ಮುಂಬೈ : ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದಲ್ಲಿ ಎನ್‌ಸಿಬಿ ಬೇಟೆ ಮುಂದುವರಿದಿದ್ದು, ಇದೀಗ ಮಹಾರಾಷ್ಟ್ರ ಕ್ಯಾಬಿನೆಟ್ ಸಚಿವ ಮತ್ತು ಎನ್‌ಸಿಪಿ ನಾಯಕ ನವಾಬ್ ಮಲಿಕ್ ಅವರ ಅಳಿಯ ಸಮೀರ್ ಖಾನ್ನನ್ನು ಮಾದಕ ವಸ್ತು ನಿಯಂತ್ರಣ ಸಂಸ್ಥೆ (ಎನ್‌ಸಿಬಿ) ಅಧಿಕಾರಿಗಳು ಬಂಧಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಮಲಿಕ್, ಕಾನೂನಿಗಿಂತ ಯಾರೂ ಮೇಲಲ್ಲ, ಎಲ್ಲರಿಗೂ ಒಂದೇ ಕಾನೂನುಗಳಿದ್ದು, ಇದರಲ್ಲಿ ಯಾವುದೇ ತಾರತಮ್ಯವಿಲ್ಲ. ಸತ್ಯ ಹೊರಬರಲು ಸಮಯದ ಅವಶ್ಯಕತೆ ಇದ್ದು, ಕೊನೆಗೆ ನ್ಯಾಯ ಮೇಲುಗೈ ಸಾಧಿಸುತ್ತದೆ. ನಾನು ನ್ಯಾಯಾಂಗದಲ್ಲಿ ಅಪಾರ ನಂಬಿಕೆ ಹೊಂದಿದ್ದೇನೆ ಎಂದಿದ್ದಾರೆ.
ಡ್ರಗ್ಸ್ ಪ್ರಕರಣದ ಕುರಿತು ತನಿಖೆ ಚುರುಕುಗೊಳಿಸಿರುವ ಎನ್‌ಸಿಬಿ ಅಧಿಕಾರಿಗಳು, ಮುಂಬೈನಲ್ಲಿ ದಾಳಿ ಮುಂದುವರೆಸಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈನ ಪ್ರಸಿದ್ಧ ಮುಚಾದ್ ಪಾನ್ವಾಲಾ ಅಂಗಡಿಯ ಮಾಲೀಕರಲ್ಲಿ ಒಬ್ಬರಾದ ರಾಮ್‌ಕುಮಾರ್ ತಿವಾರಿ ಅವರನ್ನು ಎನ್‌ಸಿಬಿ ಮಂಗಳವಾರ ಬಂಧಿಸಿದೆ. ಇನ್ನು ಕಳೆದ ವಾರ ಎನ್‌ಸಿಬಿ ಕರಣ್ ಸಜ್ನಾನಿ ಸೇರಿದಂತೆ ಮೂವರನ್ನು ಬಂಧಿಸಿ ಖಾರ್ ಮತ್ತು ಬಾಂದ್ರಾ ಪ್ರದೇಶಗಳಿಂದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ.