ETV Bharat / bharat

ಪಿಎಂ ರೋಜಗಾರ್ ಯೋಜನೆಯಡಿ ಪಡೆದ ಆಟೋಗೆ ಮೋದಿ, ಭಾಗವತ್ ಫೋಟೋ ಹಾಕಿದ ಮುಸ್ಲಿಂ ವ್ಯಕ್ತಿಗೆ ಸಂಕಷ್ಟ! - ಧಾನಿ ಮೋದಿ ಮತ್ತು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಭಾವಚಿತ್ರ

ಈ ಹಿಂದೆ ನಿರುದ್ಯೋಗಿಯಾಗಿದ್ದ ಅಕ್ಬರ್​ 2017ರಲ್ಲಿ ಪಿಎಂ ರೋಜಗಾರ್ ಯೋಜನೆಯಡಿ ಆಟೋ ಪಡೆದಿದ್ದಾರೆ. ಅಂದಿನಿಂದಲೂ ಆಟೋ ಓಡಿಸಿಕೊಂಡು ಜೀವನ ನಡೆಸುತ್ತಿದ್ದಾರೆ. ಆದರೆ, ಈಗ ತಮ್ಮದೇ ಸಮಾಜದವರಿಂದ ಅಕ್ಬರ್​​ ಸಂಕಷ್ಟ ಎದುರಿಸುವಂತೆ ಆಗಿದೆ.

Muslim man troubled into after put modi bhakt photo on his auto
ಆಟೋಗೆ ಮೋದಿ, ಭಾಗವತ್ ಫೋಟೋ ಹಾಕಿದ ಮುಸ್ಲಿಂ ವ್ಯಕ್ತಿಗೆ ಸಂಕಷ್ಟ
author img

By

Published : Jun 11, 2022, 6:07 PM IST

ಬುರ್ಹಾನ್‌ಪುರ (ಮಧ್ಯಪ್ರದೇಶ): ಸರ್ಕಾರಿ ಯೋಜನೆಯಡಿ ಪಡೆದ ಆಟೋ ಮೇಲೆ ಪ್ರಧಾನಿ ಮೋದಿ ಮತ್ತು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಭಾವಚಿತ್ರ ಹಾಕಿಸಿಕೊಂಡ ಮುಸ್ಲಿಂ ಯುವಕನೊಬ್ಬನಿಗೆ ಸ್ವ-ಸಮಾಜದವರೇ ಬೆದರಿಕೆ ಹಾಕುತ್ತಿರುವ ಪ್ರಕರಣ ಮಧ್ಯಪ್ರದೇಶದ ಬುರ್ಹಾನ್‌ಪುರ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

ಇಲ್ಲಿನ ನೆಹರು ನಗರದ ನಿವಾಸಿ ಶೇಖ್ ಅಕ್ಬರ್ ಆಟೋ ಓಡಿಸುತ್ತಿದ್ದಾರೆ. ಆದರೆ, ಆಟೋ ಹಿಂದೆ ಪ್ರಧಾನಿ ಮೋದಿ ಹಾಗೂ ಮೋಹನ್ ಭಾಗವತ್ ಫೋಟೋ ಹಾಕಿರುವುದೇ ಈತನಿಗೆ ಕಂಟಕವಾಗಿದೆ. ತಮ್ಮದೇ ಸಮುದಾಯದವರಿಂದ ಬೆದರಿಕೆ ಮಾತ್ರವಲ್ಲದೇ ಆಗಾಗ್ಗೆ ಹಲ್ಲೆಗೂ ಒಳಗಾಗಿದ್ದಾರೆ. ಇದರಿಂದ ಬೇಸತ್ತ ಅಕ್ಬರ್​​ ಪೊಲೀಸರ ಮೊರೆ ಹೋಗಿದ್ದಾರೆ.

