ಮುಂಬೈ : ಹೆಂಡತಿಗೆ ಕಿರುಕುಳ ನೀಡಿ, ಆತ್ಮಹತ್ಯೆಗೆ ಪ್ರಚೋದಿಸಿದ ಆರೋಪದಡಿ ಮುಂಬೈನ ಭಂಡಪ್ ಪೊಲೀಸರು ಪ್ರಸಿದ್ಧ ಯೂಟ್ಯೂಬರ್ ಜಿತೇಂದ್ರರನ್ನು ಬಂಧಿಸಿದ್ದಾರೆ.
ಕಳೆದ ಎರಡು-ಮೂರು ತಿಂಗಳ ಹಿಂದೆ ಇನ್ಸ್ಟಾದಲ್ಲಿ ಪ್ರೀತಿಸಿ ಕುಟುಂಬದ ವಿರೋಧದ ನಡುವೆಯೂ ಪ್ರಿಯಕರನನ್ನು ವರಿಸಿದ್ದ ಯುವತಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಏಪ್ರಿಲ್ 14ರಂದು ಕೋಮಲ್ ಅಗರ್ವಾಲ್ (23) ಹಾಗೂ ಯೂಟ್ಯೂಬರ್ ಜಿತೇಂದ್ರ ಅಗರ್ವಾಲ್ (26) ಮದುವೆಯಾಗಿದ್ದಾರೆ. ಬಳಿಕ ಇಬ್ಬರು ಸಣ್ಣಪುಟ್ಟ ವಿಷಯಗಳಿಗೆ ಜಗಳವಾಡಲು ಪ್ರಾರಂಭಿಸಿ, ಕೋಮಲ್ಗೆ ಜಿತೇಂದ್ರ ಮಾನಸಿಕ, ದೈಹಿಕವಾಗಿ ಹಿಂಸೆ ನೀಡುತ್ತಿದ್ದ ಎನ್ನಲಾಗ್ತಿದೆ.
ಇದನ್ನೂ ಓದಿ:ಕೊಚ್ಚಿ ಬ್ಯೂಟಿ ಪಾರ್ಲರ್ ಫೈರಿಂಗ್ ಕೇಸ್: ಕ್ರೈಂ ಬ್ರಾಂಚ್ ಕಸ್ಟಡಿಗೆ ರವಿ ಪೂಜಾರಿ
ಯುವತಿ ಕುಟುಂಬಸ್ಥರು ನೀಡಿದ ದೂರಿನಡಿ ಯೂಟ್ಯೂಬರ್ನನ್ನು ಬಂಧಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.