ETV Bharat / bharat

ಮುಂಬೈನಲ್ಲಿ ಓರ್ವ ಶಂಕಿತ ಭಯೋತ್ಪಾದಕನ ಬಂಧಿಸಿದ ಎಟಿಎಸ್ - ದೆಹಲಿ ಪೊಲೀಸರ ಕಾರ್ಯಾಚರಣೆ

ಹಿಂದಿನ ವಾರ ದೆಹಲಿಯಲ್ಲಿ ಪೊಲೀಸರು ಓರ್ವ ಭಯೋತ್ಪಾದಕನನ್ನ ಬಂಧಿಸಿ, ವಿಚಾರಣೆ ನಡೆಸಿದ್ದರು. ಈಗ ಮತ್ತೋರ್ವ ಶಂಕಿತ ಭಯೋತ್ಪಾದಕನನ್ನು ಮುಂಬೈನಲ್ಲಿ ಬಂಧಿಸಲಾಗಿದೆ.

Mumbai: Man taken into custody in connection with Pak terror module
ಮುಂಬೈನಲ್ಲಿ ಓರ್ವ ಶಂಕಿತ ಭಯೋತ್ಪಾದಕನ ಬಂಧಿಸಿದ ಎಟಿಎಸ್
author img

By

Published : Sep 18, 2021, 9:10 AM IST

ಮುಂಬೈ: ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಮತ್ತು ಮುಂಬೈ ಅಪರಾಧ ವಿಭಾಗದ ಪೊಲೀಸರ ಜಂಟಿ ತಂಡವು ಮುಂಬೈ ನಗರದ ಜೋಗೇಶ್ವರಿ ಪ್ರದೇಶದಲ್ಲಿ ಶಂಕಿತ ಭಯೋತ್ಪಾದಕನನ್ನು ಬಂಧಿಸಿದ್ದಾರೆ.

ಝಾಕೀರ್ ಬಂಧಿತ ಶಂಕಿತ ಉಗ್ರ ಎಂದು ಮಹಾರಾಷ್ಟ್ರ ಎಟಿಎಸ್​ ಮಾಹಿತಿ ನೀಡಿದೆ. ಭಯೋತ್ಪಾದಕ ಜಾನ್ ಮೊಹಮದ್ ಅಲಿಯಾಸ್ ಸಮೀರ್ ಕಾಲಿಯಾ ಮುಂಬೈಗೆ ಸ್ಫೋಟಕ ಮತ್ತು ಶಸ್ತ್ರಾಸ್ತ್ರಗಳನ್ನು ತರಬೇಕೆಂದು ಸೂಚನೆ ನೀಡಿದ್ದನು ಎಂದು ಆರೋಪಿ ಬಾಯ್ಬಿಟ್ಟಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸಮೀರ್ ಕಾಲಿಯಾನನ್ನು ಈಗಾಗಲೇ ದೆಹಲಿ ಪೊಲೀಸರು ಬಂಧಿಸಿದ್ದು, ಈ ಮೂಲಕ ನಿಖರ ಮಾಹಿತಿ ಆಧಾರದ ಮೇಲೆ ಮುಂಬೈನಲ್ಲಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ. ಸಮೀರ್ ಕಾಲಿಯಾ ಝಾಕೀರ್ ಬಗ್ಗೆ ಮಾಹಿತಿ ನೀಡಿದ್ದನು.

ಪಾಕಿಸ್ತಾನದ ಭಯೋತ್ಪಾದಕ ಸಂಘಟನೆಯೊಂದಿಗೆ ಇವರು ಸಂಪರ್ಕದಲ್ಲಿದ್ದರು. ಈಗಾಗಲೇ ಪಾಕಿಸ್ತಾನದಲ್ಲಿ ತರಬೇತಿ ಪಡೆದ ಇಬ್ಬರು ಸೇರಿದಂತೆ ಆರು ಮಂದಿಯನ್ನು ಬಂಧಿಸಲಾಗಿದೆ. ಎಲ್ಲರನ್ನೂ ದೆಹಲಿ ಪೊಲೀಸರ ವಿಶೇಷ ಸೆಲ್ ನಿರಂತರವಾಗಿ ವಿಚಾರಣೆ ನಡೆಸುತ್ತಿದ್ದು, ಅನೇಕ ಮಾಹಿತಿಗಳು ಹೊರಬಿದ್ದಿವೆ.

ಇದನ್ನೂ ಓದಿ: ಪಂಜಾಬ್​ನ ನಿಷೇಧಿತ ಸಂಘಟನೆ ಸಿಖ್ ಫಾರ್ ಜಸ್ಟೀಸ್​ನ ಮೂವರ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.