ETV Bharat / bharat

ಯುಪಿಯ ಬಾಂದಾ ಜೈಲಿಗೆ BSP ಶಾಸಕ, ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿ ಶಿಫ್ಟ್ - BSP ಶಾಸಕ ಮುಖ್ತಾರ್ ಅನ್ಸಾರಿ

ಹಲವು ಗಂಭೀರ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪಿ ಮುಖ್ತಾರ್‌ ಅನ್ಸಾರಿಯನ್ನು ಉತ್ತರ ಪ್ರದೇಶ ಸರ್ಕಾರಕ್ಕೆ ಹಸ್ತಾಂತರಿಸುವಂತೆ ಮಾರ್ಚ್‌ 26ರಂದು ಸುಪ್ರೀಂಕೋರ್ಟ್‌, ಪಂಜಾಬ್‌ ಸರ್ಕಾರಕ್ಕೆ ಸೂಚಿಸಿತ್ತು.

mukhtar ansari
BSP ಶಾಸಕ ಮುಖ್ತಾರ್ ಅನ್ಸಾರಿ
author img

By

Published : Apr 7, 2021, 8:06 AM IST

ಲಕ್ನೋ (ಉತ್ತರ ಪ್ರದೇಶ): ಪಂಜಾಬ್‌ನ ರೂಪ್‌ನಗರದ ಜೈಲಿನಲ್ಲಿರುವ ರಾಜಕಾರಣಿ ಮುಖ್ತಾರ್ ಅನ್ಸಾರಿಯನ್ನು ಉತ್ತರ ಪ್ರದೇಶದ ಬಾಂದಾ ಜೈಲ್​​ಗೆ ಬುಧವಾರ ತಡರಾತ್ರಿ ಉತ್ತರ ಪ್ರದೇಶ ಪೊಲೀಸರು ಸ್ಥಳಾಂತರಿಸಿದ್ದಾರೆ.

ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ 2019ರ ಜನವರಿಯಿಂದ ರೂಪ್‌ನಗರ ಜೈಲಿನಲ್ಲಿರುವ ಅನ್ಸಾರಿಯನ್ನು ಉತ್ತರಪ್ರದೇಶ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಆರೋಪಿಯನ್ನು ಆಂಬುಲೆನ್ಸ್‌ನಲ್ಲಿ ಬಿಗಿ ಭದ್ರತೆಯ ಮೂಲಕ ಪೊಲೀಸರು ಕರೆದೊಯ್ದಿದ್ದಾರೆ ಎಂದು ಪಂಜಾಬ್ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಕಾರಾಗೃಹ) ಪ್ರವೀಣ್ ಕುಮಾರ್ ಸಿನ್ಹಾ ತಿಳಿಸಿದ್ದಾರೆ.

ಅನ್ಸಾರಿಯನ್ನು ಕರೆದೊಯ್ಯಲು ಉತ್ತರ ಪ್ರದೇಶದ ಪೊಲೀಸ್ ವಾಹನಗಳು, ಆಂಬುಲೆನ್ಸ್ ಮತ್ತು ವಜ್ರ ವಾಹನಗಳು ಮಧ್ಯಾಹ್ನ ರೂಪ್‌ನಗರ ಜೈಲಿಗೆ ಬಂದಿದ್ದವು. ಜೈಲಿನ ಹೊರಗಡೆ ಮತ್ತು ಜೈಲಿಗೆ ಹೋಗುವ ರಸ್ತೆಯಲ್ಲಿ ಪಂಜಾಬ್ ಪೊಲೀಸರು ಬ್ಯಾರಿಕೇಡ್‌ಗಳನ್ನು ಹಾಕಿ, ಭಾರಿ ಭದ್ರತೆ ಕಲ್ಪಿಸಿದ್ದರು.

ಇದನ್ನೂ ಓದಿ: ಮಾರ್ಚ್​ ಅಂತ್ಯದೊಳಗೆ ಎಜಿಆರ್ ಪಾವತಿಸಲು ವಿಫಲವಾದ​ ಕಂಪನಿಗಳು : ದೂರ ಸಂಪರ್ಕ ಇಲಾಖೆಯಿಂದ ಅಫಿಡವಿಟ್

ಉತ್ತರ ಪ್ರದೇಶದ ಮೌ ಕ್ಷೇತ್ರದ ಬಿಎಸ್‌ಪಿ ಶಾಸಕ ಅನ್ಸಾರಿ ರಾಜ್ಯದಲ್ಲಿ ಮತ್ತು ಇತರೆಡೆ 52 ಪ್ರಕರಣಗಳನ್ನು ಎದುರಿಸುತ್ತಿದ್ದು, ಇದರಲ್ಲಿ 15 ಪ್ರಕರಣಗಳು ವಿಚಾರಣೆಯ ಹಂತದಲ್ಲಿವೆ. 2005ರಲ್ಲಿ ನಡೆದ ಬಿಜೆಪಿ ಶಾಸಕ ಕೃಷ್ಣಾನಂದ ರೈ ಹತ್ಯೆ ಪ್ರಕರಣದಲ್ಲೂ ಅನ್ಸಾರಿ ಆರೋಪಿಯಾಗಿದ್ದಾನೆ.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.