ETV Bharat / bharat

'ಧರ್ಮ ಬದಲಿಸಿ ಮದ್ವೆಯಾಗು ಇಲ್ಲವೇ ಆ್ಯಸಿಡ್ ದಾಳಿ..' ಹಿಂದೂ ಯುವತಿಗೆ ಬೆದರಿಸಿದ ಮುಸ್ಲಿಂ ಯುವಕನ ಬಂಧನ

author img

By

Published : Sep 8, 2022, 8:37 AM IST

Updated : Sep 8, 2022, 8:50 AM IST

ನರ್ಸಿಂಗ್​ ಓದುತ್ತಿದ್ದ ಯುವತಿಯೋರ್ವಳನ್ನು ಪ್ರಾಣ ಬೆದರಿಕೆಯ ಮೂಲಕ ಬಲವಂತವಾಗಿ ಮದುವೆ ಮಾಡಿಕೊಳ್ಳಲು ಮುಂದಾಗಿದ್ದ ಮುಸ್ಲಿಂ ಯುವಕನನ್ನು ಬಂಧಿಸುವಲ್ಲಿ ಮಧ್ಯಪ್ರದೇಶ ಪೊಲೀಸರು ಯಶಸ್ವಿಯಾಗಿದ್ದಾರೆ.

ಹಿಂದೂ ಯುವತಿಗೆ ಪ್ರಾಣ ಬೆದರಿಕೆ
ಹಿಂದೂ ಯುವತಿಗೆ ಪ್ರಾಣ ಬೆದರಿಕೆ

ಖಾಂಡ್ವಾ (ಮಧ್ಯ ಪ್ರದೇಶ): "ನನ್ನ ಧರ್ಮಕ್ಕೆ ಮತಾಂತರಗೊಂಡು ಮದುವೆಯಾಗು, ಇಲ್ಲವೇ ನಿನ್ನ ಮೇಲೆ ಆ್ಯಸಿಡ್ ದಾಳಿ ಮಾಡುವೆ.." ಎಂದು ಹಿಂದೂ ಧರ್ಮೀಯ ಯುವತಿಗೆ ಮಾರಣಾಂತಿಕ ಬೆದರಿಕೆ ಹಾಕಿದ ಮುಸ್ಲಿಂ ಯುವಕನನ್ನು ಮಧ್ಯಪ್ರದೇಶದಲ್ಲಿ ಪೊಲೀಸರು ಬಂಧಿಸಿದ್ದಾರೆ. ಇಲ್ಲಿನ ಖಾಂಡ್ವಾ ಜಿಲ್ಲೆಯಲ್ಲಿ ಘಟನೆ ನಡೆದಿದೆ.

ಆರೋಪಿಯು 19 ವರ್ಷದ ನರ್ಸಿಂಗ್​​​ ಯುವತಿಯನ್ನು ಬಲವಂತವಾಗಿ ಇಸ್ಲಾಂಗೆ ಮತಾಂತರಿಸಿ ವಿವಾಹವಾಗಲು ಮುಂದಾಗಿದ್ದಾನೆ. ಅಷ್ಟೇ ಅಲ್ಲ, ತನ್ನ ಮಾತು ಕೇಳದೇ ಇದ್ದರೆ ಆ್ಯಸಿಡ್ ದಾಳಿ ಮಾಡುವ ಪ್ರಾಣ ಬೆದರಿಕೆ ಹಾಕಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪೊಲೀಸ್ ಠಾಣೆಯಲ್ಲಿ ದಾಖಲಾದ ದೂರಿನಂತೆ, ಆರೋಪಿ ಜನ್‌ಬಾಜ್‌ ಅಲಿಯಾಸ್ ಮೋನು ಅನ್ಸಾರಿ (22) ಎನ್ನುವಾತ ಕಳೆದ ಸೋಮವಾರ ಯುವತಿಯನ್ನು ಕಂಡು ಆಕೆಯ ಮೈಮೇಲೆ ಹೂವುಗಳನ್ನು ಸುರಿಸಿದ್ದಾನೆ. ನಂತರ ಆಕೆಯೊಂದಿಗೆ ಮಾತನಾಡಿ, "ನೀನು ನಿನ್ನ ಧರ್ಮವನ್ನು ಬದಲಿಸಿ ನನ್ನನ್ನು ಮದುವೆಯಾಗಬೇಕು, ಇದಕ್ಕೆ ತಪ್ಪಿದರೆ ಆ್ಯಸಿಡ್ ದಾಳಿ ಮಾಡುತ್ತೇನೆ" ಎಂದು ಪ್ರಾಣ ಬೆದರಿಕೆ ಹಾಕಿದ್ದಾನೆ.

