ವಾಷಿಂಗ್ಟನ್: ಜಗತ್ತಿನ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ಎಲಾನ್ ಮಸ್ಕ್ ಮೈಕ್ರೋಬ್ಲಾಗರ್ ಟ್ವಿಟರ್ ಖರೀದಿಸಿದ ಬಳಿಕ ಒಂದಲ್ಲಾ ಒಂದು ಹೊಸ ನಿಯಮಗಳನ್ನು ಜಾರಿಗೆ ತರುತ್ತಲೇ ಇದ್ದಾರೆ. ಇದೀಗ ಟ್ವಿಟರ್ನ ಲೋಗೋವನ್ನೇ ಬದಲಿಸಿದ್ದಾರೆ. ನೀಲಿ ಹಕ್ಕಿಯ ಬದಲಾಗಿ "ಡಾಗಿ" (ನಾಯಿಯ ಮುಖ) ಚಿತ್ರವನ್ನು ಹಾಕಿದ್ದು ಕುತೂಹಲ ಮೂಡಿಸಿದೆ.
- — Elon Musk (@elonmusk) April 3, 2023 " class="align-text-top noRightClick twitterSection" data="
— Elon Musk (@elonmusk) April 3, 2023
">— Elon Musk (@elonmusk) April 3, 2023
ಈ ಬಗ್ಗೆ ಟ್ವೀಟ್ ಮಾಡಿರುವ ಎಲಾನ್ ಮಸ್ಕ್ "ಭರವಸೆ ನೀಡಿದಂತೆ ಮಾಡಿದ್ದೇನೆ" ಎಂದು ಸಾಮಾಜಿಕ ಜಾಲತಾಣದ ಲೋಗೋ ಬದಲಿಸಿದ್ದರ ಬಗ್ಗೆ ಹೇಳಿಕೊಂಡಿದ್ದಾರೆ. ಟ್ವಿಟರ್ ಖರೀದಿಗೂ ಮುನ್ನ ಬಳಕೆದಾರರ ಜೊತೆ ನಡೆಸಿದ ಸಂಭಾಷಣೆಯ ವೇಳೆ ಮೈಕ್ರೋಬ್ಲಾಗರ್ ಅನ್ನು ಖರೀದಿ ಮಾಡಲು ಬಳಕೆದಾರ ಮಸ್ಕ್ಗೆ ತಿಳಿಸಿದ್ದ. ಬಳಿಕ ಅದರ ಲೋಗೋವನ್ನೂ ಬದಲಿಸಲು ಸಾಧ್ಯವೇ ಎಂದು ಸವಾಲು ಹಾಕಿದ್ದ. ಅದರಂತೆ ಮಸ್ಕ್ ಟ್ವಿಟರ್ ಅನ್ನು ಖರೀದಿ ಮಾಡಿದ್ದು, ಇದೀಗ ಅದರ ಬ್ರ್ಯಾಂಡ್ ಲೋಗೋವನ್ನೂ ಬದಲಿಸಿದ್ದಾರೆ.
ವೆಬ್ನಲ್ಲಿ ಮಾತ್ರ ಗೋಚರ: ಬದಲಾದ ಲೋಗೋವು ಡಾಗ್‌ಕಾಯಿನ್ ಕ್ರಿಪ್ಟೋಕರೆನ್ಸಿಯದ್ದಾಗಿದೆ. ವಿಚಿತ್ರವೆಂದರೆ ಡಾಗಿ ಲೋಗೋ ಟ್ವಿಟರ್ನ ವೆಬ್ನಲ್ಲಿ ಮಾತ್ರ ಗೋಚರಿಸುತ್ತದೆ. ಅದರ ಅಪ್ಲಿಕೇಶನ್‌ನಲ್ಲಿ ಗೋಚರವಾಗುತ್ತಿಲ್ಲ. ಎಲಾನ್ ಮಸ್ಕ್ ಅವರು ಟ್ವಿಟರ್ ಖಾತೆಯ ಮೂಲಕ ಬ್ಲೂ ಬರ್ಡ್‌ನಿಂದ ಡಾಗ್‌ಗೆ ಬದಲಾಗಿರುವುದನ್ನು ಖಚಿತಪಡಿಸಿದ್ದಾರೆ. ಪೊಲೀಸ್ ಅಧಿಕಾರಿಯೊಬ್ಬರು ದಾಖಲೆಗಳನ್ನು ಪರಿಶೀಲಿಸುವ ವ್ಯಂಗ್ಯ ಚಿತ್ರವನ್ನು ಮಸ್ಕ್ ಟ್ವೀಟ್ ಮಾಡಿದ್ದು, ನೀಲಿ ಹಕ್ಕಿ ನನ್ನ ಹಳೆಯ ಫೋಟೋ ಎಂದು ಡಾಗ್ ಹೇಳುತ್ತಿರುವ ಮಾದರಿ ಚಿತ್ರಿಸಲಾಗಿದೆ.
ಡಾಗ್‌ಕಾಯಿನ್ ಮೌಲ್ಯ ವೃದ್ಧಿ: ಇನ್ನೊಂದೆಡೆ ಟ್ವಿಟರ್ ತನ್ನ ಮುಖಪುಟದ ಲೋಗೋವನ್ನು ಡಾಗ್ ಚಿತ್ರವನ್ನಾಗಿ ಬದಲಾಯಿಸಿದ ನಂತರ ಡಾಗ್‌ಕಾಯಿನ್‌ನ ಕ್ರಿಪ್ಟೋಕರೆನ್ಸಿ ಮೌಲ್ಯ 30 ಪ್ರತಿಶತ ಹೆಚ್ಚಾಗಿದೆ ಎಂದು ವರದಿಯಾಗಿದೆ.
