ETV Bharat / bharat

ಸಾವಿನ ದಾಖಲೆ ಸೃಷ್ಟಿಸಿ 5 ಎಕರೆ ಭೂಮಿ ಎಗರಿಸಿದ ಮಗಳು.. ಬದುಕಿದ್ದಾಗಿ 8 ವರ್ಷದಿಂದ ಕಚೇರಿಗೆ ತಾಯಿಯ ಅಲೆದಾಟ! - ತಾಯಿ ಮೃತಪಟ್ಟಿದ್ದಾಗಿ ದಾಖಲೆ ಸೃಷ್ಟಿಸಿದ ಮಗಳು

ತಾಯಿ ಜೀವಂತವಾಗಿದ್ದರೂ ಮೃತಪಟ್ಟ ಸುಳ್ಳು ದಾಖಲೆ ಸೃಷ್ಟಿಸಿ 5 ಎಕರೆ ಆಸ್ತಿಯನ್ನು ಲಪಟಾಯಿಸಲಾಗಿದೆ. ಹೀಗೆ ಮಾಡಿದ್ದು ಬೇರಾರೂ ಅಲ್ಲ, ಸ್ವತಃ ಹೆತ್ತ ಮಗಳು ಎಂಬುದು ಅಚ್ಚರಿಯ ಸಂಗತಿ. ಉತ್ತರಪ್ರದೇಶದಲ್ಲಿ ಈ ಪ್ರಕರಣ ನಡೆದಿದೆ.

ಬದುಕಿದ್ದಾಗಿ 8 ವರ್ಷದಿಂದ ತಾಯಿ ಕಚೇರಿಗೆ ಅಲೆದಾಟ

author img

By

Published : Jun 5, 2023, 3:20 PM IST

ಮುಜಾಫರ್‌ನಗರ(ಉತ್ತರಪ್ರದೇಶ): ಹಣ, ಆಸ್ತಿಗಾಗಿ ಹೆತ್ತ ಮಕ್ಕಳೇ ವೈರಿಗಳಾಗುತ್ತಾರೆ, ಸಹೋದರರೇ ದಾಯಾದಿಗಳಾಗುತ್ತಾರೆ ಎಂಬುದು ಸುಳ್ಳಲ್ಲ. ಇಂಥಹದ್ದೇ ಒಂದು ಪ್ರಕರಣ ಉತ್ತರಪ್ರದೇಶದ ಮುಜಾಫರ್​ನಗರದಲ್ಲಿ ಬೆಳಕಿಗೆ ಬಂದಿದೆ. 5 ಎಕರೆ ಭೂಮಿಗಾಗಿ ಸ್ವತಃ ಮಗಳು, ಹೆತ್ತಮ್ಮಳನ್ನು ದಾಖಲೆಗಳಲ್ಲಿ ಸಾಯಿಸಿ, ಆಸ್ತಿ ಲಪಟಾಯಿಸಿದ್ದಾಳೆ. ಕಳೆದ 8 ವರ್ಷಗಳಿಂದ ತನ್ನ ಅಸ್ತಿತ್ವ ತೋರಿಸಿದ್ದರೂ ಅಧಿಕಾರಿಗಳು ಮಾತ್ರ ಭೂಮಿ ಮರಳಿಸಿ ನ್ಯಾಯ ಕೊಡಿಸಿಲ್ಲ ಎಂಬುದು ಆರೋಪ ಮತ್ತು ಅಚ್ಚರಿಯ ಸಂಗತಿ.

ಪ್ರಕರಣದ ವಿವರ: ಉತ್ತರಪ್ರದೇಶದ ಮುಜಾಫರ್​ನಗರದ ತಂದೇರಾ ಗ್ರಾಮದ ನಿವಾಸಿಯಾದ 70 ವರ್ಷದ ವೃದ್ಧೆ ಶಾಂತಿ ದೇವಿ ಅನ್ಯಾಯಕ್ಕೊಳಗಾದವರು. ಮಗಳು ಮತ್ತು ಅಳಿಯನಿಂದ ಕಿರುಕುಳಕ್ಕೊಳಗಾಗಿ ತನ್ನ ಹೆಸರಿನಲ್ಲಿದ್ದ 5 ಎಕರೆ ಭೂಮಿಯನ್ನು ಕಳೆದುಕೊಂಡಿದ್ದಾರೆ. ವಿವಾಹದ ವೇಳೆ ಮಗಳಿಗೆ ಇದ್ದ 28 ಎಕರೆ ಭೂಮಿಯಲ್ಲಿ 23 ಎಕರೆಯನ್ನು ಆಕೆಗೆ ನೀಡಲಾಗಿತ್ತು. 5 ಎಕರೆಯನ್ನು ಜೀವನೋಪಾಯಕ್ಕಾಗಿ ಶಾಂತಿದೇವಿ ಹೆಸರಿಗೆ ಮಾಡಲಾಗಿತ್ತು. 8 ವರ್ಷಗಳ ಹಿಂದೆ ಶಾಂತಿದೇವಿಯ ಪತಿ ಬಾಬೂರಾವ್​ ನಿಧನ ಹೊಂದಿದ್ದರು.

