ಮುಂಬೈ: ಇದು ಆನ್ಲೈನ್ ಯುಗ ಎಲ್ಲವೂ ಅದರಲ್ಲೇ ನಡೆಯುತ್ತೆ. ಎ ಯಿಂದ ಝೆಡ್ವರೆಗೂ ಆನ್ಲೈನ್ನಲ್ಲೇ ಆರ್ಡರ್ ಮಾಡುತ್ತೇವೆ. ಆದೇ ಈಗ ಕೆಲವು ಸೈಬರ್ ಕಳ್ಳರಿಗೆ ವರದಾನವಾಗಿದೆ. ಒಂದು ಪಿಜ್ಜಾ ವಿಷಯದಲ್ಲಿ ಅಜ್ಜಿಯೋರ್ವರು ಲಕ್ಷಾಂತರ ರೂ. ಹಣ ಕಳೆದುಕೊಂಡು ಬೆಪ್ಪರಾಗಿದ್ದಾರೆ.
ಮುಂಬೈನ ಅಂಧೇರಿ ಮೂಲದ ಅಜ್ಜಿ ಆನ್‌ಲೈನ್‌ನಲ್ಲಿ ಪಿಜ್ಜಾ ಆರ್ಡರ್ ಮಾಡಿದ್ದರು. ಅದಕ್ಕಾಗಿ ಹಣ ಕೂಡ ಕಳುಹಿಸಿದ್ದರು. ಆದರೆ, ಅವರು ತಪ್ಪಾಗಿ ಬಿಲ್‌ಗಿಂತ ಹೆಚ್ಚಿನದನ್ನು ಕಳುಹಿಸಿಬಿಟ್ಟಿದ್ದಾರೆ. ಅದನ್ನು ಮರಳಿ ಪಡೆಯುವುದು ಹೇಗೆ? ಎಂದು ಆಕೆ ಮಾಹಿತಿಗಾಗಿ ಗೂಗಲ್‌ನಲ್ಲಿ ಸರ್ಚ್ ಮಾಡಿದ್ದಾರೆ.
ಇದನ್ನೂ ಓದಿ: ಹೆಂಡತಿ ಮಕ್ಕಳನ್ನು 'ಫಾಲೋ' ಮಾಡದ ರಾಜ್ ಕುಂದ್ರಾ!
ಆ ವೇಳೆ ಗೂಗಲ್ ಮಾಹಿತಿಯಂತೆ ಯಾರಿಗೋ ಕರೆ ಮಾಡಿದ್ದಾರೆ. ಆಗ ಆ ಮೋಸಗಾರರು ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿ ಎಂದು ಕೇಳಿ ಆ ಆ್ಯಪ್‌ನಿಂದ ಸೈಬರ್ ಕಳ್ಳರು ಅಜ್ಜಿಯ ಬ್ಯಾಂಕ್ ವಿವರಗಳು ಮತ್ತು ಪಾಸ್‌ವರ್ಡ್‌ಗಳನ್ನು ಪಡೆದುಕೊಂಡು 11 ಲಕ್ಷಕ್ಕೂ ಹೆಚ್ಚು ಹಣವನ್ನು ಅವರ ಬ್ಯಾಂಕ್ನಿಂದ ಎಗರಿಸಿದ್ದಾರೆ.
ಘಟನೆ ಸಂಬಂಧ ಅಜ್ಜಿ ಸೈಬರ್ ಪೊಲೀಸರಿಗೆ ದೂರು ನೀಡಿದ್ದು, ತನಿಖೆ ಆರಂಭವಾಗಿದೆ.