ಇದನ್ನೂ ಓದಿ: ಬೆಂಗಳೂರಲ್ಲಿ ಮತ್ತೆ ಆ್ಯಸಿಡ್​ ದಾಳಿ ಪ್ರಕರಣ: ಆರೋಪಿ ಬಂಧನ, ಆ್ಯಸಿಡ್ ಬ್ಯಾನ್​ಗೆ ಮುಂದಾದ ಗೃಹ ಸಚಿವರು

ಈ ಘಟನೆಯು ಇಲ್ಲಿನ ಖಾಂಡ್ವಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವರದಿಯಾಗಿದೆ. ಘಟನೆ ಬೆಳಕಿಗೆ ಬರುತ್ತಿದ್ದಂತೆ ಪೊಲೀಸರು ದೂರು ದಾಖಲಿಸಿಕೊಂಡು ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಪೂನಂಚಂದ್ರ ಯಾದವ್ ಅವರು ಬುಧವಾರ ಮಾಧ್ಯಮಗಳಿಗೆ ತಿಳಿಸಿದರು.

ಆರೋಪಿಯನ್ನು ಮಧ್ಯ ಪ್ರದೇಶ ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆಯಡಿ ಪೊಲೀಸರು ನಂತರ ಬಂಧಿಸಿದ್ದಾರೆ. ಐಪಿಸಿಯ ವಿವಿಧ ಸೆಕ್ಷನ್‌ಗಳಡಿ ಕೇಸು ದಾಖಲಿಸಿಕೊಂಡಿದ್ದಾರೆ. ಇದೇ ವೇಳೆ, ಕೆಲವು ಧಾರ್ಮಿಕ ಬಲ ಪಂಥೀಯ ಗುಂಪಿನ ಮುಖಂಡರು, ಆರೋಪಿಯು ಯುವತಿಗೆ ಮಾನಸಿಕ, ದೈಹಿಕ ಕಿರುಕುಳ ನೀಡಿರುವುದಾಗಿ ಆರೋಪಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸೋಮವಾರ ಆರೋಪಿಯು ಸಂತ್ರಸ್ತ ಯುವತಿಯ ಮೈಮೇಲೆ ಹೂಗಳನ್ನು ಸುರಿಸಿ, ಇಸ್ಲಾಂಗೆ ಮತಾಂತರವಾಗುವಂತೆ ಒತ್ತಾಯಿಸಿದ್ದಾನೆ. ನಂತರ ಆ್ಯಸಿಡ್ ದಾಳಿ ಬೆದರಿಕೆ ಹಾಕಿದ್ದ. ತಕ್ಷಣವೇ ಯುವತಿ ಪ್ರಾಣ ಭಯದಿಂದ ಕಿರುಚಿಕೊಂಡಿದ್ದಳು. ಈ ಸಂದರ್ಭದಲ್ಲಿ ಕಿಡಿಗೇಡಿ ಯುವಕ ಸ್ಥಳದಿಂದ ಪರಾರಿಯಾಗಿದ್ದ ಎಂದು ಪೊಲೀಸ್ ಅಧಿಕಾರಿ ವಿವರಿಸಿದರು.

ಆರೋಪಿ ಮತ್ತು ಯುವತಿ ಒಂದೇ ಗ್ರಾಮದಲ್ಲಿ ವಾಸಿಸುತ್ತಿದ್ದಾರೆ. ಅಲ್ಲದೇ ಆತ ಯುವತಿಗೆ ಕಳೆದ ಹಲವು ದಿನಗಳಿಂದ ನಿರಂತರ ಕಿರುಕುಳ ನೀಡುತ್ತಿದ್ದ. ಮದುವೆಯಾಗುವಂತೆ ಪೀಡಿಸುತ್ತಿದ್ದ. ಈ ಕುರಿತಾಗಿ ಯುವತಿಯ ವಾಟ್ಸ್‌ ಆ್ಯಪ್‌ ನಂಬರ್‌ಗೆ ಮೆಸೇಜ್‌ಗಳನ್ನು ಕಳುಹಿಸುತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

Last Updated : Sep 8, 2022, 8:50 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.