ETV Bharat / bharat

ಅಂಧೇರಿ ಗಣಪನಿಗೆ 34 ಕೆಜಿ ಚಿನ್ನದಲಂಕಾರ.. 7ಕೋಟಿ ವಿಮೆ, ದರ್ಶನಕ್ಕೆ ಬರುವ ಭಕ್ತರಿಗೆ ತುಂಡುಡುಗೆ ನಿಷಿದ್ಧ - ganesha utsav 2022

ಮುಂಬೈನ ಅಂಧೇರಿಯಲ್ಲಿ ಪ್ರತಿಷ್ಠಾಪಿಸಲಾದ ರಾಜ ಗಣಪ ಹಲವು ಕಾರಣಗಳಿಂದ ಸುದ್ದಿಯಾಗಿದ್ದಾನೆ. ವಿನಾಯಕನಿಗೆ ಭಕ್ತರೊಬ್ಬರು ನೀಡಿದ 34 ಕೆಜಿ ಚಿನ್ನವನ್ನು ತೊಡಿಸಲಾಗಿದೆ. ದರ್ಶನಕ್ಕೆ ಬರುವ ಭಕ್ತರು ತುಂಡುಡುಗೆ ಧರಿಸುವಂತಿಲ್ಲ ಎಂಬ ನಿಯಮ ಹಾಕಲಾಗಿದೆ.

mumbais-andheri-ganesha
ಅಂಧೇರಿ ಗಣಪನಿಗೆ 34 ಕೆಜಿ ಚಿನ್ನದಲಂಕಾರ
author img

By

Published : Sep 1, 2022, 5:24 PM IST

ಮುಂಬೈ: 57 ವರ್ಷಗಳ ಇತಿಹಾಸ. 34 ಕೆಜಿ ಬಂಗಾರ. 7.80 ಕೋಟಿ ರೂಪಾಯಿ ವಿಮೆ. ದರ್ಶನಕ್ಕೆ ಬರುವ ಭಕ್ತರು ತುಂಡುಡುಗೆ ಧರಿಸುವಂತಿಲ್ಲ. 250 ಕ್ಕೂ ಹೆಚ್ಚು ಸ್ವಯಂ ಸೇವಕರಿಂದ ನಿರ್ಮಿಸಲಾದ ವಡೋದರದ ಲಕ್ಷ್ಮಿ ವಿಲಾಸ ಅರಮನೆ ಮಾದರಿ. ಇದಿಷ್ಟು ಇಲ್ಲಿನ ಅಂಧೇರಿಯಲ್ಲಿ ಪ್ರತಿಷ್ಠಾಪಿಸಲಾದ ರಾಜ ಗಣಪತಿಯ ವಿಶೇಷತೆಗಳು.

ಮುಂಬೈನ ಅಂಧೇರಿಯಲ್ಲಿ 57 ವರ್ಷಗಳಿಂದ ಪ್ರತಿಷ್ಠಾಪಿಸಲಾಗುವ ರಾಜ ಗಣಪತಿ ಈ ಸಲದ ಸಿರಿವಂತ ವಿನಾಯಕ ಎಂದೇ ಹೇಳಬಹುದು. ಈ ವಿನಾಯಕನಿಗೆ ಬರೋಬ್ಬರಿ 34 ಕೆಜಿ ಚಿನ್ನವನ್ನು ತೊಡಿಸಲಾಗಿದೆ. ವಡೋದರದಲ್ಲಿರುವ ಲಕ್ಷ್ಮಿ ವಿಲಾಸ ಅರಮನೆ ಮಾದರಿಯಲ್ಲಿ ನಿರ್ಮಿಸಲಾಗಿರುವ ಪೆಂಡಾಲ್​ನಲ್ಲಿ ರಾಜ ಗಣಪತಿ ಮೆರೆಯುತ್ತಿದ್ದಾನೆ.

ಭಾರೀ ಮೆಚ್ಚುಗೆ ಪಡೆದ ಈ ವಿನಾಯಕನ ದರ್ಶನ ಪಡೆಯಲು ಜನರು ತಂಡೋಪತಂಡವಾಗಿ ಬರುತ್ತಿದ್ದು, ಭಾರೀ ಮೊತ್ತದ ಚಿನ್ನವನ್ನು ತೊಡಿಸಿದ ಕಾರಣ 7.80 ಕೋಟಿ ರೂಪಾಯಿ ವಿಮೆ ಮಾಡಿಸಲಾಗಿದೆ. ಅಲ್ಲದೇ, ಇಲ್ಲಿನ ಗಣಪನಿಗಾಗಿ 250 ಕ್ಕೂ ಅಧಿಕ ಸ್ವಯಂಸೇವಕರು ಭದ್ರತೆ ನೀಡುತ್ತಿದ್ದಾರೆ.

14 ದಿನಗಳ ಕಾಲ ನಡೆಯುವ ಪೂಜೆಯಲ್ಲಿ ಭಾಗವಹಿಸುವ ಮಹಿಳೆ ಮತ್ತು ಪುರುಷ ಭಕ್ತರು ದರ್ಶನಕ್ಕೆ ಬಂದಾಗ ತುಂಡುಡುಗೆಯನ್ನು ಧರಿಸುವಂತಿಲ್ಲ ಎಂದು ಗಣೇಶ ಪ್ರತಿಷ್ಠಾಪನಾ ಮಂಡಳಿ ನಿಯಮ ಹಾಕಿದೆ. ಅಂದಹಾಗೆ ರಾಜ ಗಣಪನಿಗೆ ಹಾಕಿರುವ 34 ಕೆಜಿ ಚಿನ್ನದೊಡವೆ ಭಕ್ತರೊಬ್ಬರು ನೀಡಿದ್ದಾರೆ ಎಂಬುದು ಗಮನಾರ್ಹ ಸಂಗತಿಯಾಗಿದೆ.

ಓದಿ: ಬೆಂಗಳೂರಿನಲ್ಲಿ 1.59 ಲಕ್ಷ ಗಣೇಶ ಮೂರ್ತಿಗಳ ವಿಸರ್ಜನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.