ಗಾಜಿಪುರ (ಉತ್ತರ ಪ್ರದೇಶ): ಗ್ಯಾಂಗ್ಸ್ಟರ್-ರಾಜಕಾರಣಿ ಮುಕ್ತಾರ್ ಅನ್ಸಾರಿ ಅವರಿಗೆ ಗಾಜಿಪುರದ ಸಂಸದ/ಶಾಸಕ ವಿಶೇಷ ನ್ಯಾಯಾಲಯ ಬುಧವಾರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೋಷ ಮುಕ್ತಗೊಳಿಸಿದೆ. 14 ವರ್ಷಗಳ ಹಿಂದೆ ಮೊಹಮ್ಮದಾಬಾದ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ಬುಧವಾರ ಅನ್ಸಾರಿ ಖುಲಾಸೆಗೊಳಿಸಿದೆ.
2010ರಲ್ಲಿ ನಡೆದ ಕಪಿಲ್ ದೇವ್ ಸಿಂಗ್ ಹತ್ಯೆ ಪ್ರಕರಣದಲ್ಲಿ ಗ್ಯಾಂಗ್ಸ್ಟರ್ ಮುಕ್ತಾರ್ ಅನ್ಸಾರಿ ವಿರುದ್ಧ ಗಾಜಿಪುರ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 307ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಇದಕ್ಕೂ ಮುನ್ನ, ಮೇ 8 ರಂದು, ಮುಕ್ತಾರ್ ಸಹೋದರ ಬಹುಜನ ಸಮಾಜವಾದಿ ಪಾರ್ಟಿ (ಬಿಎಸ್‌ಪಿ)ಯ ಗಾಜಿಪುರದ ಸಂಸದ ಅಪ್ಜಲ್ ಅನ್ಸಾರಿಯನ್ನು 16 ವರ್ಷಗಳ ಹಿಂದಿನ ಹತ್ಯೆ ಪ್ರಕರಣದಲ್ಲಿ ಗಾಜಿಪುರದ ವಿಶೇಷ ನ್ಯಾಯಲಯ ನೀಡಿದ ಶಿಕ್ಷೆಯ ವಿರುದ್ಧ ಅಲಹಬಾದ್ ಹೈಕೋರ್ಟ್ಗೆ ಮೆಲ್ಮನವಿ ಸಲ್ಲಿಸಿದ್ದಾರೆ.
2005ರಲ್ಲಿ ಬಿಜೆಪಿ ಶಾಸಕ ಕೃಷ್ಣಾನಂದ ರೈ ಅವರ ಹತ್ಯೆಗೆ ಸಂಬಂಧಿಸಿದ ಅಪಹರಣ ಮತ್ತು ಕೊಲೆ ಪ್ರಕರಣದಲ್ಲಿ ಘಾಜಿಪುರದ ಸಂಸದ/ಶಾಸಕ ನ್ಯಾಯಾಲಯವು ಏಪ್ರಿಲ್ 28 ರಂದು ವಿಚರಾನೆ ನಡೆಸಿ ಬಿಎಸ್‌ಪಿ ನಾಯಕ ಅಪ್ಜಲ್ ಅನ್ಸಾರಿಯನ್ನು ದೋಷಿ ಎಂದು ಘೋಷಿಸಿ ನಾಲ್ಕು ವರ್ಷಗಳ ಜೈಲು ಶಿಕ್ಷೆ ಜೊತೆಗೆ ಒಂದು ಲಕ್ಷ ರೂಪಾಯಿ ದಂಡವನ್ನೂ ವಿಧಿಸಿದೆ. ಇದಕ್ಕೆ ಸಂಬಂಧಿಸಿದಂತೆ, ಗ್ಯಾಂಗ್ಸ್ಟರ್-ರಾಜಕಾರಣಿ ತನ್ನ ಲೋಕಸಭಾ ಸದಸ್ಯತ್ವವನ್ನೂ ಕಳೆದುಕೊಂಡಿದ್ದಾರೆ.
