ವಡೋದರಾ, (ಗುಜರಾತ್) : ಕೋವಿಡ್ ವಾರ್ಡ್ನಲ್ಲಿ ರೋಗಿಗಳೊಂದಿಗೆ ವಿದ್ಯಾರ್ಥಿಗಳು ಪಿಪಿಇ ಕಿಟ್ ಧರಿಸಿ, ಡ್ಯಾನ್ಸ್ ಮಾಡಿದ ಘಟನೆ ರಾಜಸ್ಥಾನದ ವಡೋದರಾದಲ್ಲಿ ನಡೆದಿದೆ.
ವಡೋದರಾದಲ್ಲಿನ ಗೋತ್ರಿ ಆಸ್ಪತ್ರೆಯಲ್ಲಿರುವ ಕೋವಿಡ್ ವಾರ್ಡ್ಗೆ ಬಂದ ಮಹಾರಾಜ ಸಯ್ಯಾಜಿ ರಾವ್ ಯುನಿವರ್ಸಿಟಿಯ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು ಡ್ಯಾನ್ಸ್ ಮಾಡಿದ್ದು, ಕೋವಿಡ್ ರೋಗಿಗಳಲ್ಲಿ ಉತ್ಸಾಹ ತುಂಬಿದ್ದಾರೆ. ಈ ಮೂಲಕ ನೀರಸವಾಗಿದ್ದ ವಾತಾವರಣ ತಿಳಿಗೊಳಿಸಿದ್ದಾರೆ.
ವಿದ್ಯಾರ್ಥಿಗಳು ಬಾಲಿವುಡ್ ಹಾಡುಗಳಿಗೆ ಡ್ಯಾನ್ಸ್ ಮಾಡಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.