ಮುಂಬೈ(ಮಹಾರಾಷ್ಟ್ರ): ರಸ್ತೆ ಬಳಿ, ಮನೆಗಳ ಬಳಿ ಸಾಮಾನ್ಯವಾಗಿ ಕಸ ಹಾಕಬೇಡಿ, ಧೂಮಪಾನ ಮಾಡಬೇಡಿ, Rash ಡ್ರೈವಿಂಗ್ ಇಲ್ಲ ಎಂಬಂತಹ ಅನೇಕ ಬೋರ್ಡ್ಗಳನ್ನು ಅಳವಡಿಸಲಾಗುತ್ತದೆ. ಆದರೆ ಮುಂಬೈನ ಬೋರಿವಲಿ ಪ್ರದೇಶದ ಹೌಸಿಂಗ್ ಸೊಸೈಟಿಯ ಗೇಟ್‌ನ ಮುಂಭಾಗದ ರಸ್ತೆಯ ಮೇಲೆ 'ನೋ ಕಿಸ್ಸಿಂಗ್ ಝೋನ್' ಎಂದು ಪೈಂಟಿಂಗ್ ಮಾಡಲಾಗಿದೆ.
ಬೋರಿವಲಿಯ ಸತ್ಯಂ ಶಿವಂ ಸುಂದರಂ ಸೊಸೈಟಿಯ ನಿವಾಸಿಗಳು ಈ ಪೈಟಿಂಗ್ ಮಾಡಿದ್ದು, ಇದರ ಬಗ್ಗೆ ಸೊಸೈಟಿಯ ಅಧ್ಯಕ್ಷರಾಗಿರುವ ನ್ಯಾಯವಾದಿ ವಿನಯ್ ಅನ್ಸೂರ್ಕರ್ ಮಾತನಾಡಿದ್ದಾರೆ. "ನಾವು ಜೋಡಿಗಳ ವಿರುದ್ಧವಲ್ಲ. ಆದರೆ ಅವರ ಈ ವರ್ತನೆಗಳು ಅಸಭ್ಯತೆಯನ್ನು ಉಂಟು ಮಾಡುತ್ತದೆ" ಎಂದು ಹೇಳಿದ್ದಾರೆ.
"ಈ ಸೊಸೈಟಿಯ ಬಳಿ ಜೋಡಿಗಳು ಬಂದು ಅಸಭ್ಯವಾಗಿ ವರ್ತಿಸುತ್ತಿದ್ದರು. ಲಾಕ್ಡೌನ್ ಸಮಯದಲ್ಲಿ ಇಂತಹ ಪ್ರಕರಣ ಹೆಚ್ಚಾಯಿತು. ಆ ಬಳಿಕ ಪೈಂಟಿಂಗ್ ಮೂಲಕ ನೋ ಕಿಸ್ಸಿಂಗ್ ಝೋನ್ ಎಂದು ಬರೆದೆವು. ನಂತರ ಜೋಡಿಗಳ ಸಂಖ್ಯೆ ಕಡಿಮೆಯಾಗಿದೆ" ಎಂದು ಹೇಳಿದರು.