-
As promised pic.twitter.com/Jc1TnAqxAV
— Elon Musk (@elonmusk) April 3, 2023 " class="align-text-top noRightClick twitterSection" data="
">As promised pic.twitter.com/Jc1TnAqxAV
— Elon Musk (@elonmusk) April 3, 2023As promised pic.twitter.com/Jc1TnAqxAV
— Elon Musk (@elonmusk) April 3, 2023
ಚೆಕ್ಮಾರ್ಕ್ಗೆ ಶುಲ್ಕ: ಎಲಾನ್ ಮಸ್ಕ್ ಅವರು ಕಳೆದ ವರ್ಷ ಕಂಪನಿಯನ್ನು ಖರೀದಿಸಿದ ನಂತರ ಸಾಕಷ್ಟು ಬದಲಾವಣೆಗಳನ್ನು ತಂದಿದ್ದಾರೆ. ಏಪ್ರಿಲ್ 1 ರಿಂದ ಕಂಪನಿಯು ತನ್ನ ಹಳೆಯ ಪರಿಶೀಲಿಸಿದ(ವೆರಿಫೈಡ್) ಖಾತೆಗಳಿಗೆ ಶುಲ್ಕ ವಿಧಿಸಲಾಗುವುದು ಎಂದು ತಿಳಿಸಿತ್ತು. ಅಂದರೆ ಬಳಕೆದಾರರು ನೀಲಿ ಚೆಕ್‌ಮಾರ್ಕ್‌ಗಳಿಗೆ ತಿಂಗಳಿಗೆ 8 ಡಾಲರ್ ಪಾವತಿಸಬೇಕಾಗುತ್ತದೆ ಎಂದು ಕಂಪನಿ ಹೇಳಿತ್ತು. ಶುಲ್ಕ ಪಾವತಿಸದ ಪರಿಶೀಲಿಸಿದ ಖಾತೆಗಳ ಚೆಕ್‌ಮಾರ್ಕ್ ಅನ್ನು ತೆಗೆದುಹಾಕಲಾಗಿದೆ.
50ರಷ್ಟು ಕಡಿಮೆ ಜಾಹೀರಾತು: "ಲೆಗಸಿ ಟ್ವಿಟ್ಟರ್ ಬ್ಲೂ ವೆರಿಫೈಡ್ ದುರದೃಷ್ಟವಶಾತ್ ಕರಫ್ಟೆಡ್ ಆಗಿದೆ. ಆದ್ದರಿಂದ ಕೆಲವೇ ತಿಂಗಳುಗಳಲ್ಲಿ ಇದನ್ನು ಕೈಬಿಡಲಾಗುವುದು ಎಂದು ಅವರು ಹೇಳಿದರು. ಟ್ವಿಟರ್ ಬ್ಲೂ ಚಂದಾದಾರರಿಗೆ 4,000 ಅಕ್ಷರಗಳ ದೀರ್ಘ ಟ್ವೀಟ್‌ಗಳನ್ನು ರಚಿಸಲು ಅವಕಾಶ ನೀಡಿದೆ. ಟ್ವಿಟರ್ ಬ್ಲೂ ಚಂದಾದಾರರು ತಮ್ಮ ಹೋಮ್ ಟೈಮ್‌ಲೈನ್‌ನಲ್ಲಿ ಶೇಕಡಾ 50 ರಷ್ಟು ಕಡಿಮೆ ಜಾಹೀರಾತುಗಳು ಗೋಚರಿಸುತ್ತವೆ.
ಕಂಪನಿಗಳು ಮತ್ತು ಬ್ರ್ಯಾಂಡ್‌ಗಳಿಗಾಗಿ ಟ್ವಿಟರ್ ಇತ್ತೀಚೆಗೆ ಗೋಲ್ಡ್ ಚೆಕ್ ಮಾರ್ಕ್ ಅನ್ನು ಪರಿಚಯಿಸಿತು. ಸರ್ಕಾರಿ ಖಾತೆಗಳನ್ನು ಗ್ರೇ ಚೆಕ್-ಮಾರ್ಕ್‌ಗೆ ವರ್ಗಾಯಿಸಿತು. ಚಿನ್ನದ ಬ್ಯಾಡ್ಜ್ ಅನ್ನು ಕಾಪಾಡಿಕೊಳ್ಳಲು ತಿಂಗಳಿಗೆ 1,000 ಡಾಲರ್ ಪಾವತಿಸಲು ಟ್ವಿಟರ್ ಕಂಪನಿಗಳಿಗೆ ಹೇಳಿದೆ. ಪಾವತಿಸದ ಬ್ರ್ಯಾಂಡ್‌ಗಳು ಮತ್ತು ಸಂಸ್ಥೆಗಳು ತಮ್ಮ ಚೆಕ್‌ಮಾರ್ಕ್‌ಗಳನ್ನು ಕಳೆದುಕೊಳ್ಳುತ್ತವೆ.
ಓದಿ: ಸ್ಟಾಫ್ ಸೆಲೆಕ್ಷನ್ ಕಮಿಷನ್ ಬೃಹತ್ ನೇಮಕಾತಿ: 7500 ಗ್ರೂಪ್ ಬಿ ಮತ್ತು ಸಿ ಹುದ್ದೆಗೆ ಅರ್ಜಿ ಆಹ್ವಾನ