ಆಟೋಗೆ ಮೋದಿ, ಭಾಗವತ್ ಫೋಟೋ ಹಾಕಿದ ಮುಸ್ಲಿಂ ವ್ಯಕ್ತಿಗೆ ಸಂಕಷ್ಟ

ಸರ್ಕಾರಿ ಫಲಾನುಭವಿ: ಈ ಹಿಂದೆ ನಿರುದ್ಯೋಗಿಯಾಗಿದ್ದ ಅಕ್ಬರ್​ಗೆ ವಾಸಕ್ಕೆ ಮನೆಯೂ ಇರಲಿಲ್ಲ. 2017ರಲ್ಲಿ ಪಿಎಂ ರೋಜಗಾರ್ ಯೋಜನೆಯಡಿ ಆಟೋ ಪಡೆದಿದ್ದೇನೆ. ಅಂದಿನಿಂದಲೂ ಆಟೋ ಓಡಿಸಿಕೊಂಡು ಜೀವನ ಸಾಗಿಸುತ್ತಿದ್ದೇನೆ.​ ಅಲ್ಲದೇ, 2019-20 ಸಾಲಿನಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಮನೆ ಮಂಜೂರಾಗಿದೆ. ಮನೆಗೆ ಎರಡೂವರೆ ಲಕ್ಷ ರೂಪಾಯಿ ನೆರವು ಕೂಡ ಸಿಕ್ಕಿದೆ. ಆದ್ದರಿಂದ ಪ್ರಧಾನಿ ಮೋದಿ ಮತ್ತು ಮೋಹನ್ ಭಾಗವತ್​ ಫೋಟೋ ಆಟೋ ಹಿಂದೆ ಹಾಕಿಸಿಕೊಂಡು ಅಭಿಮಾನ ಮೆರೆದಿದ್ದಾರೆ.

ನಾನು ಸರ್ಕಾರದ ಫಲಾನುಭವಿ ಆಗಿದ್ದರಿಂದ ನನ್ನ ಆಟೋ ಮೇಲೆ ಪ್ರಧಾನಿ ಮೋದಿ ಹಾಕಿಸಿದ್ದೇನೆ. ಅಲ್ಲದೇ, ಆರ್‌ಎಸ್‌ಎಸ್ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇದರಿಂದ ಮೋಹನ್ ಭಾಗವತ್ ಫೋಟೋ ಕೂಡ ಹಾಕಿಸಿರುವೆ. ಆದರೆ, ಇದನ್ನೇ ತಪ್ಪು ತಿಳಿದುಕೊಂಡ ಕೆಲವರು ಥಳಿಸಿ ಫೋಟೋ ತೆಗೆಯುವಂತೆ ಬೆದರಿಕೆ ಹಾಕುತ್ತಿದ್ದಾರೆ. ಫೋಟೋ ತೆಗೆಯದಿದ್ದರೆ ಬುರ್ಹಾನ್‌ಪುರದಲ್ಲಿ ಇರಲು ಬಿಡುವುದಿಲ್ಲ ಎಂದು ಹೆದರಿಸುತ್ತಿದ್ದಾರೆ ಎಂದು ಆಟೋ ಚಾಲಕ ಅಕ್ಬರ್ ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ.

ಈ ಬಗ್ಗೆ ಹಿಂದೆಯೇ ಪೊಲೀಸರಿಗೆ ದೂರು ಕೂಡ ನೀಡಿದ್ದೆ. ಆದರೆ, ಪೊಲೀಸರು ದೂರು ದಾಖಲಿಸಿಕೊಂಡಿಲ್ಲ. ಹೀಗಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಭೇಟಿ ಮಾಡಿ ರಕ್ಷಣೆ ನೋಡುವಂತೆ ಕೋರಲಾಗಿದೆ ಎಂದು ಅಕ್ಬರ್ ತಿಳಿಸಿದ್ದಾರೆ. ಅಲ್ಲದೇ, ಇದೀಗ ಅಕ್ಬರ್​ ಬೆಂಬಲಕ್ಕೆ ವಿವಿಧ ಸಂಘಟನೆಯವರು ನಿಂತಿದ್ದಾರೆ.

ಇದನ್ನೂ ಓದಿ: ಸೂಕ್ತ ಹುಡುಗನ ಹುಡುಕಾಟ: ಜಾಹೀರಾತನ್ನು ದೇವಸ್ಥಾನದ ಗೋಡೆಗಳಿಗೆ ಅಂಟಿಸಿದ ಯುವತಿ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.