ETV Bharat / bharat

ಖಾತೆ ಫ್ರೀಜ್​ ಮಾಡಿ ಸೈಬರ್​ ವಂಚಕರಿಂದ 3.70 ಕೋಟಿ ಹಣ ಹಿಂಪಡೆದ ಮುಂಬೈ ಪೊಲೀಸರು​

Cyber fraud case: ವಂಚಿಸುತ್ತಿರುವುದು ತಿಳಿಯುತ್ತಿದ್ದಂತೆ ಮಹಿಳೆಯ ಸೈಬರ್​ ಸಹಾಯವಾಣಿಗೆ ಕರೆ ಮಾಡಿ ತಿಳಿಸಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಮುಂಬೈ ಪೊಲೀಸರು ಬ್ಯಾಂಕ್​ ಖಾತೆಗಳನ್ನು ಫ್ರೀಜ್​ ಮಾಡಿ, 3.70 ಕೋಟಿ ರೂ.ಗಳನ್ನು ಹಿಂಪಡೆದಿದ್ದಾರೆ.

Cyber Crime
ಸೈಬರ್​ ಕ್ರೈಂ
author img

By PTI

Published : Jan 9, 2024, 10:31 AM IST

ಮುಂಬೈ: ಆನ್​ಲೈನ್​ ವಂಚಕರಿಂದ ವ್ಯಕ್ತಿಯೊಬ್ಬರು ಕಳೆದುಕೊಂಡ ಒಟ್ಟು 4.56 ಕೋಟಿ ರೂ.ಗಳಲ್ಲಿ ಸುಮಾರು 3.70 ಕೋಟಿ ರೂಪಾಯಿಯನ್ನು ಮುಂಬೈ ಪೊಲೀಸರು ಯಶಸ್ವಿಯಾಗಿ ರಿಕವರಿ ಮಾಡಿದ್ದಾರೆ ಎಂದು ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ. ಸೈಬರ್​ ಸಹಾಯವಾಣಿಗೆ ಬಂದ ದೂರಿನ ಮೇರೆಗೆ ತ್ವರಿತ ಕ್ರಮ ಕೈಗೊಂಡ ಮುಂಬೈ ಪೊಲೀಸರು ಖಾತೆಗಳನ್ನು ಫ್ರೀಜ್​ ಮಾಡುವ ಮೂಲಕ ಹಣವನ್ನು ರಿಕವರಿ ಮಾಡಿದ್ದಾರೆ.

"ಜ. 4ರಂದು ಮುಂಬೈ ನಗರದ ನಿವಾಸಿ ಸಂತ್ರಸ್ತ ಮಹಿಳೆ ಸೈಬರ್​ ವಂಚಕರಿಂದ 4.56 ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ. ಆನ್​ಲೈನ್​ ವಂಚಕರು ಸಂತ್ರಸ್ತ ಮಹಿಳೆಗೆ ಸ್ಟಾಕ್​ ಹೂಡಿಕೆಯಲ್ಲಿ ಆಕರ್ಷಕ ಆದಾಯ ಬರುವ ಭರವಸೆ ನೀಡಿ, ವಂಚಿಸಿದ್ದಾರೆ. ಮಹಿಳೆ ತಕ್ಷಣವೇ 1930 ಸಹಾಯವಾಣಿ ಮೂಲಕ ಮುಂಬೈ ಕ್ರೈಂ ಬ್ರಾಂಚ್​ನ ಸೈಬರ್​ ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ. ಸೈಬರ್​ ಅಧಿಕಾರಿಗಳು ತ್ವರಿತವಾಗಿ ಕಾರ್ಯಪ್ರವೃತ್ತರಾಗಿದ್ದು, ಬ್ಯಾಂಕ್​ನ ನೋಡಲ್​ ಅಧಿಕಾರಿಯೊಂದಿಗೆ ಸಮನ್ವಯ ಸಾಧಿಸಿ, ಹಣವನ್ನು ವರ್ಗಾಯಿಸಲು ಬಳಸಿದ ಬ್ಯಾಂಕ್ ಖಾತೆಗಳನ್ನು ಫ್ರೀಜ್​ ಮಾಡುವ ಮೂಲಕ 3.67 ಕೋಟಿ ರೂ.ವನ್ನು ಹಿಂಪಡೆದಿದ್ದಾರೆ" ಎಂದು ಅಧಿಕಾರಿ ಮಾಹಿತಿ ನೀಡಿದರು.

ಇದನ್ನೂ ಓದಿ: ಬೆಂಗಳೂರು: 2023ರಲ್ಲಿ 12,627 ಕೇಸ್; ಸೈಬರ್, ಕೊಲೆ, ರಾಬರಿ, ವಾಹನ ಕಳ್ಳತನ ಪ್ರಕರಣಗಳಲ್ಲಿ ಹೆಚ್ಚಳ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.