ETV Bharat / bharat

ಸೆಂಟ್ರಲ್​ ಜೈಲಿನಲ್ಲಿದ್ದೇ ಬಾಲಕಿಯ ಅಶ್ಲೀಲ ವಿಡಿಯೋ ಅಪ್​ಲೋಡ್​ ಮಾಡಿದ ಕೊಲೆ ಆರೋಪಿ! - ಬಿಲಾಸ್ಪುರ ಕೇಂದ್ರ ಕಾರಗೃಹ,

ಕೊಲೆ ಆರೋಪಿವೋರ್ವ ಸೆಂಟ್ರಲ್​ ಜೈಲಿನಲ್ಲಿದ್ದೇ ಬಾಲಕಿವೋರ್ವಳ ಅಶ್ಲೀಲ ವಿಡಿಯೋ ಅಪ್​ಲೋಡ್​ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಚತ್ತೀಸ್​ಗಡ್​ದಲ್ಲಿ ಈ ಪ್ರಕರಣ ನಡೆದಿದೆ.

Murder accused uploads child pornographic video, Murder accused uploads child pornographic video from Jail, Bilaspur central Jail, Bilaspur central Jail news, ಬಾಲಕಿಯ ಅಶ್ಲೀಲ ವಿಡಿಯೋ ಅಪ್​ಲೋಡ್​ ಮಾಡಿದ ಕೊಲೆ ಆರೋಪಿ, ಜೈಲಿ​ನಿಂದ ಬಾಲಕಿಯ ಅಶ್ಲೀಲ ವಿಡಿಯೋ ಅಪ್​ಲೋಡ್​ ಮಾಡಿದ ಕೊಲೆ ಆರೋಪಿ, ಬಿಲಾಸ್ಪುರ ಕೇಂದ್ರ ಕಾರಗೃಹ, ಬಿಲಾಸ್ಪುರ ಕೇಂದ್ರ ಕಾರಗೃಹ ಸುದ್ದಿ,
ಸೆಂಟ್ರಲ್​ ಜೈಲಿನಲ್ಲಿದ್ದೇ ಬಾಲಕಿಯ ಅಶ್ಲೀಲ ವಿಡಿಯೋ ಅಪ್​ಲೋಡ್​ ಮಾಡಿದ ಕೊಲೆ ಆರೋಪಿ
author img

By

Published : Feb 13, 2021, 10:26 AM IST

ಬಿಲಾಸ್ಪುರ: ಬಿಲಾಸ್ಪುರ್ ಕೇಂದ್ರ ಕಾರಾಗೃಹದಲ್ಲಿ ಕೊಲೆ ಆರೋಪಿವೋರ್ವ ಮತ್ತೊಂದು ದುಷ್ಕೃತ್ಯ ಎಸಗಿದ್ದಾನೆ. ಕಂಪ್ಯೂಟರ್​ವೊಂದರಿಂದ ಬಾಲಕಿಯ ಅಶ್ಲೀಲ ವಿಡಿಯೋವನ್ನು ಅಪ್‌ಲೋಡ್ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ತ್ರಿಲೋಚನ್​ ದೇವಾಂಗನ್​ ಎಂಬ ಆರೋಪಿಗೆ ಬಾಲಾಪರಾಧಿ ನ್ಯಾಯ ಕಾಯ್ದೆಯಡಿ ಕಂಪ್ಯೂಟರ್ ಸಂಬಂಧಿತ ಕೆಲವು ಕಾರ್ಯಗಳನ್ನು ನೀಡಲಾಗಿತ್ತು. 2020 ಜುಲೈ 20 ರಂದು ಬಾಲಕಿಯ ಅಶ್ಲೀಲ ವಿಡಿಯೋವೊಂದನ್ನು ಅಪ್‌ಲೋಡ್ ಮಾಡಿದ್ದ. ಈ ಘಟನೆ ಫೆಬ್ರವರಿ 12 ರಂದು ಬೆಳಕಿಗೆ ಬಂದಿದೆ ಎಂದು ಪೊಲೀಸ್​ ಅಧಿಕಾರಿ ಸನೀಪ್​ ರಾಣೆ ತಿಳಿಸಿದ್ದಾರೆ.

ಜೈಲಿನಲ್ಲಿರುವ ಕಂಪ್ಯೂಟರ್‌ನಿಂದ ಅಶ್ಲೀಲ ವಿಡಿಯೋವೊಂದು ಅಪ್‌ಲೋಡ್ ಮಾಡಲಾಗಿದೆ ಎಂದು ಪೊಲೀಸ್ ಪ್ರಧಾನ ಕಚೇರಿಗೆ ನ್ಯಾಷನಲ್ ಕ್ರೈಮ್ ರೆಕಾರ್ಡ್ ಬ್ಯೂರೋ (ಎನ್‌ಸಿಆರ್‌ಬಿ) ತಿಳಿಸಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಐಪಿ ವಿಳಾಸವನ್ನು ಪತ್ತೆ ಮಾಡುತ್ತಿದ್ದಾರೆ.

ಐಟಿ ಕಾಯ್ದೆಯ ಸೆಕ್ಷನ್ 67 ಮತ್ತು ಐಪಿಸಿ ಕಾಯ್ದೆಯ ಇತರ ನಿಬಂಧನೆಗಳ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಕೊಲೆ ಆರೋಪದ ಮೇಲೆ ಆರೋಪಿಯನ್ನು 2011ರಲ್ಲಿ ಬಿಲಾಸ್ಪುರ ಕೇಂದ್ರ ಕಾರಾಗೃಹಕ್ಕೆ ಶಿಫ್ಟ್​ ಮಾಡಲಾಗಿತ್ತು ಎಂದು ಪೊಲೀಸ್​ ಅಧಿಕಾರಿ ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.