ETV Bharat / bharat

ಪಾರ್ವತಿ ಕುಂಡ್, ಜಾಗೇಶ್ವರ ದೇವಾಲಯಗಳಿಗೆ ಮೋದಿ ಭೇಟಿ ನೀಡಿದ್ದೇಕೆ ಗೊತ್ತಾ? ಈ ಬಗ್ಗೆ ಅವರು ಹೇಳಿದ್ದೇನು?

author img

By ETV Bharat Karnataka Team

Published : Oct 14, 2023, 1:02 PM IST

Prime Minister Narendra Modi: ''ಕುಮಾನ್ ಪ್ರದೇಶದ ಪಾರ್ವತಿ ಕುಂಡ್ ಹಾಗೂ ಜಾಗೇಶ್ವರ ದೇವಾಲಯಗಳಿಗೆ ತಮ್ಮ ಭೇಟಿ ಅತ್ಯಂತ ವಿಶೇಷವಾಗಿದೆ'' ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ಜಾಲತಾಣವಾದ ಎಕ್ಸ್​ನಲ್ಲಿ ಬರೆದುಕೊಂಡಿದ್ದಾರೆ.

Prime Minister Narendra Modi
ಪಾರ್ವತಿ ಕುಂಡ್, ಜಾಗೇಶ್ವರ ದೇವಾಲಯಗಳಿಗೆ ಭೇಟಿ ನೀಡಿ: ಪ್ರಧಾನಿ ಮೋದಿ

ನವದೆಹಲಿ: ''ಉತ್ತರಾಖಂಡದ ಪಾರ್ವತಿ ಕುಂಡ್ ಮತ್ತು ಜಾಗೇಶ್ವರ ದೇವಾಲಯಗಳಿಗೆ ತಮ್ಮ ಭೇಟಿ ಅತ್ಯಂತ ವಿಶೇಷತೆಯಿಂದ ಕೂಡಿದೆ. ನೈಸರ್ಗಿಕ ಸೌಂದರ್ಯ ಮತ್ತು ದೈವಿಕತೆಗಾಗಿ ಈ ಪವಿತ್ರ ಸ್ಥಳಗಳಿಗೆ ಭೇಟಿ ನೀಡಬೇಕಾಗುತ್ತದೆ'' ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಹೇಳಿದ್ದಾರೆ.

ಎಕ್ಸ್​ನಲ್ಲಿ ( ಹಿಂದಿನ ಟ್ವಿಟ್ಟರ್) ಪೋಸ್ಟ್ ಮಾಡಿದ ಪ್ರಧಾನಿ ಮೋದಿ ಅವರು, "ಉತ್ತರಾಖಂಡದಲ್ಲಿ ನೀವು ಭೇಟಿ ನೀಡಲೇಬೇಕಾದ ಒಂದು ಸ್ಥಳವಿದ್ದರೆ ತಿಳಿಸಿ ಎಂದು ಯಾರಾದರೂ ನನ್ನನ್ನು ಕೇಳಿದರೆ, ರಾಜ್ಯದ ಕುಮಾನ್ ಪ್ರದೇಶದ ಪಾರ್ವತಿ ಕುಂಡ್ ಮತ್ತು ಜಾಗೇಶ್ವರ ದೇವಾಲಯಗಳಿಗೆ ಭೇಟಿ ನೀಡಿ ಎಂದು ನಾನು ಅವರಿಗೆ ಸಲಹೆ ನೀಡುತ್ತೇನೆ. ಈ ಭಾಗದ ಪ್ರಾಕೃತಿಕ ಸೌಂದರ್ಯ ಮತ್ತು ದೈವತ್ವವು ನಿಮ್ಮನ್ನು ಮಂತ್ರಮುಗ್ಧರನ್ನಾಗಿಸುತ್ತದೆ" ಎಂದು ಅವರು ತಿಳಿಸಿದ್ದಾರೆ.

"ಖಂಡಿತವಾಗಿಯೂ, ಉತ್ತರಾಖಂಡವು ಭೇಟಿ ನೀಡಲು ಯೋಗ್ಯವಾದ ಅನೇಕ ಪ್ರಸಿದ್ಧ ಸ್ಥಳಗಳನ್ನು ಹೊಂದಿದೆ. ನಾನು ಆಗಾಗ್ಗೆ ಈ ರಾಜ್ಯಕ್ಕೆ ಭೇಟಿ ನೀಡಿದ್ದೇನೆ. ಕೇದಾರನಾಥ ಮತ್ತು ಬದರಿನಾಥದ ಪವಿತ್ರ ಸ್ಥಳಗಳು ಅತ್ಯಂತ ಸ್ಮರಣೀಯ ಅನುಭವಗಳು ಲಭಿಸುತ್ತವೆ. ಜೊತೆಗೆ ಹಲವು ವರ್ಷಗಳ ನಂತರ, ಪಾರ್ವತಿ ಕುಂಡ್ ಮತ್ತು ಜಾಗೇಶ್ವರ ದೇವಾಲಯಗಳಿಗೆ ನೀಡುವ ಭೇಟಿಯು ತುಂಬಾ ವಿಶೇಷತೆಯಿಂದ ಕೂಡಿದೆ" ಎಂದಿದ್ದಾರೆ.

