ETV Bharat / bharat

ಮಹಿಳಾ ಪೊಲೀಸ್​ ಕಾನ್ಸ್​ಟೇಬಲ್​ ಮೇಲೆ ಗ್ಯಾಂಗ್​ರೇಪ್​, ಇಬ್ಬರ ಬಂಧನ - ಮಹಿಳಾ ಪೊಲೀಸ್​ ಕಾನ್ಸ್​ಟೇಬಲ್​ ಮೇಲೆ ಗ್ಯಾಂಗ್​ರೇಪ್

ಪಾರ್ಟಿಯಲ್ಲಿ ಭಾಗಿಯಾಗುವಂತೆ ಮಹಿಳಾ ಪೊಲೀಸ್​​ ಕಾನ್ಸ್​ಟೇಬಲ್​ಗೆ ಆಹ್ವಾನ ನೀಡಿರುವ ಮೂವರು ಕಾಮುಕರು, ಸ್ಥಳಕ್ಕಾಗಮಿಸುತ್ತಿದ್ದಂತೆ ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

Woman constable gang raped in Neemuch
Woman constable gang raped in Neemuch
author img

By

Published : Sep 25, 2021, 5:03 PM IST

Updated : Sep 25, 2021, 10:46 PM IST

ನೀಮುಚ್ (ಮಧ್ಯಪ್ರದೇಶ): 30 ವರ್ಷದ ಮಹಿಳಾ ಪೊಲೀಸ್ ಕಾನ್ಸ್​ಟೇಬಲ್​ ಮೇಲೆ ಮೂವರು ಕಾಮುಕರು ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಮಧ್ಯಪ್ರದೇಶದ ನೀಮುಚ್​​ನಲ್ಲಿ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಇಬ್ಬರ ಬಂಧನ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಸೆಪ್ಟೆಂಬರ್​ ಮೊದಲ ವಾರದಲ್ಲಿ ಈ ಘಟನೆ ನಡೆದಿದ್ದು, ಮಹಿಳಾ ಕಾನ್ಸ್​ಟೇಬಲ್​​ ಸೆಪ್ಟೆಂಬರ್​​ 13ರಂದು ದೂರು ದಾಖಲು ಮಾಡಿದ್ದರು. ತನಿಖೆ ಆರಂಭಿಸಿದ್ದ ಪೊಲೀಸರು ಪ್ರಮುಖ ಆರೋಪಿಯ ತಾಯಿ ಸೇರಿದಂತೆ ಐವರ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡಿದ್ದರು.

ಇದನ್ನೂ ಓದಿರಿ: ವಿಶ್ವಸಂಸ್ಥೆಯಲ್ಲಿ ಪಾಕ್​ ಬೆವರು ಇಳಿಸಿದ ಸ್ನೇಹ ದುಬೆ.. IFS ಅಧಿಕಾರಿ ಮಾಹಿತಿಗೆ ಎಲ್ಲರೂ ಫಿದಾ!

ಆರೋಪಿಗಳು ಸಂತ್ರಸ್ತೆ ಜೊತೆ ಫೇಸ್​ಬುಕ್​​ನಲ್ಲಿ ಪರಿಚಯವಾಗಿದ್ದಾರೆ. ಕಳೆದ ಏಪ್ರಿಲ್​ ತಿಂಗಳಿಂದಲೂ ಆಕೆಯ ಜೊತೆ ವಾಟ್ಸ್​​​ಆ್ಯಪ್​​​ನಲ್ಲಿ ಚಾಟ್​ ಮಾಡುತ್ತಿದ್ದರು. ಇದರ ಮಧ್ಯೆ ಆರೋಪಿಯ ಸಹೋದರನ ಹುಟ್ಟುಹಬ್ಬದ ಪಾರ್ಟಿಗೆ ಬರುವಂತೆ ಆಹ್ವಾನ ನೀಡಿದ್ದನು. ಅಲ್ಲಿಗೆ ಆಗಮಿಸಿರುವ ಆಕೆಯ ಮೇಲೆ ಮೂವರು ಕಾಮುಕರು ಅತ್ಯಾಚಾರ ಎಸಗಿದ್ದಾರೆ. ಕೃತ್ಯದ ವಿಡಿಯೋ ಮೊಬೈಲ್​​ನಲ್ಲಿ ಸೆರೆ ಹಿಡಿದಿದ್ದಾರೆ.

ಘಟನೆ ಬಗ್ಗೆ ದೂರು ನೀಡಿರುವ ಪೊಲೀಸ್ ಕಾನ್ಸ್​ಟೇಬಲ್​, ಈ ವೇಳೆ ಆರೋಪಿಯ ತಾಯಿ ಕೂಡ ತನಗೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ, ಹಣ ವಸೂಲಿ ಮಾಡಲು ಯತ್ನಿಸಿದ್ದಾಳೆಂದು ಹೇಳಿಕೊಂಡಿದ್ದಾಳೆ. ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರ ಬಂಧನ ಮಾಡಿರುವ ಪೊಲೀಸರು ಉಳಿದ ಆರೋಪಿಗಳಿಗಾಗಿ ಶೋಧಕಾರ್ಯ ನಡೆಸಿದ್ದಾರೆ.

Last Updated : Sep 25, 2021, 10:46 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.