ETV Bharat / bharat

ಮುಂಬೈ ಫ್ಯಾಶನ್ ಸ್ಟ್ರೀಟ್‌ನ ಅಂಗಡಿಗಳಿಗೆ ಬೆಂಕಿ: ಪ್ರಾಣಾಪಾಯದಿಂದ ಪಾರು - ಮುಂಬೈ ಫ್ಯಾಶನ್ ಸ್ಟ್ರೀಟ್‌ನ ಅಂಗಡಿಗಳಲ್ಲಿ ಬೆಂಕಿ ಅಪಘಾತ

ಮುಂಬೈ ಫ್ಯಾಶನ್​ ಸ್ಟ್ರೀಟ್​ನ ಅಂಗಡಿಗಳಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕದಳ ಸಿಬ್ಬಂದಿ ಕೇವಲ 12 ನಿಮಿಷಗಳಲ್ಲಿ ಬೆಂಕಿ ನಂದಿಸಿದ್ದಾರೆ.

mumbai fashion street shops caught fire
ಮುಂಬೈ ಫ್ಯಾಶನ್ ಸ್ಟ್ರೀಟ್‌ನ ಅಂಗಡಿಗಳಲ್ಲಿ ಬೆಂಕಿ ಅಪಘಾತ
author img

By

Published : Nov 5, 2022, 4:19 PM IST

Updated : Nov 5, 2022, 7:37 PM IST

ಮುಂಬೈ: ಮುಂಬೈನ ಫ್ಯಾಶನ್ ಸ್ಟ್ರೀಟ್‌ನಲ್ಲಿರುವ 10 ರಿಂದ 12 ಅಂಗಡಿಗಳಲ್ಲಿ ಇಂದು ಮಧ್ಯಾಹ್ನ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಕಾಣಿಸಿಕೊಂಡಿರುವ ಕುರಿತು ಮಾಹಿತಿ ದೊರೆತ ಕೂಡಲೇ ಮುಂಬೈ ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿದ್ದು, ತ್ವರಿತವಾಗಿ ಬೆಂಕಿಯನ್ನು ನಂದಿವಲ್ಲಿ ಸಫಲವಾಗಿದೆ. ಬೆಂಕಿಯಲ್ಲಿ ಅಂಗಡಿಗಳು ವ್ಯಾಪಕವಾಗಿ ಹಾನಿಗೊಳಗಾಗಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಲ್​ನಲ್ಲಿರುವ ಆಜಾದ್ ಮೈದಾನದ ಬಳಿ ಪ್ರಸಿದ್ಧವಾದ ಫ್ಯಾಶನ್ ಸ್ಟ್ರೀಟ್ ಇದೆ. ಈ ಸ್ಟ್ರೀಟ್​ನಲ್ಲಿ ಜನ ಫ್ಯಾಶನ್​ ಬಟ್ಟೆಗಳಿಗಾಗಿ ಮುಗಿ ಬೀಳುತ್ತಾರೆ. ಫ್ಯಾಶನ್ ಸ್ಟ್ರೀಟ್‌ನಲ್ಲಿರುವ ಕೆಲವು ಅಂಗಡಿಗಳು ಬೆಂಕಿಗೆ ಆಹುತಿಯಾಗಿವೆ. ಮಧ್ಯಾಹ್ನ 1 ಗಂಟೆ ಸುಮಾರಿಗೆ ಅಂಗಡಿಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ.

ಮುಂಬೈ ಫ್ಯಾಶನ್ ಸ್ಟ್ರೀಟ್‌ನ ಅಂಗಡಿಗಳಲ್ಲಿ ಬೆಂಕಿ ಅಪಘಾತ

ಈ ಸ್ಟ್ರೀಟ್​ನಲ್ಲಿ ಬಟ್ಟೆ ಅಂಗಡಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದ ಕಾರಣ ಬೆಂಕಿ ಇನ್ನಷ್ಟು ಹರಡುವ ಭೀತಿ ಎದುರಾಗಿತ್ತು. ಆದರೆ ಅಗ್ನಿಶಾಮಕದಳ ಶೀಘ್ರವೇ ಸ್ಥಳಕ್ಕೆ ಧಾವಿಸಿ 12 ನಿಮಿಷಗಳಲ್ಲೇ ಬೆಂಕಿ ನಂದಿಸಿದೆ. 10 ರಿಂದ 12 ಅಂಗಡಿಗಳು ಬೆಂಕಿಗೆ ಆಹುತಿಯಾಗಿದ್ದು, ಆರ್ಥಿಕ ನಷ್ಟವಾಗಿದೆ. ಬೆಂಕಿಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಮುಂಬೈ ಅಗ್ನಿಶಾಮಕ ದಳ ಮತ್ತು ಪಾಲಿಕೆಯ ತುರ್ತು ನಿರ್ವಹಣಾ ವಿಭಾಗ ತಿಳಿಸಿದೆ.

ಇದನ್ನೂ ಓದಿ: ಶಾಲಿಮಾರ್ ಎಕ್ಸ್​ಪ್ರೆಸ್​​ ಲಗೇಜ್ ಬೋಗಿಗೆ ಬೆಂಕಿ: ಪ್ರಯಾಣಿಕರು ಪಾರು

Last Updated : Nov 5, 2022, 7:37 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.