ಮುಂಬೈ: ಟಿಆರ್‌ಪಿ ರಿಗ್ಗಿಂಗ್ ಹಗರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಮುಂಬೈ ಪೊಲೀಸರು ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ.
ಪ್ರಕರಣದ ತನಿಖೆ ನಡೆಸುತ್ತಿರುವ ಅಪರಾಧ ಗುಪ್ತಚರ ಘಟಕ (ಸಿಐಯು)ದ ಪೊಲೀಸರು ಈ ಆರೋಪ ಪತ್ರವನ್ನು ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.
ಟಿಆರ್‌ಪಿ ಹಗರಣದ ತನಿಖೆ ನಡೆಸುತ್ತಿರುವ ಮುಂಬೈ ಪೊಲೀಸರು, ಬಾರ್ಕ್ ಮಾಜಿ ಸಿಇಒ ಪಾರ್ಥೋ ದಾಸ್‌ಗುಪ್ತಾ, ರಿಪಬ್ಲಿಕ್ ನ್ಯೂಸ್ ಚಾನೆಲ್ ಸಿಇಒ ವಿಕಾಸ್ ಖಾನ್ ಚಂದಾನಿ ಮತ್ತು ಬಾರ್ಕ್‌ನ ರೊಮಿಲ್ ರಾಮ್‌ಗಡಿಯಾ ವಿರುದ್ಧ ಹೆಚ್ಚುವರಿ 3,600 ಪುಟಗಳ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ.
ಇದಕ್ಕೂ ಮೊದಲು ಮುಂಬೈ ಪೊಲೀಸರು 2020 ರ ನವೆಂಬರ್‌ನಲ್ಲಿ 12 ಜನರ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿದ್ದರು.
ಇದನ್ನೂ ಓದಿ: ಟಿಆರ್‌ಪಿ ಹಗರಣ; ಬಾರ್ಕ್ ಮಾಜಿ ಸಿಇಒಗೆ 14 ದಿನ ನ್ಯಾಯಾಂಗ ಬಂಧನ