ETV Bharat / bharat

ಬಿಜೆಪಿ ಗೆಲುವಿಗೆ ಶ್ರಮಿಸಿದ ಮುಸ್ಲಿಂ ಯುವಕನ ಕೊಂದ ಕಿರಾತಕರು: ಮೃತದೇಹಕ್ಕೆ ಹೆಗಲು ಕೊಟ್ಟ ಶಾಸಕ - The murderers of a Muslim youth who worked hard to win the BJP

ಮೃತ ಬಾಬರ್‌ನ ಸಂಬಂಧಿಕರ ಪ್ರಕಾರ, ಬಾಬರ್ 2022 ರ ಯುಪಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪರ ಪ್ರಚಾರ ಮಾಡಿದ್ದನಂತೆ. ಇದರಿಂದ ಅಕ್ಕಪಕ್ಕದ ಜನರು ಸಿಟ್ಟಿಗೆದ್ದಿದ್ದರು ಎನ್ನಲಾಗ್ತಿದೆ.

muslim-youth-was-beaten-to-death-by-bandits-for-distributing-sweets-when-bjp-government-formed

author img

By

Published : Mar 28, 2022, 6:10 PM IST

Updated : Mar 28, 2022, 6:18 PM IST

ಕುಶಿನಗರ (ಉತ್ತರಪ್ರದೇಶ) : ಜಿಲ್ಲೆಯ ರಾಮಕೋಲಾ ಪೊಲೀಸ್ ಠಾಣೆಯ ಕಥಘರ್ಹಿ ಗ್ರಾಮದಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ಮುಸ್ಲಿಂ ಯುವಕನೊಬ್ಬ ಬಿಜೆಪಿ ಪರ ಪ್ರಚಾರ ಮಾಡಿ ಸರ್ಕಾರ ರಚನೆಯಾದ ವೇಳೆ ಸಿಹಿ ಹಂಚಿದ್ದಕ್ಕೆ ಪ್ರಾಣ ಕಳೆದುಕೊಂಡಿದ್ದಾನೆ. ಪ್ರಕರಣ ಹಿನ್ನೆಲೆ ಕುಟುಂಬಸ್ಥರು ಶವ ಸಂಸ್ಕಾರ ಮಾಡಲು ನಿರಾಕರಿಸಿದ್ದರು.

ಮೃತ ಬಾಬರ್‌ನ ಸಂಬಂಧಿಕರ ಪ್ರಕಾರ, ಇತ್ತೀಚೆಗೆ ಬಾಬರ್ 2022 ರ ಯುಪಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪರ ಪ್ರಚಾರ ಮಾಡಿದ್ದನಂತೆ. ಇದರಿಂದ ಅಕ್ಕಪಕ್ಕದ ಜನರು ಸಿಟ್ಟಿಗೆದ್ದಿದ್ದರು ಎನ್ನಲಾಗ್ತಿದೆ. ಅವರು ಬಾಬರ್‌ಗೆ ಬಿಜೆಪಿ ಪರ ಪ್ರಚಾರ ಮಾಡಬೇಡ ಎಂದು ಪದೇ ಪದೇ ಎಚ್ಚರಿಕೆ ನೀಡಿದ್ದರಂತೆ. ಹೇಳಿದ ಮಾತು ಕೇಳದೆ ಇದ್ದರೆ ಕೊಲ್ಲುವುದಾಗಿ ಬೆದರಿಕೆಯನ್ನು ಸಹ ಹಾಕಿದ್ದರಂತೆ. ಈ ಬಗ್ಗೆ ಬಾಬರ್ ರಾಮಕೋಲಾ ಪೊಲೀಸ್ ಠಾಣೆಗೆ ದೂರು ಸಹ ನೀಡಿದ್ದ ಎಂದು ತಿಳಿದುಬಂದಿದೆ.

