ETV Bharat / bharat

ಸೌಹಾರ್ದತೆಯ ಪ್ರತೀಕ: ಕಾಶ್ಮೀರಿ ಪಂಡಿತ ಮಹಿಳೆಯ ಅಂತ್ಯಕ್ರಿಯೆ ನಡೆಸಿದ ಮುಸ್ಲಿಂ ಕುಟುಂಬ - ಮುಸ್ಲಿಂರಿಂದ ಹಿಂದೂ ಮಹಿಳೆ ಅಂತ್ಯಕ್ರಿಯೆ

ಜಮ್ಮು-ಕಾಶ್ಮೀರದ ಕುಲ್ಗಾಮ್​​ನಲ್ಲಿ ಸಾವನ್ನಪ್ಪಿದ್ದ ಕಾಶ್ಮೀರಿ ಪಂಡಿತ ಮಹಿಳೆಯೊಬ್ಬರ ಅಂತ್ಯಕ್ರಿಯೆಯನ್ನ ಮುಸ್ಲಿಂ ಸಮುದಾಯ ನಡೆಸಿದೆ.

Kashmiri Pandit Women last rites
Kashmiri Pandit Women last rites
author img

By

Published : May 14, 2022, 9:01 PM IST

ಕುಲ್ಗಾಮ್​(ಜಮ್ಮು-ಕಾಶ್ಮೀರ): ಹಿಜಾಬ್, ಹಲಾಲ್, ಆಜಾನ್ ಧ್ವನಿ ವರ್ಧಕ ವಿವಾದ ಸೇರಿದಂತೆ ಅನೇಕ ವಿಚಾರಗಳಿಗೋಸ್ಕರ ಧರ್ಮ-ಧರ್ಮಗಳ ನಡುವೆ ದ್ವೇಷದ ಜ್ವಾಲೆ ಹಬ್ಬುತ್ತಲೇ ಇರುತ್ತದೆ. ಇದರ ನಡುವೆ ಕೆಲವೊಂದು ಕೋಮು ಸಾಮರಸ್ಯಕ್ಕೆ ಸಾಕ್ಷಿಯಾಗುವ ಘಟನೆಗಳೂ ನಡೆಯುತ್ತಿರುತ್ತವೆ. ಸದ್ಯ ಕುಲ್ಗಾಮ್​​ದಲ್ಲೊಂದು ಅಂತಹ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ.

ಕಾಶ್ಮೀರಿ ಪಂಡಿತ ಮಹಿಳೆಯ ಅಂತ್ಯಕ್ರಿಯೆ ನಡೆಸಿದ ಮುಸ್ಲಿಂ ಕುಟುಂಬ

ಜಮ್ಮು-ಕಾಶ್ಮೀರದ ಕುಲ್ಗಾಮ್​ ಜಿಲ್ಲೆಯ ಪರ್ರಾ ಖಾಜಿಗುಂಡ್​ನಲ್ಲಿ 80 ವರ್ಷದ ಕಾಶ್ಮೀರಿ ಪಂಡಿತ ಮಹಿಳೆ ನಿನ್ನೆ ಸಂಜೆ ಸಾವನ್ನಪ್ಪಿದ್ದು, ಇಂದು ಮುಸ್ಲಿಂ ಸಮುದಾಯದ ಜನರು ಆಕೆಯ ಅಂತ್ಯಕ್ರಿಯೆ ನಡೆಸಿದ್ದಾರೆ. ಅನಂತ್​​ನಾಗ್​​ಗೆ ಮದುವೆಗೆ ಹೋಗಿದ್ದ ಸಂದರ್ಭದಲ್ಲಿ ವೃದ್ಧೆ ಮೃತಪಟ್ಟಿದ್ದಳು.

ಇದನ್ನೂ ಓದಿ: ಶರದ್​ ಪವಾರ್​ ಬಗ್ಗೆ ವಿವಾದಾತ್ಮಕ ಪೋಸ್ಟ್: ಮರಾಠಿ ನಟಿ ಪೊಲೀಸ್​ ವಶಕ್ಕೆ

ವೃದ್ಧೆಯ ಅಕ್ಕ - ಪಕ್ಕದ ಮನೆಗಳಲ್ಲಿ ವಾಸವಾಗಿದ್ದ ಮುಸ್ಲಿಂ ಸಮುದಾಯದ ಕುಟುಂಬ ಇಂದು ಬೆಳಗ್ಗೆ ಅಂತಿಮ ವಿಧಿವಿಧಾನ ನಡೆಸಿ, ಅಂತ್ಯಕ್ರಿಯೆ ನಡೆಸಿದೆ. ಇದರ ಬಗ್ಗೆ ಮಾತನಾಡಿರುವ, ಸಾಜಾ ಬೇಗಂ, ಚಿಕ್ಕದಿನಿಂದಲೂ ಮಹಿಳೆ ಈ ಪ್ರದೇಶದಲ್ಲಿ ವಾಸವಾಗಿದ್ದು, ನಮ್ಮೊಂದಿಗೆ ಉತ್ತಮ ಒಡನಾಟ ಇಟ್ಟುಕೊಂಡಿದ್ದರು. ಇದೀಗ, ಅವರು ನಿಧನರಾಗಿದ್ದು, ತೀವ್ರ ಬೇಸರ ಮೂಡಿಸಿದೆ ಎಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.