ನವದೆಹಲಿ: ಲೋಕಸಭೆಯಲ್ಲಿ ಬೆಲೆ ಏರಿಕೆ, ಜಿಎಸ್‌ಟಿ ಹೆರಿಕೆ ಸೇರಿದಂತೆ ವಿವಿಧ ವಿಷಯಗಳನ್ನಿಟ್ಟುಕೊಂಡು ಪ್ರತಿಭಟನೆ ನಡೆಸುತ್ತಿದ್ದ 19 ಸಂಸದರು ವಾರಗಳ ಕಾಲ ಮಳೆಗಾಲದ ರಾಜ್ಯಸಭಾ ಕಲಾಪದ ಅಧಿವೇಶನದಿಂದ ಅಮಾನತುಗೊಂಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಸಭಾಪತಿ ಮಹತ್ವದ ಆದೇಶ ಹೊರಡಿಸಿದ್ದಾರೆ.
ಅಧಿವೇಶನ ನಡೆಯುತ್ತಿದ್ದ ಸಂದರ್ಭದಲ್ಲಿ ಕಲಾಪದೊಳಗೆ ಕೈಯಲ್ಲಿ ಭಿತ್ತಿಪತ್ರ ಹಿಡಿದು ಪ್ರತಿಭಟನೆ ನಡೆಸಿದ್ದರಿಂದ ಕಲಾಪಕ್ಕೆ ಅಡ್ಡಿಯಾಗಿದೆ. ಹೀಗಾಗಿ, ಟಿಎಂಸಿ ಸಂಸದೆ ಸುಶ್ಮಿತಾ ದೇವ್,ಡಾ ಸಂತಾನು ಸೇನ್, ಡೋಲಾ ಸೇನ್ ಸೇರಿದಂತೆ 19 ರಾಜ್ಯಸಭಾ ಸಂಸದರು ಅಮಾನತುಗೊಂಡಿದ್ದಾರೆ. ಇದರ ಬೆನ್ನಲ್ಲೇ 20 ನಿಮಿಷಗಳ ಕಾಲ ಕಲಾಪ ಮುಂದೂಡಿಕೆ ಮಾಡಲಾಗಿದೆ.
-
19 opposition Rajya Sabha MPs suspended for the remaining part of the week for storming well of the House and raising slogans https://t.co/cyLSmWIvd3 pic.twitter.com/wGvlQQLNF5
— ANI (@ANI) July 26, 2022 " class="align-text-top noRightClick twitterSection" data="
">19 opposition Rajya Sabha MPs suspended for the remaining part of the week for storming well of the House and raising slogans https://t.co/cyLSmWIvd3 pic.twitter.com/wGvlQQLNF5
— ANI (@ANI) July 26, 202219 opposition Rajya Sabha MPs suspended for the remaining part of the week for storming well of the House and raising slogans https://t.co/cyLSmWIvd3 pic.twitter.com/wGvlQQLNF5
— ANI (@ANI) July 26, 2022
ಸಂಸತ್ತಿನ ಮುಂಗಾರು ಅಧಿವೇಶನದ ವೇಳೆ ಪ್ರತಿಪಕ್ಷಗಳು ಕಲಾಪಕ್ಕೆ ಅಡ್ಡಿ ಮಾಡ್ತಿದ್ದು, ಸರಾಗವಾಗಿ ಅಧಿವೇಶನ ನಡೆಯಲು ಬಿಡುತ್ತಿಲ್ಲ.ಹೀಗಾಗಿ, ಯಾವುದೇ ವಿಷಯದ ಬಗ್ಗೆ ಗಂಭೀರವಾದ ಚರ್ಚೆ ನಡೆದಿಲ್ಲ. ಇಂದು ಬೆಳಗ್ಗೆ 11 ಗಂಟೆಗೆ ಸದನ ಸಮಾವೇಶಗೊಂಡ ಬಳಿಕ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಜುಲೈ 26 ಅನ್ನು ಕಾರ್ಗಿಲ್ ವಿಜಯ್ ದಿವಸ್ ಎಂದು ಆಚರಿಸಲಾಗುತ್ತದೆ. ರಾಷ್ಟ್ರದ ವೀರ ಸೈನಿಕರಿಗೆ ದೇಶವು ಋಣಿಯಾಗಿದೆ ಎಂದು ಸ್ಮರಿಸಲಾಯಿತು.
ಶ್ರದ್ಧಾಂಜಲಿ ಅರ್ಪಿಸಿದ ತಕ್ಷಣ, ಪ್ರತಿಪಕ್ಷಗಳ ಸದಸ್ಯರು ಬೆಲೆ ಏರಿಕೆ ಮತ್ತು ಅಗತ್ಯ ವಸ್ತುಗಳ ಮೇಲಿನ ಜಿಎಸ್‌ಟಿ ದರ ಏರಿಕೆಯ ವಿರುದ್ಧ ಪ್ರತಿಭಟನೆ ಆರಂಭಿಸಿದರು. ಭಿತ್ತಿ ಪತ್ರಗಳನ್ನು ಹಿಡಿದು ಮೋದಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಸದನದ ಬಾವಿಗೆ ಇಳಿದರು. ಹೀಗಾಗಿ, ಸಭಾಪತಿ ಈ ನಿರ್ಧಾರ ಕೈಗೊಂಡಿದ್ದಾರೆ.
ಅಶಿಸ್ತಿನ ವರ್ತನೆಗಾಗಿ ಮುರಳೀಧರನ್, ಹಕ್, ಸೇನ್, ಅಬೀರ್ ಬಿಸ್ವಾಸ್, ಮೌಸಮ್ ನೂರ್, ಸುಶ್ಮಿತಾ ದೇವ್, ಶಾಂತಾ ಛೆಟ್ರಿ, ಮೊಹಮ್ಮದ್ ಅಬ್ದುಲ್ಲಾ, ಎಎ ರಹೀಮ್, ಕನಿಮೋಳಿ, ಎಲ್ ಯಾದವ್ ಮತ್ತು ವಿ ಶಿವದಾಸನ್ ಅಮಾನತುಗೊಂಡಿದ್ದಾರೆ. ನಿನ್ನೆ ಕೂಡ ಇದೇ ವಿಚಾರವಾಗಿ ಕಾಂಗ್ರೆಸ್ನ ನಾಲ್ವರು ಸಂಸದರು ಮಳೆಗಾಲದ ಅಧಿವೇಶನದಿಂದ ಸಂಪೂರ್ಣವಾಗಿ ಅಮಾನತುಗೊಂಡಿದ್ದಾರೆ.
ಇದನ್ನೂ ಓದಿರಿ: ಸದನದೊಳಗೆ ಪ್ರತಿಭಟನೆ: ಕಾಂಗ್ರೆಸ್ನ ನಾಲ್ವರು ಸಂಸದರು ಮಳೆಗಾಲ ಅಧಿವೇಶನದಿಂದ ಅಮಾನತು