ನವದೆಹಲಿ: ಭಾರತದ ನಂಬರ್ ಒನ್ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಇಂಗ್ಲೆಂಡ್‌ನಲ್ಲಿ ಬಹುಕೋಟಿ ಮೌಲ್ಯದ ಮನೆಯನ್ನು ಖರೀದಿಸಿದ್ದಾರೆ(Mukesh Ambani bought a bungalow in England).
ರಿಲಯನ್ಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಅವರ ಕುಟುಂಬ ಈಗಾಗಲೇ ವಿಶ್ವದ ಅತ್ಯಂತ ಬೆಲೆಬಾಳುವ ಕಟ್ಟಡವನ್ನು ಹೊಂದಿದ್ದಾರೆ (ಅಂದಾಜು 14,000 ಕೋಟಿ ರೂ.). ಮುಂಬೈನ ಶ್ರೀಮಂತ ಅಲ್ಟಾಮೌಂಟ್ ರಸ್ತೆಯಲ್ಲಿರುವ 29 ಅಂತಸ್ತಿನ 'ಆ್ಯಂಟಿಲಿಯಾ' ಕಟ್ಟಡವು ಆಕಾಶದೆತ್ತರಕ್ಕೆ ಏರುತ್ತಿರುವಂತೆ ಕಾಣುತ್ತದೆ. ಆದರೆ ಮನೆಯ ಸುತ್ತ ವಿಶಾಲವಾದ ಜಾಗವಿಲ್ಲ.
ಕೊರೊನಾ, ಲಾಕ್‌ಡೌನ್‌ಗಳಿಂದಾಗಿ ಅಂಬಾನಿ ಕುಟುಂಬ ಕಳೆದ ಎರಡು ವರ್ಷಗಳಿಂದ ಮನೆಯಲ್ಲಿ ಹೆಚ್ಚು ಸಮಯ ಕಳೆಯಬೇಕಾಯಿತು. ಮನೆಯ ಸುತ್ತಮುತ್ತ ಹೆಚ್ಚು ಜಾಗವಿಲ್ಲದ ಕಾರಣ, ವಿಶಾಲ ಪರಿಸರವುಳ್ಳ ಈ ಹೊಸ ಕಟ್ಟಡವನ್ನು ಕೊಂಡುಕೊಂಡಿದ್ದಾರೆ. ಹೌದು, ಇಂಗ್ಲೆಂಡ್‌ನ ಬಕಿಂಗ್ ಹ್ಯಾಮ್ ಶೈರ್ ನಲ್ಲಿರುವ ಸ್ಟೋಕ್ ಪಾರ್ಕ್ ಅನ್ನು ಮುಖೇಶ್ ಅಂಬಾನಿ ಖರೀದಿಸಿದ್ದಾರೆ.
ಇದು 300 ಎಕರೆ ವಿಶಾಲವಾದ ಕಂಟ್ರಿ ಕ್ಲಬ್ ಆಗಿದೆ. ಸದ್ಯ ಇದನ್ನೂ ಅಂಬಾನಿ ಕುಟುಂಬಸ್ಥರ ಅಭಿರುಚಿಗೆ ತಕ್ಕಂತೆ ನವೀಕರಿಸಲಾಗುತ್ತಿದೆ. 49 ಕೋಣೆಗಳಿರುವ ಈ ಬಂಗ್ಲೆ 592 ಕೋಟಿ ರೂಪಾಯಿ ಮೌಲ್ಯದ್ದಾಗಿದೆ.
ಮುಖೇಶ್ ಅಂಬಾನಿ ಕುಟುಂಬ ಮುಕ್ತ ಹಾಗೂ ವಿಶಾಲವಾದ ಜಾಗದಲ್ಲಿರುವ ಮನೆಯನ್ನು ಬಯಸಿದ್ದರು. ಮುಂಬೈನಲ್ಲಿರುವಂತೆ ಎತ್ತರವಾದ ಕಟ್ಟಡವನ್ನಲ್ಲ ಎಂದು ಮೂಲವೊಂದು ಹೇಳಿದೆ.
ಈ ಆಸ್ತಿಯು 1908ರವರೆಗೆ ಖಾಸಗಿ ನಿವಾಸವಾಗಿತ್ತು. ನಂತರ ಅದನ್ನು ಕಂಟ್ರಿ ಕ್ಲಬ್ ಆಗಿ ಪರಿವರ್ತಿಸಲಾಯಿತು. ಆಸ್ತಿಯು ಐಷಾರಾಮಿ ಹೋಟೆಲ್ ಮತ್ತು ಗಾಲ್ಫ್ ಕೋರ್ಸ್ ಅನ್ನು ಹೊಂದಿದೆ. ಇದೀಗ ವೈದ್ಯಕೀಯ ವ್ಯವಸ್ಥೆ ಜೊತೆಗೆ ಬೇಕಾದ ಸೌಲಭ್ಯವನ್ನು ಅಳವಡಿಸಿ ನವೀಕರಿಸಲಾಗುತ್ತಿದೆ.
ಇದನ್ನೂ ಓದಿ: ಪೆಟ್ರೋಲ್, ಡೀಸೆಲ್‌ಗಿಂತಲೂ ಕೆಲವು ತರಕಾರಿ ದುಬಾರಿ: ಟೊಮೆಟೋ ಪ್ರತಿ ಕೆ.ಜಿಗೆ 100 ರೂಪಾಯಿ!
ಈ ಬಾರಿಯ ದೀಪಾವಳಿ ಹಬ್ಬವನ್ನೂ ಕೂಡ ಆ ಕಟ್ಟಡದಲ್ಲೇ ಆಚರಿಸಿದ್ದಾರೆ. ಈ ಮನೆಯೊಳಗೆ ದೇವಾಸ್ಥಾನವನ್ನೂ ನಿರ್ಮಿಸಿದ್ದಾರೆ.