ಬುದೌನ್ (ಉತ್ತರ ಪ್ರದೇಶ): ಧರ್ಮದ ಗೋಡೆ ಒಡೆದು ಪ್ರೀತಿಸಿದ ಜೋಡಿಯೊಂದು ದಾಂಪತ್ಯ ಜೀವನಕ್ಕೆ ಕಾಲಿರಿಸಿರುವ ಘಟನೆ ಉತ್ತರ ಪ್ರದೇಶದ ಬುದೌನ್ ಜಿಲ್ಲೆಯಲ್ಲಿ ನಡೆಯಿತು. ಮುಸ್ಲಿಂ ಹುಡುಗಿಯೊಬ್ಬಳು ತನ್ನ ಧರ್ಮವನ್ನು ಬದಲಿಸಿ ಹಿಂದೂ ಧರ್ಮ ಅಳವಡಿಸಿಕೊಂಡು ಹಿಂದೂ ಹುಡುಗನನ್ನು ಬಾಳ ಸಂಗಾತಿಯಾಗಿ ವರಿಸಿದ್ದಾಳೆ.
ಬುದೌನ್ ಜಿಲ್ಲೆಯ ಬಡಾಯುನ್ ಪರೌಲಿ ಗ್ರಾಮದ ನಿವಾಸಿ ಸೋಮೇಶ್ ಶರ್ಮಾ ದೆಹಲಿಯಲ್ಲಿ ಖಾಸಗಿ ಉದ್ಯೋಗಿಯಾಗಿದ್ದಾರೆ. ಸೋಮೇಶ್ ಕಾಲೇಜಿನಲ್ಲಿ ಓದುತ್ತಿರುವಾಗಲೇ ಅದೇ ಗ್ರಾಮದ ನಿವಾಸಿ, ಮುಸ್ಲಿಂ ಯುವತಿ ಇಲ್ಮಾಳನ್ನು ಪ್ರೀತಿಸುತ್ತಿದ್ದರು. ಇವರ ನಾಲ್ಕೈದು ವರ್ಷದ ಪ್ರೀತಿಗೆ ಧರ್ಮವೊಂದೇ ಅಡ್ಡಿಯಾಗಿತ್ತು. ಮನೆಯವರು ಕೂಡ ಇವರಿಬ್ಬರ ಮದುವೆಗೆ ಒಪ್ಪಿರಲಿಲ್ಲ. ಆ ಕಾರಣಕ್ಕಾಗಿ ಇಬ್ಬರು ಮನೆ ತೊರೆದು ಬರೇಲಿಯ ಅಗಸ್ತ್ಯ ಮುನಿ ಆಶ್ರಮದಲ್ಲಿ ಹಿಂದೂ ಸಂಪ್ರದಾಯದಂತೆ ಮದುವೆಯಾಗಿದ್ದಾರೆ.
ಇದನ್ನೂ ಓದಿ: ವಿವಾಹ ಮಹೋತ್ಸವದಲ್ಲಿ ಚಂಡೆ ಬಾರಿಸಿ ಸಂಭ್ರಮಿಸಿದ ಮಧುಮಗಳು.. ವಿಡಿಯೋ ನೋಡಿ
ಇಸ್ಲಾಂ ಧರ್ಮದಿಂದ ಹಿಂದೂ ಧರ್ಮಕ್ಕೆ ಮತಾಂತರ: ತನ್ನ ಪ್ರೀತಿಗಾಗಿ ಧರ್ಮವನ್ನು ಲೆಕ್ಕಿಸದ ಇಲ್ಮಾ ಇಸ್ಲಾಂ ಧರ್ಮವನ್ನು ತೊರೆದು ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ಇದೀಗ ಅವರ ಹೆಸರು ಸೌಮ್ಯ ಶರ್ಮಾ ಎಂದಾಗಿದೆ. ಗುರುವಾರ ಸಂಜೆ ಬರೇಲಿಯ ಅಗಸ್ತ್ಯ ಮುನಿ ಆಶ್ರಮದ ಪಂಡಿತರ ಸಮ್ಮುಖದಲ್ಲಿ ಹಿಂದೂ ಪದ್ಧತಿಯಂತೆ ಇಲ್ಮಾ ಅವರು ಸೋಮೇಶ್ ಅವರನ್ನು ವರಿಸಿದ್ದಾರೆ. ಪಂಡಿತರಿಗೆ ಸ್ವಂತ ಇಚ್ಛೆಯಿಂದ ನಾವಿಬ್ಬರು ಮದುವೆಯಾಗುತ್ತಿರುವುದಾಗಿ ಹೇಳಿ, ದಾಖಲೆಗಳನ್ನು ತೋರಿಸಿ ವಿವಾಹವಾಗಿದ್ದಾರೆ.
ಹಿಂದೂ ಯುವಕರನ್ನು ವರಿಸಿದ್ದ ಮುಸ್ಲಿಂ ಯುವತಿಯರು: ಉತ್ತರ ಪ್ರದೇಶದ ಬರೇಲಿಯಲ್ಲಿ ಹಿಂದೂ ಯುವಕರನ್ನು ಇಬ್ಬರು ಮುಸ್ಲಿಂ ಹುಡುಗಿಯರು ಹಿಂದೂ ಸಂಪ್ರದಾಯದಂತೆ ಮದುವೆಯಾಗಿದ್ದರು. ಸ್ವಚ್ಛೆಯ ಮೇರೆಗೆ ಒಪ್ಪಿ ಮದುವೆ ಆಗಿದ್ದೇವೆ. ಯಾರ ಒತ್ತಡವೂ ಇಲ್ಲ. ಇಬ್ಬರಿಗೂ ಹಿಂದೂ ಧರ್ಮದಲ್ಲಿ ನಂಬಿಕೆ ಇದೆ ಎಂದು ಹುಡುಗಿಯರಿಬ್ಬರು ಹೇಳಿಕೊಂಡಿದ್ದರು. ಬರೇಲಿಯ ಅಗಸ್ತ್ಯ ಮುನಿ ಆಶ್ರಮದಲ್ಲಿ ಇಬ್ಬರು ಇಸ್ಲಾಂ ಹೆಣ್ಣುಮಕ್ಕಳ ವಿವಾಹವು ಹಿಂದೂ ಯುವಕರೊಂದಿಗೆ ನೆರವೇರಿತ್ತು. ಹುಡುಗಿಯರು ಹಿಂದೂ ಧರ್ಮಕ್ಕೆ ಮತಾಂತರಗೊಂಡು ಅವರ ಹೆಸರನ್ನು ಬದಲಾಯಿಸಿದ್ದರು. ಇಬ್ಬರೂ ಹುಡುಗಿಯರು ಹಿಂದೂ ಹುಡುಗರನ್ನು ಕಾನೂನಿನ ಪ್ರಕಾರವೇ ಮದುವೆಯಾಗಿದ್ದರು.
ಇದನ್ನೂ ಓದಿ: ಮಂತ್ರಾಕ್ಷತೆ, ಮಾಂಗಲ್ಯಧಾರಣೆ ಇಲ್ಲ: ಸಂವಿಧಾನ ಸಾಕ್ಷಿಯಾಗಿ ಸರಳ ವಿವಾಹವಾದ ಜೋಡಿ