ETV Bharat / bharat

ನನ್ನ ಫೋನ್ ಕದ್ದಾಲಿಕೆಯಾಗಿದೆ, ಸಿಐಡಿ ತನಿಖೆಗೆ ಆದೇಶಿಸುವೆ: ಮಮತಾ ಬ್ಯಾನರ್ಜಿ - ಪಶ್ಚಿಮ ಬಂಗಾಳದಲ್ಲಿ ವಿಧಾನಸಭೆ ಚುನಾವಣೆ

ನನ್ನ ಫೋನ್ ಕದ್ದಾಲಿಕೆ ಮಾಡಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಿಐಡಿ ತನಿಖೆಗೆ ಆದೇಶಿಸುವುದಾಗಿ ಹೇಳಿಕೊಂಡಿದ್ದಾರೆ.

Mamata
author img

By

Published : Apr 17, 2021, 5:49 PM IST

Updated : Apr 17, 2021, 6:30 PM IST

ಗಾಲ್ಸಿ(ಪಶ್ಚಿಮ ಬಂಗಾಳ): ಪಶ್ಚಿಮ ಬಂಗಾಳದಲ್ಲಿ ವಿಧಾನಸಭೆ ಚುನಾವಣೆ ಕಣ ಜೋರಾಗಿದ್ದು, ಬಿಜೆಪಿ - ತೃಣಮೂಲ ಕಾಂಗ್ರೆಸ್​ ನಡುವಿನ ಆರೋಪ - ಪ್ರತ್ಯಾರೂಪ ಜೋರಾಗಿವೆ. ಇದೀಗ ಮಮತಾ ಬ್ಯಾನರ್ಜಿ ಮತ್ತೊಂದು ಗಂಭೀರ ಆರೋಪ ಮಾಡಿದ್ದಾರೆ. ನನ್ನ ದೂರವಾಣಿ ಕರೆ ಕದ್ದಾಲಿಕೆ ಮಾಡಲಾಗುತ್ತಿದೆ ಎಂದಿರುವ ಅವರು, ಸಿಐಡಿ ತನಿಖೆಗೆ ಆದೇಶಿಸುವುದಾಗಿ ತಿಳಿಸಿದ್ದಾರೆ.

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಶವಗಳನ್ನ ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತಿದ್ದಾರೆ ಎಂದು ಬಿಜೆಪಿ ಆರೋಪ ಮಾಡಿರುವ ಬೆನ್ನಲ್ಲೇ ಮಮತಾ ಬ್ಯಾನರ್ಜಿ ಇದೀಗ ತಮ್ಮ ಮೊಬೈಲ್​ ಕದ್ದಾಲಿಕೆ ಆಗಿದೆ ಎಂದು ಆರೋಪಿಸಿದ್ದಾರೆ.

ಏನಿದು ಪ್ರಕರಣ?: ಏಪ್ರಿಲ್​ 10ರಂದು ನಡೆದಿದ್ದ 4ನೇ ಹಂತದ ಚುನಾವಣೆ ವೇಳೆ ಕೂಚ್ ಬಿಹಾರ್​​ದಲ್ಲಿ ಭದ್ರತಾ ಸಿಬ್ಬಂದಿ ಗುಂಡಿನ ದಾಳಿಯಲ್ಲಿ ನಾಲ್ವರು ಸಾವನ್ನಪ್ಪಿದ್ದರು. ಅವರ ಮೃತದೇಹವನ್ನಿಟ್ಟುಕೊಂಡು ಚುನಾವಣಾ ಜಾಥಾ ನಡೆಸುವಂತೆ ಸಿತಾಲ್​ಕುಚಿ ಟಿಎಂಸಿ ಅಭ್ಯರ್ಥಿಗೆ ಮಮತಾ ಸೂಚನೆ ನೀಡಿದ್ದರು ಎನ್ನುವ ಆಡಿಯೋ ಕ್ಲೀಪ್ ಬಹಿರಂಗಗೊಂಡಿದೆ. ಇದನ್ನ ಬಿಜೆಪಿ ರಿಲೀಸ್ ಮಾಡಿದ್ದು, ರಾಜಕೀಯ ವಲಯದಲ್ಲಿ ಹೆಚ್ಚು ಚರ್ಚೆಗೆ ಗ್ರಾಸವಾಗಿದೆ.

ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿ ಮಾತನಾಡಿರುವ ಅವರು ಈ ಆಡಿಯೋ ಬಹಿರಂಗಗೊಳಿಸುವ ಹಿಂದೆ ಬಿಜೆಪಿ ಕೈವಾಡವಿದ್ದು, ರಾಜ್ಯದಲ್ಲಿನ ಅಭಿವೃದ್ಧಿ ಕಾರ್ಯಕ್ರಮ ಸಹಿಸದ ಬಿಜೆಪಿ ಈ ರೀತಿಯಾಗಿ ನಡೆದುಕೊಳ್ಳುತ್ತಿದೆ ಎಂದು ಆರೋಪ ಮಾಡಿದ್ದಾರೆ.

ಇದನ್ನೂ ಓದಿ: ದೀದಿಗೆ ಮೃತದೇಹಗಳೊಂದಿಗೆ ರಾಜಕೀಯ ಮಾಡುವ ಹಳೆಯ ಅಭ್ಯಾಸವಿದೆ: ಮೋದಿ ಟಾಂಗ್​​​

ಬಿಜೆಪಿ ನನ್ನ ಸಂಭಾಷಣೆ ಕದ್ದಾಲಿಸಿದ್ದು, ನಾನು ಈ ಪ್ರಕರಣವನ್ನ ಸಿಐಡಿ ತನಿಖೆಗೆ ನೀಡುತ್ತೇನೆ. ಇದರಲ್ಲಿ ಭಾಗಿಯಾಗಿರುವ ಆರೋಪಿಗಳನ್ನ ಸುಮ್ಮನೆ ಬಿಡುವುದಿಲ್ಲ ಎಂದಿದ್ದಾರೆ. ಜತೆಗೆ ಕೇಂದ್ರ ಪಡೆಗಳು ಸಹ ಇದರಲ್ಲಿ ಭಾಗಿಯಾಗಿದ್ದು, ಬಿಡುಗಡೆಯಾಗಿರುವ ಆಡಿಯೋ ಸುಳ್ಳು ಎಂದು ಟಿಎಂಸಿ ಮುಖ್ಯಸ್ಥೆ ಹೇಳಿಕೊಂಡಿದ್ದಾರೆ.

Last Updated : Apr 17, 2021, 6:30 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.