ETV Bharat / bharat

ಸರ್ಕಾರವನ್ನು ಟೀಕಿಸಿ ಹಾಡು: ಮುಂಬೈನಲ್ಲಿ ಇಬ್ಬರು ರ‍್ಯಾಪರ್​​ಗಳ ವಿರುದ್ಧ ಕೇಸು

author img

By

Published : Apr 9, 2023, 3:41 PM IST

ಮಹಾರಾಷ್ಟ್ರದಲ್ಲಿ ಸರ್ಕಾರದ ಆಡಳಿತ ವ್ಯವಸ್ಥೆಯನ್ನು ಟೀಕಿಸಿ ಹಾಡು ಹಾಡಿರುವ ಆರೋಪದಡಿ ಇಬ್ಬರು ರ‍್ಯಾಪರ್​​ಗಳ ವಿರುದ್ಧ ಥಾಣೆ ಮತ್ತು ಮುಂಬೈನಲ್ಲಿ ಪ್ರತ್ಯೇಕ ಕೇಸ್ ದಾಖಲಾಗಿದೆ.

Mumbai Police register case against rapper for anti govt song
ಹಾಡಿನಲ್ಲಿ ಆಡಳಿತ ವ್ಯವಸ್ಥೆ ಟೀಕೆ: ಇಬ್ಬರು ರ‍್ಯಾಪರ್​​ಗಳ ವಿರುದ್ಧ ಪ್ರತ್ಯೇಕ ಕೇಸ್ ದಾಖಲು

ಮುಂಬೈ (ಮಹಾರಾಷ್ಟ್ರ): ಸರ್ಕಾರ ಮತ್ತು ಆಡಳಿತ ವ್ಯವಸ್ಥೆಯನ್ನು ಟೀಕಿಸಿದ ಸಾಹಿತ್ಯವಿರುವ ಹಾಡುಗಳನ್ನು ಹಾಡಿರುವ ಕಾರಣಕ್ಕಾಗಿ ಮಹಾರಾಷ್ಟ್ರದಲ್ಲಿ ರ‍್ಯಾಪರ್​​ಗಳ ವಿರುದ್ಧ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ. ಕೆಲವು ವಾರದ ಅವಧಿಯಲ್ಲಿ ಇಬ್ಬರು ರ‍್ಯಾಪರ್​​ಗಳ ಮೇಲೆ ಪ್ರತ್ಯೇಕ ಮೊಕದ್ದಮೆಗಳನ್ನು ಹೂಡಲಾಗಿದ್ದು, ವಿಚಾರಣೆಗೂ ಒಳಪಡಿಸಲಾಗಿದೆ.

ಶಿವಸೇನೆ ಮತ್ತು ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ಅವಹೇಳನಕಾರಿ ಭಾಷೆ ಬಳಸಿದ ಆರೋಪದಲ್ಲಿ ಬುಧವಾರ ರ‍್ಯಾಪರ್​​ ರಾಜ್ ಮುಂಗ್ಸೆ ವಿರುದ್ಧ ಥಾಣೆ ಜಿಲ್ಲೆಯ ಅಂಬರನಾಥ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ರ‍್ಯಾಪರ್​​ ರಾಜ್ ಮುಂಗ್ಸೆ ತಮ್ಮ ಹಾಡಿನಲ್ಲಿ ಯಾರ ಹೆಸರನ್ನೂ ಬಳಸದೆ ಬಳಸದೇ ಸರ್ಕಾರವನ್ನು ಟೀಕಿಸಿದ್ದರು ಎನ್ನಲಾಗಿದೆ.

ಮತ್ತೊಂದೆಡೆ, ಶುಕ್ರವಾರ ಮುಂಬೈನ ವಡಾಲಾ ಪ್ರದೇಶದ ರ‍್ಯಾಪರ್ ಉಮೇಶ್ ಖಾಡೆ ವಿರುದ್ಧ ಮುಂಬೈ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಅಪರಾಧ ಗುಪ್ತಚರ ಘಟಕದ ಅಧಿಕಾರಿಯೊಬ್ಬರು ನೀಡಿದ ದೂರಿನ ಮೇಲೆ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ. ರ‍್ಯಾಪರ್ ಉಮೇಶ್ ಖಾಡೆ "ಭೋಂಗ್ಲಿ ಕೇಲಿ ಜನತಾ" (ಜನರು ಎದುರಿಸುತ್ತಿರುವ ನೋವು ಉಲ್ಲೇಖಿಸಿ) ಎಂಬ ರಚಿಸಿದ್ದರು. ಇದನ್ನು ಖಾಡೆ ತಮ್ಮ ಶಂಭೋ ಎಂಬ ಖಾತೆಯ ಹೆಸರನ್ನು ಹೊಂದಿರುವ ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದ್ದರು. ಈ ಹಾಡು ವೈರಲ್ ಆಗಿದೆ ಎಂದು ಪೊಲೀಸರು ಹೇಳಿದ್ದಾರೆ.

ದೂರಿನ ಮೇರೆಗೆ ಖಾಡೆ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 504 (ಶಾಂತಿ ಭಂಗ), 505(2) (ದ್ವೇಷ ಉತ್ತೇಜಿಸುವ ಹೇಳಿಕೆಗಳು), ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆ- 2000ರ ಸೆಕ್ಷನ್ 67 (ವಿದ್ಯುನ್ಮಾನ ರೂಪದಲ್ಲಿ ಅಶ್ಲೀಲ ವಸ್ತುಗಳನ್ನು ಪ್ರಕಟಿಸುವುದು ಅಥವಾ ರವಾನಿಸುವುದು) ಅಡಿ ಕೇಸ್​ ದಾಖಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಶುಕ್ರವಾರ ಎಫ್‌ಐಆರ್ ದಾಖಲಾದ ನಂತರ ಆರೋಪಿ ರ‍್ಯಾಪರ್​ಗೆ ತನಿಖಾಧಿಕಾರಿಯ ಮುಂದೆ ಹಾಜರಾಗುವಂತೆ ನೋಟಿಸ್ ನೀಡಲಾಗಿತ್ತು. ಅಂತೆಯೇ ಉಮೇಶ್ ಖಾಡೆ ವಿಚಾರಣೆಗೆ ಹಾಜರಾಗಿದ್ದರು. ಆದರೆ, ಈತನನ್ನು ಬಂಧಿಸಿಲ್ಲ ಎಂದು ಅಧಿಕಾರಿ ಸ್ಪಷ್ಟಪಡಿಸಿದ್ದಾರೆ. ಇದೇ ವೇಳೆ ಪೊಲೀಸರ ಕ್ರಮವನ್ನು ಖಂಡಿಸಿರುವ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (ಎನ್​ಸಿಪಿ)ದ ನಾಯಕ ಜಿತೇಂದ್ರ ಅವ್ಹಾದ್, ರ‍್ಯಾಪರ್ ಖಾಡೆ ಅವರ ಹಾಡಿನಲ್ಲಿ ಆಕ್ಷೇಪಾರ್ಹ ವ್ಯಕ್ತಪಡಿಸುವಂತದ್ದು ಏನಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಆರ್ಥಿಕ ಸಂಕಷ್ಟ: ಕ್ಯಾನ್ಸರ್​ನಿಂದ ಬಳಲುತ್ತಿದ್ದ ಪತ್ನಿಯ ಕೊಂದು ವೃದ್ಧ ಆತ್ಮಹತ್ಯೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.