ರಾಯ್ಪುರ್(ಛತ್ತೀಸ್ಗಢ): ನೂತನ ಶಿಕ್ಷಕರ ನೇಮಕಾತಿಗೋಸ್ಕರ ಛತ್ತೀಸ್ಗಢ ಶಿಕ್ಷಣ ಇಲಾಖೆ ಅರ್ಜಿ ಆಹ್ವಾನ ಮಾಡಿತ್ತು. ಅದಕ್ಕಾಗಿ ಎಂ ಎಸ್ ಧೋನಿ ಫಾರ್ಮ್ ಭರ್ತಿ ಮಾಡಿರುವುದು ತಿಳಿದು ಬಂದಿದೆ. ಆದರೆ, ಇದರಲ್ಲಿ ಎಂ ಎಸ್ ಧೋನಿ ತಂದೆಯ ಹೆಸರು ನೋಡಿರುವ ಅಧಿಕಾರಿಗಳು ಶಾಕ್ಗೊಳಗಾಗಿದ್ದಾರೆ.
ಛತ್ತೀಸ್ಗಢದಲ್ಲಿ 14,850 ಶಿಕ್ಷಕರ ನೇಮಕಾತಿಗೋಸ್ಕರ ಅರ್ಜಿ ಆಹ್ವಾನ ಮಾಡಲಾಗಿದೆ. ಇದಕ್ಕಾಗಿ ಎಂ ಸ್ ಧೋನಿ ಕೂಡ ಅರ್ಜಿ ಸಲ್ಲಿಸಿದ್ದಾರೆ. ಅದರಲ್ಲಿ ತಮ್ಮ ತಂದೆಯ ಹೆಸರು ಸಚಿನ್ ತೆಂಡೂಲ್ಕರ್ ಎಂದು ಬರೆದಿದ್ದಾರೆ. ಅರ್ಜಿ ಪರಿಶೀಲನೆ ನಡೆಸಿರುವ ಅಧಿಕಾರಿಗಳಿಗೆ ಸಂಪೂರ್ಣವಾಗಿ ಅರ್ಜಿಯ ಪರಿಶೀಲನೆ ನಡೆಸಿದಾಗ ಶಾಕ್ ಆಗಿದೆ.
ಅರ್ಜಿ ಪರಿಶೀಲನೆ ನಡೆಸಿರುವ ಅಧಿಕಾರಿಗಳು ಸಂದರ್ಶನಕ್ಕೆ ಹಾಜರಾಗುವಂತೆ ಮಹೇಂದ್ರ ಸಿಂಗ್ ಧೋನಿಗೆ ತಿಳಿಸಿದ್ದಾರೆ. ಕಳೆದ ಶುಕ್ರವಾರ ಧೋನಿ ಸೇರಿ 15 ಅಭ್ಯರ್ಥಿಗಳ ಸಂದರ್ಶನಕ್ಕೆ ಬರುವಂತೆ ತಿಳಿಸಿದ್ದರು. ಆದರೆ, ಈ ಸಂದರ್ಶನದಲ್ಲಿ ಧೋನಿ ಮಾತ್ರ ಗೈರಾಗಿದ್ದರು. ಈ ವೇಳೆ ಮತ್ತಷ್ಟು ಅನುಮಾನ ಹುಟ್ಟಿಕೊಂಡಿದೆ.
ಇದನ್ನೂ ಓದಿರಿ: ಕರಿಬೇವು ಬೆಳೆದ ರೈತನಿಗೆ ಕೈತುಂಬ ಕಾಸು.. ಕಡಿಮೆ ಭೂಮಿ+ ಕನಿಷ್ಠ ಖರ್ಚು+ ಅಲ್ಪಶ್ರಮ = ಹೆಚ್ಚು ಆದಾಯ..
ಏನಿದು ಪ್ರಕರಣ?: ಎಂ.ಎಸ್ ಧೋನಿ ಎಂಬ ಹೆಸರಿನ ಅಭ್ಯರ್ಥಿ ದುರ್ಗನ್ ಸಿಎಸ್ವಿಟಿಯು ವಿಶ್ವವಿದ್ಯಾಯಲದಿಂದ ಎಂಜಿನಿಯರಿಂಗ್ ಪದವಿ ಮುಗಿಸಿದ್ದು, ಶಿಕ್ಷಕರ ಹುದ್ದೆಗೆ ಅರ್ಜಿ ಸಲ್ಲಿಕೆ ಮಾಡಿದ್ದನು. ಅರ್ಜಿ ಅಸಲಿಯೋ ಅಥವಾ ನಕಲಿಯೋ ಎಂಬುದು ಗೊತ್ತು ಮಾಡಿಕೊಳ್ಳಲು ಸಂದರ್ಶನಕ್ಕೆ ಹಾಜರಾಗುವಂತೆ ತಿಳಿಸಲಾಗಿತ್ತು ಎಂದು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ದೂರು ದಾಖಲು ಮಾಡಲಾಗಿದ್ದು, ಆದಷ್ಟು ಬೇಗ ತನಿಖೆ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.