ETV Bharat / bharat

ತೆಲಂಗಾಣದಲ್ಲಿ ಸರಣಿ ಕೊಲೆ : KGF ಸಿನಿಮಾ ಆರೋಪಿಗಳಿಗೆ ಪ್ರೇರಣೆಯಾಯಿತೇ ಎಂಬ ಶಂಕೆ! - ಕೊಲೆ ಅಸ್ತ್ರದ ಬಗ್ಗೆ ಪೊಲೀಸರ ಶಂಕೆ

ತೆಲಂಗಾಣದಲ್ಲಿ ಇತ್ತೀಚೆಗೆ ಎರಡು ಕೊಲೆಗಳು ನಡೆದಿದ್ದು, ಎರಡೂ ಕೊಲೆಯ ಆರೋಪಿಗಳು ಕೊಲೆಗೆ ಸುತ್ತಿಗೆಯನ್ನು ಅಸ್ತ್ರವಾಗಿ ಬಳಸಿರುವುದು ತಿಳಿದು ಬಂದಿದೆ. ಈ ಆರೋಪಿಗಳು ಇತ್ತೀಚೆಗೆ ಬಿಡುಗಡೆಯಾದ ಕೆಜಿಎಫ್​ 2 ಸಿನಿಮಾದಲ್ಲಿ ನಾಯಕ ಸುತ್ತಿಗೆ ಬಳಸಿರುವುದು ಏನಾದರೂ ಪ್ರೇರಣೆಯಾಗಿದೆಯೇ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ..

Murder cases of Telangana: KGF Hammer Scene
ತೆಲಂಗಾಣದ ಸರಣಿ ಕೊಲೆ ಪ್ರಕರಣ: ಕೆಜಿಎಫ್​ ಸಿನಿಮಾದ ಸುತ್ತಿಗೆ ಆರೋಪಿಗಳಿಗೆ ಪ್ರೇರಣೆಯಾಯಿತೇ? ಪೊಲೀಸರ ಶಂಕೆ
author img

By

Published : May 14, 2022, 6:13 PM IST

ಹೈದರಾಬಾದ್(ತೆಲಂಗಾಣ) : ಇತ್ತೀಚೆಗೆ ಮಾಧ್ಯಮಗಳಲ್ಲಿ ಸಂಚಲನ ಮೂಡಿಸಿದ್ದ ಸರಣಿ ಕೊಲೆಗಳ ಆರೋಪಿಗಳು ‘ಸುತ್ತಿಗೆ’ಯನ್ನು ಕೊಲೆಯ ಅಸ್ತ್ರವನ್ನಾಗಿ ಬಳಸಿರುವುದು ಚರ್ಚೆಗೆ ಗ್ರಾಸವಾಗಿದೆ. ಇತ್ತೀಚೆಗೆ ಬಿಡುಗಡೆಗೊಂಡು ಪ್ಯಾನ್​ ಇಂಡಿಯಾದಲ್ಲಿ ಸದ್ದು ಮಾಡಿದ್ದ ಕೆಜಿಎಫ್​ ಸಿನಿಮಾದಲ್ಲಿ ತನ್ನ ಎದುರಾಳಿಗಳನ್ನು ಸದೆಬಡಿಯಲು ನಾಯಕ ಸುತ್ತಿಗೆ ಬಳಸಿರುವುದು ಗೊತ್ತೇ ಇದೆ. ಇವೇ ದೃಶ್ಯ ಈ ಕೊಲೆ, ಹಲ್ಲೆಗಳ ಆರೋಪಿಗಳ ಮೇಲೆ ಪ್ರಭಾವ ಬೀರಿರಬಹುದಾ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಮೇ 12ರಂದು ನಡೆದ ಶ್ವೇತಾ ರೆಡ್ಡಿ ಅವರ ಪ್ರಿಯಕರ ಯಶ್ಮಕುಮಾರ್ ಅವರ ಕೊಲೆಯಲ್ಲೂ ಸುತ್ತಿಗೆಯನ್ನು ಬಳಸಲಾಗಿತ್ತು. ಸೈಬರಾಬಾದ್ ಪೊಲೀಸರ ಪ್ರಕಾರ, ಮೀರಪೇಟ್‌ನ ಪ್ರಶಾಂತ್ ಹಿಲ್ಸ್‌ನಲ್ಲಿ ವಾಸಿಸುತ್ತಿದ್ದ ಶ್ವೇತಾ ರೆಡ್ಡಿ (32) ಅಂಬರ್‌ಪೇಟ್ ಮೂಲದ ಛಾಯಾಗ್ರಾಹಕ ಯಶ್‌ಕುಮಾರ್ (32) ಅವರೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದರು. ಯಶ್ ಮತ್ತು ಶ್ವೇತಾ ಫೇಸ್‌ಬುಕ್‌ನಲ್ಲಿ ಸ್ನೇಹಿತರಾಗಿ ಪರಿಚಯವಾಗಿ, ನಂತರ ಪ್ರೇಮಿಗಳಾಗಿದ್ದರು.

