ETV Bharat / bharat

ಕೋವಿಡ್ ಸೋಂಕಿಗೊಳಗಾಗಿದ್ದರೂ​ ಕರ್ತವ್ಯ ನಿಷ್ಠೆ.. ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು! - ಕೊರೊನಾ ಸೋಂಕಿಗೊಳಗಾದ ವೈದ್ಯರು

ಮಹಾಮಾರಿ ಕೊರೊನಾ ಸೋಂಕಿಗೊಳಗಾಗಿದ್ದರೂ ಇಬ್ಬರು ವೈದ್ಯರು ಆಸ್ಪತ್ರೆಯಲ್ಲಿನ ರೋಗಿಗಳಿಗೆ ಚಿಕಿತ್ಸೆ ನೀಡ್ತಿದ್ದು, ಎಲ್ಲರಿಂದಲೂ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

Doctor
Doctor
author img

By

Published : Apr 23, 2021, 3:46 PM IST

ಭೋಪಾಲ್​: ಡೆಡ್ಲಿ ವೈರಸ್​ ಕೋವಿಡ್​ನಿಂದಾಗಿ ನಿತ್ಯ ಅನೇಕರು ತೊಂದರೆ ಅನುಭವಿಸುತ್ತಿದ್ದಾರೆ. ಆಸ್ಪತ್ರೆಯಲ್ಲಿ ಆಕ್ಸಿಜನ್​, ಬೆಡ್​ ಸಮಸ್ಯೆ ಉಂಟಾಗಿ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೇ ಸಾವನ್ನಪ್ಪುತ್ತಿದ್ದಾರೆ.

ಇದರ ಮಧ್ಯೆ ಆಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಗಳು ಸರಿಯಾದ ಸಮಯಕ್ಕೆ ವೈದ್ಯಕೀಯ ಸೇವೆ ಲಭ್ಯವಾಗದೇ ನರಳಾಟ ನಡೆಸುತ್ತಿದ್ದಾರೆ. ಮಹಾಮಾರಿ ಕೊರೊನಾ ವೈರಸ್ ವಿರುದ್ಧ ವೈದ್ಯರು, ವೈದ್ಯಕೀಯ ಸಿಬ್ಬಂದಿ ಹಾಗೂ ಆರೋಗ್ಯ ಕಾರ್ಯಕರ್ತರು ಹಗಲು - ರಾತ್ರಿ ಲೆಕ್ಕಿಸದೇ ಕೆಲಸ ಮಾಡ್ತಿದ್ದು, ರೋಗಿಗಳ ಪ್ರಾಣ ಉಳಿಸಲು ಹೆಣಗಾಡುತ್ತಿದ್ದಾರೆ. ಆದರೆ ಮಧ್ಯಪ್ರದೇಶದ ಭೋಪಾಲ್​​ನ ಹಮೀಡಿಯಾದ ಗಾಂಧಿ ವೈದ್ಯಕೀಯ ಕಾಲೇಜ್​ನಲ್ಲಿ ಇಬ್ಬರು ವೈದ್ಯರು ಕೊರೊನಾ ಸೋಂಕಿಗೊಳಗಾಗಿದ್ದರೂ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ.

ಇದನ್ನೂ ಓದಿ: ಕೋವಿಡ್​ನಿಂದ 29 ವರ್ಷದ ಸಬ್​ ಇನ್ಸ್​ಪೆಕ್ಟರ್ ನಿಧನ: ಆಸ್ಪತ್ರೆಯಲ್ಲಿನ ಕೊನೆ ಕ್ಷಣದ ವಿಡಿಯೋ!

ಮಹಾಮಾರಿ ಕೊರೊನಾ ಸೋಂಕಿತರು ಇರುವ ವಾರ್ಡ್​ನಲ್ಲಿರುವ ಶಸ್ತ್ರಚಿಕಿತ್ಸಾ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಅನುರಾಧಾ ಚೌಧರಿ ಹಾಗೂ 3ನೇ ವರ್ಷದ ವಿದ್ಯಾರ್ಥಿ ಡಾ. ಅನುಭವ್​ ಅಗರ್ವಾಲ್​​ 20ಕ್ಕೂ ಹೆಚ್ಚು ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಆಸ್ಪತ್ರೆಯ ಡಾ. ದೇವೇಂದ್ರ ಮತ್ತು ಡಾ. ವರ್ಧೆ ಸೋಂಕಿಗೊಳಗಾದ ನಂತರ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವುದು ನನಗೆ ಪ್ರಚೋದನೆ ನೀಡಿದ್ದು, ಆ ಧೈರ್ಯದಿಂದಲೇ ನಾನು ಕೆಲಸ ಮಾಡುತ್ತಿದ್ದೇನೆ ಎಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.