗೆ ಕಳೆದ ರಾತ್ರಿ 9 ಗಂಟೆಗೆ ಟ್ವಿಟರ್​ನಲ್ಲಿ ದೂರು ಹಂಚಿಕೊಂಡಿದ್ದು, "ಇಂದು ಕೆಲ ಬಿಜೆಪಿ ಮಿತ್ರರೊಂದಿಗೆ ಮಾತನಾಡಿದ ನಂತರ ನನ್ನ ಮೊಬೈಲಿಗೆ ಒಳಬರುವ ಎಲ್ಲ ಕರೆಗಳು ಡೈವರ್ಟ್ ಆಗಿವೆ ಮತ್ತು ನನಗೆ ಕರೆ ಮಾಡಲು ಅಥವಾ ಸ್ವೀಕರಿಸಲು ಸಾಧ್ಯವಾಗುತ್ತಿಲ್ಲ. ನೀವು ನನ್ನ ಫೋನನ್ನು ಮೊದಲಿನ ಸ್ಥಿತಿಗೆ ತಂದಲ್ಲಿ, ಭಾರತೀಯ ಜನತಾ ಪಕ್ಷ, ತೃಣಮೂಲ ಕಾಂಗ್ರೆಸ್ ಅಥವಾ ಬಿಜು ಜನತಾ ದಳದ ಯಾವುದೇ ಸಂಸದರಿಗೆ ಇಂದು ರಾತ್ರಿ ಕರೆ ನಾನು ಕರೆ ಮಾಡಲ್ಲ ಎಂದು ಪ್ರಾಮಿಸ್ ಮಾಡುತ್ತೇನೆ." ಎಂದು ಹೇಳಿದ್ದಾರೆ.

ಮಹಾನಗರ್ ಟೆಲಿಪೋನ್ ನಿಗಮ ಲಿಮಿಟೆಡ್​ ನೊಂದಿಗೆ ತಾವು ನಡೆಸಿರುವ ಚರ್ಚೆಯ ಬಗ್ಗೆ ಅವರು ಟ್ವಿಟರ್​ನಲ್ಲಿ ಮಾಹಿತಿ ನೀಡಿದ್ದಾರೆ. ಅದರ ಪ್ರಕಾರ, ಅವರ ಎಂಟಿಎನ್​ಎಲ್ ಕೆವೈಸಿಯನ್ನು ಅಮಾನತು ಮಾಡಲಾಗಿದೆ ಮತ್ತು ಸಿಮ್ ಅನ್ನು ಮುಂದಿನ 24 ಗಂಟೆಗಳೊಳಗೆ ಬ್ಲಾಕ್ ಮಾಡಲಾಗುವುದು ಎಂದು ಎಂಟಿಎನ್​ಎಲ್ ಹೇಳಿದೆ.

ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿದ್ದ ಜಗದೀಪ್ ಧನಕರ್ ಅವರು ತಮ್ಮ ಜುಲೈ 18 ರಂದು ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಅವರು ಉಪರಾಷ್ಟ್ರಪತಿ ಚುನಾವಣೆಯಲ್ಲಿ ಆಡಳಿತಾರೂಢ ಎನ್​ಡಿಎ ಮೈತ್ರಿಕೂಟದ ಅಭ್ಯರ್ಥಿಯಾಗಿದ್ದಾರೆ. ಇನ್ನು, ಪ್ರತಿಪಕ್ಷಗಳ ಒಕ್ಕೂಟದ ಅಭ್ಯರ್ಥಿಯಾಗಿರುವ ಮಾರ್ಗರೇಟ್ ಆಳ್ವಾ, ಧನಕರ್ ವಿರುದ್ಧ ಉಪರಾಷ್ಟ್ರಪತಿ ಹುದ್ದೆಗಾಗಿ ಸ್ಪರ್ಧೆ ಮಾಡುತ್ತಿದ್ದಾರೆ.

ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಪ್ರತಿಕ್ರಿಯೆ: "ಅವರ ಕರೆಯನ್ನು ಯಾರೇ ಆದರೂ ಯಾಕೆ ಕದ್ದಾಲಿಸಬೇಕು? ಅವರು ಯಾರಿಗೆ ಬೇಕಿದ್ದರೂ ಕರೆ ಮಾಡಲಿ. ನಮಗೆ ಉಪ ರಾಷ್ಟ್ರಪತಿ ಚುನಾವಣೆಯಲ್ಲಿ ಗೆಲುವು ಸಾಧಿಸುವ ವಿಶ್ವಾಸವಿದೆ. ನಾವು ಯಾಕೆ ಫೋನ್‌ ಕರೆ ಟ್ಯಾಪ್‌ ಮಾಡಲಿ?" ಎಂದು ಸಚಿವ ಪ್ರಹ್ಲಾದ್ ಜೋಶಿ ನವದೆಹಲಿಯಲ್ಲಿ ಪ್ರತಿಕ್ರಿಯಿಸಿದರು.

ಟೆಲಿಕಾಂ ಸಚಿವಾಲಯ ಹೇಳಿದ್ದೇನು?: ಮಾರ್ಗರೇಟ್‌ ಆಳ್ವ ದೂರಿನ ಆಧಾರದಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗಿದೆ. ಬಿಎಸ್‌ಎನ್‌ಎಲ್‌ ಈಗಾಗಲೇ ಎಫ್‌ಐಆರ್‌ ದಾಖಲಿಸಿದೆ ಎಂದು ಕೇಂದ್ರ ಟೆಲಿಕಾಂ ಸಚಿವಾಲಯದ ಮೂಲಗಳು ತಿಳಿಸಿವೆ.

Last Updated : Jul 26, 2022, 12:38 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.