ETV Bharat / bharat

ಹೃದಯಾಘಾತ: 3 ಬಾರಿ ರಾಷ್ಟ್ರೀಯ ಪ್ರಶಸ್ತಿ ವಿಜೇತ ನಟಿ ನಿಧನ

ಮೂರು ಬಾರಿ ರಾಷ್ಟ್ರೀಯ ಪ್ರಶಸ್ತಿ ವಿಜೇತ ನಟಿ ಸುರೇಖಾ ಸಿಕ್ರಿ ಇಂದು ಬೆಳಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Surekha Sikri
ಸುರೇಖಾ ಸಿಕ್ರಿ
author img

By

Published : Jul 16, 2021, 10:54 AM IST

ಮುಂಬೈ: ಮೂರು ಬಾರಿ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರಾದ ನಟಿ ಸುರೇಖಾ ಸಿಕ್ರಿ (75) ಇಂದು ಹೃದಯಾಘಾತದಿಂದ ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರಿಗೆ 2020ರಲ್ಲಿ ಬ್ರೈನ್ ಸ್ಟ್ರೋಕ್ ಮತ್ತು ಪಾರ್ಶ್ವವಾಯುನಿಂದ ಬಳಲುತ್ತಿದ್ದರು.

"ಮೂರು ಬಾರಿಯ ರಾಷ್ಟ್ರೀಯ ಪ್ರಶಸ್ತಿ ವಿಜೇತ ನಟಿ, ಸುರೇಖಾ ಸಿಕ್ರಿ ಇಂದು ಬೆಳಗ್ಗೆ ಹೃದಯಾಘಾತದಿಂದ ನಿಧನರಾದರು. ಎರಡನೇ ಬಾರಿ ಬ್ರೈನ್​ ಸ್ಟ್ರೋಕ್​​ ಆಗಿದ್ದು, ಅನೇಕ ಆರೋಗ್ಯ ಸಂಬಂಧಿ ಕಾಯಿಲೆಯಿಂದ ಅವರು ಬಳಲುತ್ತಿದ್ದರು." ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಅನುಭವಿ ನಟಿಯು ಖ್ಯಾತ ಸಿನಿಮಾ, ದೂರದರ್ಶನ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಅವರು 1978ರ ರಾಜಕೀಯ ಡ್ರಾಮ 'ಕಿಸ್ಸಾ ಕುರ್ಸಿ ಕಾ' ಚಿತ್ರದ ಮೂಲಕ ಪದಾರ್ಪಣೆ ಮಾಡಿದ್ದರು. ವಿವಿಧ ಉದ್ಯಮಗಳಲ್ಲಿನ ಚಲನಚಿತ್ರಗಳಲ್ಲಿ ಲೇಖಕ - ಬೆಂಬಲಿತ ಪಾತ್ರಗಳನ್ನು ನಿರ್ವಹಿಸಿದರು. ತಮಾಸ್ (1988), ಮಾಮ್ಮೊ (1995) ಮತ್ತು ಬಾದೈ ಹೋ (2018) ಚಿತ್ರಕ್ಕೆ ಮೂರು ಬಾರಿ ಅತ್ಯುತ್ತಮ ಪೋಷಕ ನಟಿಗಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದಿದ್ದಾರೆ.

ಉತ್ತರಪ್ರದೇಶದಲ್ಲಿ ಜನಿಸಿದ ಅವರು 1971ರಲ್ಲಿ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ (ಎನ್‌ಎಸ್‌ಡಿ)ದಿಂದ ಪದವಿ ಪಡೆದರು. ಅವರು 1989ರಲ್ಲಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಯನ್ನೂ ಸಹ ಪಡೆದಿದ್ದಾರೆ. ನಟಿಯ ತಂದೆ ವಾಯುಸೇನೆಯಲ್ಲಿ ಕಾರ್ಯನಿರ್ವಹಿಸಿದ್ದು, ತಾಯಿ ಶಿಕ್ಷಕರಾಗಿದ್ದರು. ಇನ್ನು ಸುರೇಖಾ ಅವರು ಹೇಮಂತ್ ರೇ ಎಂಬುವರನ್ನು ವಿವಾಹವಾಗಿದ್ದು, ಇವರಿಗೆ ರಾಹುಲ್ ಸಿಕ್ರಿ ಎಂಬ ಮಗನಿದ್ದಾನೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.