ಪಲಾಮು (ಜಾರ್ಖಂಡ್): ಮಗ ಮತ್ತು ಆತನ ಪತ್ನಿ ಸೇರಿಕೊಂಡು ತಂದೆಯನ್ನೇ ಹೊಡೆದು ಕೊಂದಿರುವ ಘಟನೆ ಜಾರ್ಖಂಡ್ನ ಪಲಾಮು ಜಿಲ್ಲೆಯಲ್ಲಿ ನಡೆದಿದೆ. ಧನುಕಿ ಎಂಬಾತನೇ ಕೊಲೆಯಾದ ವ್ಯಕ್ತಿಯಾಗಿದ್ದು, ಆರೋಪಿ ಪುತ್ರ ಬಲರಾಮ್ ದಂಪತಿ ತಲೆಮರೆಸಿಕೊಂಡಿದ್ದಾರೆ.
ಹತ್ಯೆಯಾದ ಧನುಕಿ ಮಾಟ ಮಂತ್ರ ಮಾಡುತ್ತಿದ್ದ. ಕೆಲವು ತಿಂಗಳ ಹಿಂದೆ ಮಗ ಬಲರಾಮ್ ಮತ್ತು ಧನುಕಿ ನಡುವೆ ಜಗಳವಾಗಿತ್ತು. ಇದಾದ ನಂತರ ಬಲರಾಮ್ ಅವರ ಕಿರಿಯ ಮಗ ಸಾವನ್ನಪ್ಪಿದ್ದ. ತನ್ನ ಮಗನ ಸಾವಿಗೆ ಅಜ್ಜ ಧನುಕಿಯೇ ವಾಮಾಚಾರ ಮಾಡಿರುವುದೇ ಕಾರಣ ಎಂದು ಬಲರಾಮ್ ಶಂಕೆ ಹೊಂದಿದ್ದ.
ಇದೇ ಶಂಕೆಯಿಂದ ಇತ್ತೀಚಿಗೆ ಧನುಕಿ ಪೂಜಾ ಕಾರ್ಯಕ್ಕೆ ಎಲ್ಲೋ ಹೋಗುತ್ತಿದ್ದಾಗ ಬಲರಾಮ್ ಮತ್ತು ಆತನ ಪತ್ನಿ ಸೇರಿಕೊಂಡು ತೀವ್ರವಾಗಿ ಹಲ್ಲೆ ಥಳಿಸಿದ್ದಾರೆ. ಇದರಿಂದಾಗಿ ಧನುಕಿ ಗಂಭೀರವಾಗಿ ಗಾಯಗೊಂಡಿದ್ದು, ಗ್ರಾಮಸ್ಥರು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆಯಲ್ಲಿ ಚಿಕಿತ್ಸೆಗೆ ಫಲಕಾರಿಯಾಗದೇ ಧನುಕಿ ಸಾವನ್ನಪ್ಪಿದ್ದರು.
ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡ ತನಿಖೆ ನಡೆಸಿದಾಗ ಧನುಕಿ ಸಾವಿನ ಹಿನ್ನೆಲೆ ಬಯಲಾಗಿದೆ. ಸದ್ಯ ಬಲರಾಮ್ ಮತ್ತು ಆತನ ಪತ್ನಿ ಪರಾರಿಯಾಗಿದ್ದು, ಪತ್ತೆಗಾಗಿ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ.
ಇದನ್ನೂ ಓದಿ: ಮದುವೆ ವಿಷ್ಯ ಮುಚ್ಚಿಟ್ಟು ಅನೈತಿಕ ಸಂಬಂಧ: ಗೊತ್ತಾಗುತ್ತಿದ್ದಂತೆ ಮರ್ಮಾಂಗ ಕತ್ತರಿಸಿದ ಪ್ರೇಯಸಿ!