5,338 ಅಡಿ ಎತ್ತರದಲ್ಲಿದೆ ಹಿಂದೂ ಯಾತ್ರಾಸ್ಥಳ: ಪಿಥೋರಗಢದಲ್ಲಿರುವ ಪಾರ್ವತಿ ಕುಂಡ್ ಭಾರತದ ಅತ್ಯಂತ ಪೂಜ್ಯ ದೇವಾಲಯಗಳಲ್ಲಿ ಒಂದಾಗಿದೆ. ಸುಮಾರು 5,338 ಅಡಿ ಎತ್ತರದಲ್ಲಿರುವ ಹಿಂದೂ ಯಾತ್ರಾಸ್ಥಳವು ಪ್ರತಿವರ್ಷ ಭಕ್ತರನ್ನು ಸೆಳೆಯುತ್ತದೆ. ಈ ತಾಣವು ಮಹಾನ್ ಆಧ್ಯಾತ್ಮಿಕ ಮಹತ್ವವನ್ನು ಹೊಂದಿದೆ. ಶಿವ ಮತ್ತು ಪಾರ್ವತಿ ದೇವಿಯು ಧ್ಯಾನ ಮಾಡಿದ ಸ್ಥಳ ಎಂದು ನಂಬಲಾಗಿದೆ. ದೈವಿಕ ದಂಪತಿಯ ಆಶೀರ್ವಾದ ಪಡೆಯಲು ಸಾವಿರಾರು ಭಕ್ತರು ಇಲ್ಲಿಗೆ ಬರುತ್ತಾರೆ.

ಇದಕ್ಕೂ ಮುನ್ನ ಉತ್ತರಾಖಂಡದ 'ದೇವಭೂಮಿ'ಗೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, ಗುರುವಾರ ಪಿಥೋರಗಢದ ಪಾರ್ವತಿ ಕುಂಡದಲ್ಲಿ ಪ್ರಾರ್ಥನೆ ಸಲ್ಲಿಸಿ ಪೂಜೆ ನೆರವೇರಿಸಿದ್ದಾರೆ. ಪ್ರಧಾನಿ ಮೋದಿ ಅವರು ಪವಿತ್ರ ಆದಿ ಕೈಲಾಸದ ಆಶೀರ್ವಾದ ಪಡೆದರು. ಈ ತಾಣವು ತನ್ನ ಆಧ್ಯಾತ್ಮಿಕ ಪ್ರಾಮುಖ್ಯತೆ ಮತ್ತು ನೈಸರ್ಗಿಕ ಸೌಂದರ್ಯ ಹೊಂದಿರುವುದಕ್ಕೆ ಹೆಸರುವಾಸಿಯಾಗಿದೆ.

ಜಾಗೇಶ್ವರ ಧಾಮದಲ್ಲಿವೆ 224 ದೇವಾಲಯಗಳು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅಲ್ಮೋರಾದ ಜಾಗೇಶ್ವರ ಧಾಮಕ್ಕೆ ಭೇಟಿ ನೀಡಿ, ಜನಪ್ರಿಯ ಯಾತ್ರಾಸ್ಥಳದಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಪ್ರಧಾನಿ ಮೋದಿ ಅವರು ಸುಮಾರು 6,200 ಅಡಿ ಎತ್ತರದಲ್ಲಿರುವ ದೇಶದ ಅತ್ಯಂತ ಪವಿತ್ರ ಮತ್ತು ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಪೂಜೆ ಸಲ್ಲಿಸಿದ್ದಾರೆ. ಜಾಗೇಶ್ವರ ಧಾಮವು ಸುಮಾರು 224 ಕಲ್ಲಿನ ದೇವಾಲಯಗಳನ್ನು ಒಳಗೊಂಡಿದೆ.

4,000 ಕೋಟಿ ರೂ. ಯೋಜನೆಗಳ ಅನಾವರಣ: ಭೇಟಿ ವೇಳೆ, ಉತ್ತರಾಖಂಡ್ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಪ್ರಧಾನಿ ಮೋದಿ ಅವರಿಗೆ ಸಾಥ್​ ನೀಡಿದ್ದರು. ಇದೇ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರಾಖಂಡದಲ್ಲಿ 4,000 ಕೋಟಿ ರೂಪಾಯಿ ಯೋಜನೆಗಳನ್ನು ಅನಾವರಣಗೊಳಿಸಿದ್ದಾರೆ. ''ಭಾರತವು ಯಶಸ್ಸಿನ ಹೊಸ ಎತ್ತರವನ್ನು ಸಾಧಿಸುತ್ತಿದೆ'' ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಇದನ್ನೂ ಓದಿ: 5 ವರ್ಷಗಳ ಬಳಿಕ ಡಿಎಂಕೆ ಸಮಾವೇಶಕ್ಕೆ ತಮಿಳುನಾಡಿಗೆ ಆಗಮಿಸಿದ ಸೋನಿಯಾ ಗಾಂಧಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.