ETV Bharat / bharat

ಅಶ್ಲೀಲ ಚಿತ್ರ ದಂಧೆ: ಬಂಧಿತ ರಾಜ್ ಕುಂದ್ರಾ ಪತ್ನಿ ಶಿಲ್ಪಾ ಶೆಟ್ಟಿ ವಿಚಾರಣೆ? - ಬಂಧಿತ ರಾಜ್ ಕುಂದ್ರಾ ಪತ್ನಿ ಶಿಲ್ಪಾ ಶೆಟ್ಟಿ

ಅಶ್ಲೀಲ ಚಿತ್ರ ನಿರ್ಮಾಣ ಮಾಡಿ ಅವುಗಳನ್ನು ಕೆಲ ಆ್ಯಪ್​ಗಳಲ್ಲಿ ಪ್ರಕಟಿಸುತ್ತಿದ್ದ ಆರೋಪದ ಮೇಲೆ ರಾಜ್​​ ಕುಂದ್ರಾ ಬಂಧನವಾಗಿದ್ದು, ಇದೀಗ ಅವರ ಪತ್ನಿ ಶಿಲ್ಪಾ ಶೆಟ್ಟಿ ವಿಚಾರಣೆಗೊಳಪಡುವ ಸಾಧ್ಯತೆ ಇದೆ.

Shilpa Shetty
Shilpa Shetty
author img

By

Published : Jul 22, 2021, 4:29 PM IST

ಮುಂಬೈ: ಅಶ್ಲೀಲ ಚಿತ್ರ ನಿರ್ಮಾಣ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್​ ಕುಂದ್ರಾ ಬಂಧನವಾಗಿದ್ದು, ಜುಲೈ 23ರವರೆಗೆ ನ್ಯಾಯಾಂಗ ವಶಕ್ಕೆ ಪಡೆದುಕೊಂಡಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಇದರ ಮಧ್ಯೆ ಅವರ ಪತ್ನಿಯನ್ನು ತನಿಖೆಗೊಳಪಡಿಸುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮಾತನಾಡಿರುವ ಮುಂಬೈ ಜಂಟಿ ಪೊಲೀಸ್ ಆಯುಕ್ತ ಮಿಲಿಂದ್ ಭಾರಂದೆ, ಈ ಪ್ರಕರಣದಲ್ಲಿ ಶಿಲ್ಪಾ ಶೆಟ್ಟಿ ಪಾತ್ರ ಕಂಡು ಬಂದಿಲ್ಲ ಎಂದಿದ್ದಾರೆ. ಆದರೂ ವಿಚಾರಣೆಗೊಳಪಡಿಸಿ, ಮಾಹಿತಿ ಪಡೆದುಕೊಳ್ಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

Shilpa Shetty
ರಾಜ್​ ಕುಂದ್ರಾ ಪತ್ನಿ ಶಿಲ್ಪಾ ಶೆಟ್ಟಿ

ಇದನ್ನೂ ಓದಿ: ತೆಲಂಗಾಣದಲ್ಲಿ ಭಾರೀ ಮಳೆ, ಪ್ರವಾಹ ಪರಿಸ್ಥಿತಿ: ಸ್ವಕ್ಷೇತ್ರದಲ್ಲಿರುವಂತೆ ಜನಪ್ರತಿನಿಧಿಗಳಿಗೆ ಸಿಎಂ ಸೂಚನೆ

ನಿನ್ನೆ ರಾತ್ರಿ ಕುಂದ್ರಾ ಕಚೇರಿ ಮೇಲೆ ದಾಳಿ ನಡೆಸಿದ್ದ ಪೊಲೀಸರು ಲ್ಯಾಪ್​ಟಾಪ್​, ಕಂಪ್ಯೂಟರ್ಸ್​, ಹಾರ್ಡ್​ಡಿಸ್ಕ್ ಸೇರಿದಂತೆ ಕೆಲವೊಂದು ಇಲೆಕ್ಟ್ರಿಕಲ್​ ಗ್ಯಾಜೆಟ್​ ವಶಕ್ಕೆ ಪಡೆದುಕೊಂಡಿದ್ದಾರೆ. ಜೊತೆಗೆ ಪ್ರಕರಣದಲ್ಲಿ ಭಾಗಿಯಾಗಿರುವ ರಾಜ್​ ಕುಂದ್ರಾ ಸೋದರ ಮಾವ ಪ್ರದೀಪ್​ ಬಕ್ಷಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಲಂಡನ್​ನಲ್ಲಿ ಇವರ ಹೆಸರಿನಲ್ಲೇ ಕೆನ್ರಿನ್ ಎಂಬ ಕಂಪನಿಯಿದ್ದು, ಅಲ್ಲಿಗೆ ರಾಜ್​​ ಕುಂದ್ರಾ ಅಶ್ಲೀಲ ವಿಡಿಯೋ ರವಾನೆ ಮಾಡುತ್ತಿದ್ದರು.

ಈ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಈಗಾಗಲೇ 9 ಜನರ ಬಂಧನ ಮಾಡಲಾಗಿದ್ದು, ಹೆಚ್ಚಿನ ಮಾಹಿತಿ ಕಲೆಹಾಕಲಾಗುತ್ತಿದೆ. ಶಿಲ್ಪಾ ಶೆಟ್ಟಿ ಕೂಡ ಕೆಲವೊಂದು ಕಂಪನಿಗಳ ನಿರ್ದೇಶಕರಾಗಿರುವ ಕಾರಣ ಅವರನ್ನ ವಿಚಾರಣೆಗೊಳಪಡಿಸುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.