ಅತೀಕ್ ಅಹ್ಮದ್ ಹತ್ಯೆ ಪ್ರಕರಣ: ಕಳೆದ ಏಪ್ರಿಲ್ 15ರಂದು ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ಪತ್ರಕರ್ತರಂತೆ ಬಂದಿದ್ದ ಮೂವರು ಗ್ಯಾಂಗ್ಸ್ಟರ್-ರಾಜಕಾರಣಿ ಅತೀಕ್ ಅಹ್ಮದ್ ಮತ್ತು ಅವರ ಸಹೋದರ ಅಶ್ರಫ್ ಮೇಲೆ ಗುಂಡಿಕ್ಕಿ ಕೊಲೆ ಮಾಡಿದ್ದರು. ಪೊಲೀಸ್ ರಕ್ಷಣೆಯ ನಡುವೆ ಇಬ್ಬರ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಲಾಗಿತ್ತು. ಕೊಲೆಯ ಲೈವ್ ವಿಡಿಯೋ ಕೂಡಾ ಹೊರಬಿದ್ದಿತ್ತು. ಅರುಣ್ ಮೌರ್ಯ, ಸನ್ನಿ ಮತ್ತು ಲವಕೇಶ್ ತಿವಾರಿ ಕೊಲೆ ಮಾಡಿದ ಆರೋಪಿಗಳು ಪೊಲೀಸರಿಗೆ ಶರಣಾಗಿದ್ದರು.
ಪತ್ರಕರ್ತರ ಸೋಗಿನಲ್ಲಿ ಬಂದು ಹತ್ಯೆ: ಅತೀಕ್ ಮತ್ತು ಅಶ್ರಫ್ ಮಾಧ್ಯಮಗಳೊಂದಿಗೆ ಮಾತನಾಡಲು ಪ್ರಾರಂಭಿಸಿದ ಸಂದರ್ಭದಲ್ಲೇ ಪತ್ರಕರ್ತರ ಸೋಗಿನಲ್ಲಿ ಬಂದ ಆರೋಪಿಗಳು ಅತೀಕ್ ಅಹ್ಮದ್ ಮತ್ತು ಅವರ ಸಹೋದರ ಅಶ್ರಫ್ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದ್ದರು. ಉತ್ತರ ಪ್ರದೇಶ ಪೊಲೀಸರು ಕೊಲೆ ಪ್ರಕರಣದ ತನಿಖೆ ಕೈಗೊಂಡಿದ್ದಾರೆ. ಈ ಹಿಂದೆ, ಲಾಯರ್ ಉಮೇಶ್ ಪಾಲ್ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಅತೀಕ್ ಅಹ್ಮದ್ ಪುತ್ರ ಅಸದ್ನನ್ನು ಪೊಲೀಸರು ಎನ್ಕೌಂಟರ್ ಮಾಡಿದ್ದರು.
ಅತೀಕ್ ಅಹ್ಮದ್ ವಿರುದ್ಧ ಒಟ್ಟಾರೆ 101 ಪ್ರಕರಣಗಳು ದಾಖಲಾಗಿದ್ದವು ಮತ್ತು ಅತೀಕ್ನ ಪತ್ನಿ ಶೈಸ್ತಾ ಪರ್ವೀನ್ ಮತ್ತು ಮಕ್ಕಳ ಮೇಲೂ ಸಹ ಹಲವಾರು ಪೊಲೀಸ್ ಪ್ರಕರಣಗಳು ದಾಖಲಾಗಿದ್ದಾವೆ. ಆದರೆ, ಇಲ್ಲಿಯವರೆಗೆ ಅತೀಕ್ ಮತ್ತು ಈತನ ಸಹೋದರರಿಗೆ ಯಾವುದೇ ಪ್ರಕರಣದಲ್ಲಿ ಶಿಕ್ಷೆಯಾಗಿರಲಿಲ್ಲ. ಮೊದಲ ಬಾರಿಗೆ ಉಮೇಶ್ ಪಾಲ್ ಅಪಹರಣ ಪ್ರಕರಣದಲ್ಲಿ ಅತೀಕ್ ಅಹ್ಮದ್ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದರು.
ಇದನ್ನೂ ಓದಿ: ಕೇರಳ ಸ್ಟೋರಿ - ಕಾಶ್ಮೀರಿ ಫೈಲ್ಸ್ನಂತಹ ಸಿನಿಮಾಗಳಿಂದ ಬಿಜೆಪಿಗೆ ಮತಲಾಭ..ಇಲ್ಲಿದೆ ರಾಜಕೀಯ ವಿಶ್ಲೇಷಕರ ಮಾತು