ETV Bharat / bharat

ಮಗಳ ವಿಡಿಯೋ ವೈರಲ್‌ ವಿಚಾರ: ಗುಜರಾತ್‌ನಲ್ಲಿ ಬಿಎಸ್‌ಎಫ್ ಯೋಧನ ಭೀಕರ ಹತ್ಯೆ - ಚರ್ಚಿಸಲು ಹೋಗಿದ ಬಿಎಸ್​​ಎಫ್​ ಯೋಧ

ಗುಜರಾತ್‌ನ ಖೇಡಾ ಜಿಲ್ಲೆಯಲ್ಲಿ ಭೀಕರ ಹತ್ಯೆ ಪ್ರಕರಣ ನಡೆದಿದೆ. ತನ್ನ ಮಗಳ ವಿಡಿಯೋ ವೈರಲ್‌ ಮಾಡಿದ ವ್ಯಕ್ತಿಯ ಮನೆಗೆ ಹೋಗಿದ್ದ ಬಿಎಸ್‌ಎಫ್‌ ಯೋಧನನ್ನು ಹೊಡೆದು ಕೊಂದು ಹಾಕಲಾಗಿದೆ. ಪ್ರಕರಣದಲ್ಲಿ ಈಗಾಗಲೇ ಹಲವರನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರೆದಿದೆ.

Etv BharatBSF jawan was killed in a deadly attack
Etv Bharatಸಾರ್ವಜನಿಕವಾಗಿ ಬಿಎಸ್‌ಎಫ್ ಯೋಧನ ಹತ್ಯೆ: ಏಳು ಮಂದಿ ವಿರುದ್ಧ ಪ್ರಕರಣ ದಾಖಲು
author img

By

Published : Dec 26, 2022, 10:03 PM IST

ಖೇಡಾ(ಗುಜರಾತ್‌): ಮಗಳ ವಿಡಿಯೋ ವೈರಲ್ ಮಾಡಿರುವ ಬಗ್ಗೆ ಮಾತನಾಡಲು ಹೋಗಿದ್ದ ಗಡಿ ಭದ್ರತಾ ಪಡೆ (ಬಿಎಸ್​ಎಫ್) ಯೋಧನನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ. ಗುಜರಾತಿನ ಖೇಡಾ ಜಿಲ್ಲೆಯಲ್ಲಿ ಘಟನೆ ನಡೆದಿದೆ. ಸಾರ್ವಜನಿಕವಾಗಿಯೇ ನಡೆದ ಘೋರ ಪ್ರಕರಣ ಸಂಚಲನ ಉಂಟುಮಾಡಿದೆ.

ನಡಿಯಾಡ್‌ನ ಚಕ್ಲಾಸಿ ಪೊಲೀಸ್ ಠಾಣೆ ವ್ಯಾಪ್ತಿಯ ಸೂರ್ಯನಗರದಲ್ಲಿ ವಾಸಿಸುತ್ತಿರುವ ಬಿಎಸ್‌ಎಫ್ ಯೋಧ ಮೆಲ್ಜಿಭಾಯ್ ದಹ್ಯಾಭಾಯಿ ಅವರು ತಮ್ಮ ಮಗಳ ವಿಡಿಯೋವನ್ನು ವೈರಲ್ ಮಾಡಿದ ಯುವಕನನ್ನು ಪ್ರಶ್ನಿಸಲು ಅವರ ಮನೆಗೆ ತೆರಳಿದ್ದರು. ಈ ಸಂದರ್ಭದಲ್ಲಿ ಮಾತಿಗೆ ಮಾತು ಬೆಳೆದಿದೆ. ನಂತರ ಸ್ಥಳದಲ್ಲಿದ್ದ ಏಳು ಮಂದಿ ಸೇರಿ ಯೋಧನ ಮೇಲೆ ಹರಿತ ಆಯುಧಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ.

ಮೂಲಗಳ ಮಾಹಿತಿ ಪ್ರಕಾರ, ವಾಣಿಪುರ ಗ್ರಾಮದ ಶೈಲೇಶ್ ಅಲಿಯಾಸ್ ಸುನೀಲ್ ದಿನೇಶ್ ಭಾಯ್ ಜಾದವ್ ಎಂಬಾತ ಮೆಲ್ಜಿಭಾಯಿ ಅವರ ಮಗಳ ವಿಡಿಯೋವನ್ನು ಕೆಲ ದಿನಗಳ ಹಿಂದೆ ವೈರಲ್ ಮಾಡಿದ್ದಾನೆ. ಯೋಧನ ಪತ್ನಿ, ಮಗ ಮತ್ತು ಸೋದರಳಿಯ ಶನಿವಾರ ರಾತ್ರಿ ಶೈಲೇಶ್ ಮನೆಗೆ ತೆರಳಿದ್ದಾರೆ. ಈ ಸಂದರ್ಭದಲ್ಲಿ ಶೈಲೇಶ್ ಇರಲಿಲ್ಲ. ಆದರೂ ಅಲ್ಲಿದ್ದವರ ಜೊತೆ ಜಗಳ ವಿಕೋಪಕ್ಕೆ ತಿರುಗಿತ್ತು. ಶೈಲೇಶ್‌ನ ತಂದೆ, ಚಿಕ್ಕಪ್ಪ ಹಾಗು ತಾತ ಸೇರಿದಂತೆ ಕುಟುಂಬದ ಸದಸ್ಯರು ಯೋಧ ಮತ್ತು ಆತನ ಮಗನ ಮೇಲೆ ದೊಣ್ಣೆ, ಚಾಕು ಮತ್ತು ಸಲಕೆಗಳಿಂದ ಮನಬಂದಂತೆ ಹಲ್ಲೆ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಅವರ ಪುತ್ರ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮೆಲ್ಜಿಭಾಯಿ ದಹ್ಯಾಭಾಯಿ ಬಿಎಸ್​ಎಫ್ 56ನೇ ಬೆಟಾಲಿಯನ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮೆಹ್ಸಾನಾದಲ್ಲಿ ಕಳೆದ 28 ವರ್ಷಗಳಿಂದ ಕೆಲಸ ಮಾಡುತ್ತಿದ್ದರು. ಇವರ ಮೃತದೇಹಕ್ಕೆ ಬಿಎಸ್‌ಎಫ್ ಅಧಿಕಾರಿಗಳು, ನೌಕರರು ಮತ್ತು ಗ್ರಾಮಸ್ಥರ ಸಮ್ಮುಖದಲ್ಲಿ ಗೌರವಯುತ ಅಂತಿಮ ನಮನ ಸಲ್ಲಿಸಲಾಯಿತು.

ಮತ್ತೊಂದೆಡೆ, ಪತ್ನಿ ಮಂಜುಳಾಬೆನ್ ಘಟನೆಯ ಕುರಿತು ಚಕ್ಲಾಸಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಏಳು ಮಂದಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಶ್ರದ್ದಾ ವಾಕರ್​ ಹತ್ಯೆ ಆತಂಕದಿಂದ ತುನಿಶಾಳಿಂದ ಬಲವಂತವಾಗಿ ಬೇರ್ಪಟ್ಟೆ​: ಶೀಝಾನ್​ ಖಾನ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.