ಮಾರ್ಚ್ 20 ರಂದು ಬಾಬರ್​ ಅಂಗಡಿಯಿಂದ ಹಿಂತಿರುಗುತ್ತಿದ್ದ ವೇಳೆ ಅಜೀಮುಲ್ಲಾ, ಆರಿಫ್, ತಾಹಿದ್, ಪರ್ವೇಜ್ ಎದುರಾಗಿದ್ದಾರೆ. ಆಗ ಬಾಬರ್​ ಜೈ ಶ್ರೀ ರಾಮ್ ಘೋಷಣೆಯನ್ನು ಸಹ ಕೂಗಿದ್ದಾನೆ. ಇದರಿಂದ ತೀವ್ರ ಕೋಪಕ್ಕೆ ಒಳಗಾದ ಅವರು ಬಾಬರ್ ಮೇಲೆ ದಾಳಿ ಮಾಡಿದ್ದಾರೆ.

ಇದನ್ನೂ ಓದಿ: ನೆಮ್ಮದಿ ಜೀವನಕ್ಕೆ ಕೊಳ್ಳಿ ಇಟ್ಟ ನೊಣಗಳು: ಮುರಿದು ಬಿದ್ದ ದಾಂಪತ್ಯ, ಗ್ರಾಮವನ್ನೇ ತೊರೆಯುವ ಸ್ಥಿತಿ!

ಬಾಬರ್‌ನನ್ನು ಅಮಾನುಷವಾಗಿ ಥಳಿಸುವ ಸಂದರ್ಭದಲ್ಲಿ ಮಹಿಳೆಯರೂ ಭಾಗಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಥಳಿಸುವ ವೇಳೆ ಅವರಿಂದ ತಪ್ಪಿಸಿಕೊಳ್ಳಲು ಬಾಬರ್​ ಛಾವಣಿಯನ್ನು ಏರಿದನಾದರೂ ಕಿರಾತಕರು ಅವನನ್ನು ಛಾವಣಿಯಿಂದ ಕೆಳಗೆ ಎಳೆದು ತಳ್ಳಿದ್ದಾರೆ. ಇದರಿಂದ ತೀವ್ರ ಗಾಯಗೊಂಡ ಬಾಬರ್​ನನ್ನು ಚಿಕಿತ್ಸೆಗಾಗಿ ರಾಮ್‌ಕೋಲಾ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅವನ ಸ್ಥಿತಿ ಗಂಭೀರವಾಗಿದ್ದನ್ನು ನೋಡಿ ಲಖನೌಗೆ ರವಾನೆ ಮಾಡಲಾಯಿತಾದರೂ ಚಿಕಿತ್ಸೆ ವೇಳೆ ಆತ ಮೃತಪಟ್ಟಿದ್ದಾನೆ.

ಘಟನೆ ಕುರಿತು ಮಾಹಿತಿ ಪಡೆದ ಸ್ಥಳೀಯ ಶಾಸಕ ಪಿ.ಎನ್.ಪಾಠಕ್ ಹಾಗೂ ಆಡಳಿತಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಘಟನೆಯಲ್ಲಿ ಭಾಗಿಯಾಗಿರುವ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಕುಟುಂಬಸ್ಥರಿಗೆ ಭರವಸೆ ನೀಡಲಾಗಿದೆ. ಇದಾದ ನಂತರವಷ್ಟೇ ಮೃತದೇಹದ ಅಂತಿಮ ಸಂಸ್ಕಾರ ನಡೆಸಲು ಕುಟುಂಬದವರು ಒಪ್ಪಿಗೆ ಸೂಚಿಸಿದ್ದಾರೆ. ಅಲ್ಲಿನ ಶಾಸಕರೇ ಬಾಬರ್‌ನ ಮೃತದೇಹಕ್ಕೆ ಹೆಗಲು ಕೊಟ್ಟಿದ್ದು ವಿಶೇಷ.

Last Updated : Mar 28, 2022, 6:18 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.