ETV Bharat / bharat

ಊಟದಲ್ಲಿ ಹೆಚ್ಚಿನ ಮಾಂಸದ ತುಂಡುಗಳನ್ನು ಬಡಿಸಿಲ್ಲ ಎಂದು ಮನಸ್ತಾಪ, ಸ್ನೇಹಿತನ ಕೊಲೆ

author img

By

Published : Mar 20, 2022, 5:41 PM IST

ಸ್ನೇಹಿತರ ಸಹಾಯದಿಂದ ಮೃತದೇಹವನ್ನು ಆಟೋದಲ್ಲಿ ತೆಗೆದುಕೊಂಡು ಹೋಗಿ ಕಾಲುವೆಯ ಪಕ್ಕದಲ್ಲಿ ಶೇರ್ ಖಾನ್ ಎಸೆದಿದ್ದಾನೆ. ಶಿವ ನಾಪತ್ತೆ ಪ್ರಕರಣದ ದೂರು ದಾಖಲಿಸಿಕೊಂಡ ಪೊಲೀಸರು, ಶೇರ್‌ಖಾನ್ ಸೇರಿದಂತೆ ಇನ್ನಿಬ್ಬರು ಆರೋಪಿಗಳನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ..

murder-in-kadapa-over-non-veg-conflict
ಊಟದಲ್ಲಿ ಹೆಚ್ಚಿನ ಮಾಂಸದ ತುಂಡುಗಳನ್ನು ಬಡಿಸಿಲ್ಲ ಎಂದು ಮನಸ್ತಾಪ, ಸ್ನೇಹಿತನ ಕೊಲೆ

ಕೆಲ ಕ್ಷುಲ್ಲಕ ಕಾರಣಗಳಿಗಾಗಿ ನಿರೀಕ್ಷಿಸಲಾಗದ ದುರ್ಘಟನೆಗಳು ಜರುಗುತ್ತವೆ. ಸಮಾರಂಭವೊಂದರಲ್ಲಿ ಊಟದಲ್ಲಿ ಮಾಂಸಹಾರವನನ್ನು ಕಡಿಮೆ ಬಡಿಸಲಾಗಿದೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಉಂಟಾದ ಮನಸ್ತಾಪ ವ್ಯಕ್ತಿಯ ಕೊಲೆಯೊಂದರಲ್ಲಿ ಅಂತ್ಯವಾಗಿದೆ.

ಆಂಧ್ರಪ್ರದೇಶದ ಕಡಪನಗರದಲ್ಲಿ ಈ ದಾರುಣ ಘಟನೆ ನಡೆದಿದೆ. ಸ್ನೇಹಿತರಾಗಿದ್ದ ಶಿವ ಮತ್ತು ಶೇರ್​ಖಾನ್​ ಇಬ್ಬರ ನಡುವೆ ಗಲಾಟೆ ನಡೆದು ಓರ್ವ ಕೊಲೆಯಾಗಿದ್ದಾನೆ. ಕೆಲ ದಿನಗಳ ಹಿಂದೆ ಸಮಾರಂಭವೊಂದರಲ್ಲಿ ಮಾಂಸಾಹಾರವನ್ನು ಸಿದ್ಧಪಡಿಸಲಾಗಿದೆ.

ಶೇರ್​ಖಾನ್ ಮಾಂಸಾಹಾರವನ್ನು ಬಡಿಸುತ್ತಿದ್ದನು. ಈ ವೇಳೆ ಶೇರ್​ಖಾನ್ ಹೆಚ್ಚಿನ ಮಾಂಸದ ತುಂಡುಗಳನ್ನು ಬಡಿಸಿಲ್ಲ ಎಂದು ಶಿವ ಅಸಮಾಧಾನ ವ್ಯಕ್ತಪಡಿಸಿದ್ದನು.

ಈ ವೇಳೆ ಅಸಮಾಧಾನ ವಾಗ್ವಾದಕ್ಕೆ ಕಾರಣವಾಗಿತ್ತು. ಇಬ್ಬರ ನಡುವೆ ಜಗಳ ತಾರಕಕ್ಕೇರಿ ಶಿವ, ಶೇರ್​ಖಾನ್​​ನನ್ನು ಚಾಕುವಿನಿಂದ ಇರಿದು ಗಾಯಗೊಳಿಸಿದ್ದ. ಇದಾದ ಕೆಲವು ದಿನಗಳ ನಂತರ ಫೋನ್​ ಮಾಡಿ ಶಿವನನ್ನು ಕರೆಸಿಕೊಂಡ ಶೇರ್​ಖಾನ್ ಮತ್ತೆ ಜಗಳ ತೆಗೆದು, ಕತ್ತು ಹಿಸುಕಿ ಕೊಂದಿದ್ದಾನೆ.

ನಂತರ ಸ್ನೇಹಿತರ ಸಹಾಯದಿಂದ ಮೃತದೇಹವನ್ನು ಆಟೋದಲ್ಲಿ ತೆಗೆದುಕೊಂಡು ಹೋಗಿ ಕಾಲುವೆಯ ಪಕ್ಕದಲ್ಲಿ ಶೇರ್ ಖಾನ್ ಎಸೆದಿದ್ದಾನೆ. ಶಿವ ನಾಪತ್ತೆ ಪ್ರಕರಣದ ದೂರು ದಾಖಲಿಸಿಕೊಂಡ ಪೊಲೀಸರು, ಶೇರ್‌ಖಾನ್ ಸೇರಿದಂತೆ ಇನ್ನಿಬ್ಬರು ಆರೋಪಿಗಳನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಕಾಶ್ಮೀರದಲ್ಲಿ ನಡೆದಿದ್ದಕ್ಕೆ ಪಾಕಿಸ್ತಾನ ಮತ್ತು ಭಯೋತ್ಪಾದನೆ ಕಾರಣ : ಗುಲಾಂ ನಬಿ ಆಜಾದ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.