ಮೊದಲೇ ಪ್ಲಾನ್​ ಮಾಡಿದ್ದ ಆರೋಪಿ : ಸ್ವಲ್ಪ ಸಮಯದ ನಂತರ ಯಶ್ ತನ್ನನ್ನು ಮದುವೆಯಾಗುವಂತೆ ಶ್ವೇತಾಳನ್ನು ಒತ್ತಾಯಿಸಿದ್ದಾನೆ. ಇಲ್ಲದೇ ಇದ್ದರೆ ತಮ್ಮ ಸಂಬಂಧದ ಬಗ್ಗೆ ಪತಿಗೆ ಹೇಳುವುದಾಗಿ ಬ್ಲ್ಯಾಕ್​ಮೇಲ್​ ಮಾಡಿದ್ದಾನೆ. ಹೀಗಾಗಿ, ಯಶ್‌ನ ಕಿರಿಕಿರಿಯಿಂದ ಹೊರ ಬರಲು ಶ್ವೇತಾ ಪ್ಲಾನ್ ಮಾಡಿದ್ದಳು.

ಮತ್ತೊಬ್ಬ ಫೇಸ್‌ಬುಕ್ ಸ್ನೇಹಿತ ಕೃಷ್ಣಾ ಜಿಲ್ಲೆಯ ಕೊಂಗಲ ಅಶೋಕ್ (28) ಸಹಾಯದಿಂದ ಯಶ್‌ನನ್ನು ಕೊಲ್ಲಲು ನಿರ್ಧರಿಸಿದ್ದಳು. ಯಶ್​ನನ್ನು ಭೇಟಿಯಾಗಲು ಬರಲು ಹೇಳಿ, ಆತ ಬಂದಾಗ, ಅಶೋಕ್ ಯಶ್​ಗೆ ಸುತ್ತಿಗೆಯಿಂದ ಹೊಡೆದಿದ್ದಾನೆ. ಯಶ್​ನನ್ನು ಆಸ್ಪತ್ರೆಗೆ ದಾಖಲಿಸಿತಾದರೂ ಚಿಕಿತ್ಸೆ ಪಲಕಾರಿಯಾಗದೇ ಸಾವನ್ನಪ್ಪಿದ್ದಾನೆ. ನಂತರದಲ್ಲಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ .

ಇದೇ ಮಾದರಿಯಲ್ಲಿ ನಡೆಯಿತು ಮತ್ತೊಂದು ಕೊಲೆ : ಇನ್ನೊಂದು ಘಟನೆಯೆಂದರೆ, ಮೇ 3ರಂದು ಅಬ್ದುಲ್ಲಾಪುರಮೆಟ್‌ನಲ್ಲಿ ಜ್ಯೋತಿ ಮತ್ತು ಆಕೆಯ ಗೆಳೆಯ ಯಶವಂತ್ ಅವರನ್ನು ಆಕೆಯ ಪತಿ ಶ್ರೀನಿವಾಸ ರಾವ್ ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿದ್ದರು. ಪೊಲೀಸರ ಪ್ರಕಾರ, ಜ್ಯೋತಿ ತನ್ನ ಮನೆಯ ಸಮೀಪವಿದ್ದ ಯಶವಂತ್ ಎಂಬ ಕ್ಯಾಬ್ ಚಾಲಕನನ್ನು ಭೇಟಿಯಾಗಿದ್ದಳು. ಪರಸ್ಪರ ಪರಿಚಯವಾದ ಕೆಲವು ದಿನಗಳ ನಂತರ ಅವರ ಸ್ನೇಹ ಸಂಬಂಧಕ್ಕೆ ತಿರುಗಿತ್ತು.

ಈ ವಿಚಾರ ತಿಳಿದ ಶ್ರೀನಿವಾಸ್​​​, ಜ್ಯೋತಿ ಅವರ ಜೊತೆ ಜಗಳವಾಡಿದ್ದಾರೆ. ಆ ಸಂದರ್ಭದಲ್ಲಿ ಗಂಡನ ಜೊತೆ ತನಗೆ ಇಬ್ಬರೂ ಬೇಕು ಎಂದು ಹೇಳಿದ್ದಾಳೆ. ಅವಳ ಉತ್ತರದಿಂದ ಕೋಪಗೊಂಡ ಶ್ರೀನಿವಾಸ್​ ಇಬ್ಬರನ್ನೂ ಕೊಲೆ ಮಾಡಲು ನಿರ್ಧರಿಸಿದ್ದ. ಕೋಟಗುಡೆಂ ಸೇತುವೆ ಬಳಿಯ ನಿರ್ಜನ ಪ್ರದೇಶಕ್ಕೆ ಮೂವರು ಹೋಗಿದ್ದಾಗ, ಶ್ರೀನಿವಾಸ್ ಇಬ್ಬರನ್ನು ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿದ್ದಾರೆ. ನಂತರ ಪೊಲೀಸರಿಗೆ ಶವಗಳು ಪತ್ತೆಯಾಗಿದ್ದು, ತನಿಖೆ ಪ್ರಾರಂಭಿಸಿದ್ದಾರೆ.

ಇದನ್ನೂ ಓದಿ: ಖಲಿಸ್ತಾನ್ ಧ್ವಜ, ಬರಹ ಪ್ರಕರಣ: ಪೊಲೀಸರ ಭರ್ಜರಿ ಕಾರ್ಯಾಚರಣೆ, ಎರಡನೇ ಆರೋಪಿ ಅಂದರ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.