ಇದಾದ ಬಳಿಕ ಮಗಳು ಉಳಿದ ಭೂಮಿಗಾಗಿ ಕಣ್ಣು ಹಾಕಿದ್ದಳು. ಗಂಡನ ಮಾತು ಕೇಳಿಕೊಂಡು ತನ್ನ ತಾಯಿ ತೀರಿ ಹೋಗಿದ್ದಾರೆ. ಪಿತ್ರಾರ್ಜಿತ ಆಸ್ತಿಯನ್ನು ತನ್ನ ಹೆಸರಿಗೆ ಮಾಡಿಕೊಡಿ ಎಂದು ದಾಖಲೆ ಸಲ್ಲಿಸಿದ್ದಾರೆ. ಇದನ್ನು ಅಂಗೀಕರಿಸಿರುವ ಅಧಿಕಾರಿಗಳು ಭೂಮಿ ದಾಖಲೆಯನ್ನು ಮಗಳ ಹೆಸರಿಗೆ ಪರಭಾರೆ ಮಾಡಿದ್ದಾರೆ.

ಇತ್ತ ಮನೆಯಿಂದ ಹೊರಹಾಕಲ್ಪಟ್ಟ ತಾಯಿ ಶಾಂತಿದೇವಿ, ತನಗಾಗಿ ಮಾಡಿಟ್ಟ ಭೂಮಿಯನ್ನು ಮಗಳಿಂದ ವಾಪಸ್​ ಕೊಡಿಸಿ, ಅಲ್ಲದೇ, ತಾನಿನ್ನೂ ಜೀವಂತಾಗಿದ್ದೇನೆ ಎಂದು ಅಧಿಕಾರಿಗಳ ಬಳಿ ಅಂಗಲಾಚಿದ್ದಾರೆ. ಆದರೆ, 8 ವರ್ಷಗಳಿಂದ ಇದಕ್ಕಾಗಿ ಹೋರಾಟ ಮಾಡುತ್ತಿದ್ದರೂ ಅಧಿಕಾರಿಗಳು ಮಾತ್ರ ಕ್ಯಾರೇ ಎಂದಿಲ್ಲವಂತೆ.

ಕುಂದುಕೊರತೆ ಸಭೆಯಲ್ಲಿ ದೂರು: 8 ವರ್ಷಗಳಿಂದ ಕಚೇರಿಗಳಿಗೆ ಅಲೆದು ಅಲೆದು ಸುಸ್ತಾಗಿರುವ ವೃದ್ಧೆ ಶಾಂತಿದೇವಿ ಅವರು ಶನಿವಾರ ಗ್ರಾಮದಲ್ಲಿ ನಡೆದ ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ ತನ್ನ ದೂರು ಸಲ್ಲಿಸಿದ್ದಾರೆ. ಮಗಳು ತನ್ನನ್ನು ಮೃತಪಟ್ಟಿದ್ದಾರೆ ಎಂದು ದಾಖಲೆಗಳನ್ನು ಸೃಷ್ಟಿಸಿ, ಇದ್ದ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದ್ದಾಳೆ. ಅಲ್ಲದೇ, ತನ್ನನ್ನು ಮನೆಯಿಂದ ಹೊರದಬ್ಬಲಾಗಿದೆ. ನ್ಯಾಯ ಕೊಡಿಸಿ ಎಂದು ಅಧಿಕಾರಿಗಳ ಬಳಿ ಮನವಿ ಮಾಡಿದ್ದಾರೆ.

ತಾನು ಜೀವಂತವಾಗಿದ್ದು, ಕಳೆದ 8 ವರ್ಷಗಳಿಂದ ಸರ್ಕಾರಿ ಕಚೇರಿಗಳಿಗೆ ಅಲೆಯುತ್ತಿದ್ದೇನೆ. ತನ್ನ ಪತಿಯ ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನೂ ಪಡೆದುಕೊಂಡಿದ್ದೇನೆ. ಈಗ ಜೀವನ ದುಸ್ತರವಾಗಿದೆ ಎಂದು ತಹಶೀಲ್ದಾರ್​ ಮುಂದೆ ತನ್ನ ಅಳಲನ್ನು ತೋಡಿಕೊಂಡಿದ್ದಾರೆ.

ವೃದ್ಧೆಯ ದೂರು ಆಲಿಸಿದ ತಹಶೀಲ್ದಾರ್ ಜಸ್ವಿಂದರ್ ಸಿಂಗ್ ಅವರು ಈ ಬಗ್ಗೆ ತನಿಖೆ ಮಾಡಲು ಸೂಚಿಸಿದ್ದಾರೆ. 2016 ರಲ್ಲಿ ತಮ್ಮ ಮಗಳು ಮತ್ತು ಅಳಿಯ ಆಸ್ತಿಗಾಗಿ ಉಯಿಲು ಮಾಡಿಸಿದ್ದರು. ಅದರಂತೆ 5 ಎಕರೆ ತನ್ನ ಹೆಸರಿಗೆ ಬರಬೇಕಿತ್ತು. ಸುಳ್ಳು ದಾಖಲೆಗಳನ್ನು ನೀಡಿ ಆಸ್ತಿ ಕಿತ್ತುಕೊಂಡಿದ್ದಾರೆ ಎಂದು ವೃದ್ಧ ಮಹಿಳೆ ದೂರು ನೀಡಿದ್ದಾರೆ. ಈ ಕುರಿತು ಹೆಚ್ಚಿನ ತನಿಖೆಗೆ ಸೂಚಿಸಲಾಗಿದೆ ಎಂದು ತಹಶೀಲ್ದಾರ್ ಜಸ್ವಿಂದರ್ ಸಿಂಗ್ ತಿಳಿಸಿದ್ದಾರೆ.

ಇದನ್ನೂ ಓದಿ: ಅವಧೇಶ್ ರೈ ಹತ್ಯೆ ಪ್ರಕರಣ: ಮುಕ್ತಾರ್ ಅನ್ಸಾರಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.