ಕೋಲ್ಕತ್ತಾ: 'ವಿದೇಶಗಳಲ್ಲಿ ತಿರುಗಾಡುತ್ತಾ ನಾನು ಬೆಂಗಾಲಿ ಹಾಡುಗಳನ್ನು ಹಾಡುತ್ತೇನೆ, ನನ್ನ ನಾಯಕಿ ಶೇಖ್ ಹಸೀನಾ, ಅವರು ಹೋಲಿಕೆಗೆ ಮೀರಿದವರು..' ಎಂದು ಸಂಸದೆ ಮುಮ್ತಾಜ್ ಬೇಗಂ ಕಿಕ್ಕಿರಿದ ಸದನದಲ್ಲಿ ಎದ್ದು ಅವರನ್ನು ಹಾಡಿ ಹೊಗಳಿದ್ದಾರೆ.
ಸದನದ ಅಧ್ಯಕ್ಷರಿಂದ ಹಿಡಿದು ಸಂಸದರವರೆಗೂ ಎಲ್ಲರೂ ಈ ಕ್ಷಣವನ್ನು ಆನಂದಿಸಿದ್ದಾರೆ ಜೊತೆಗೆ ಬಾಂಗ್ಲಾದೇಶ ಸಂಸತ್ತು ವಿಭಿನ್ನ ಘಟನೆಗೆ ಸಾಕ್ಷಿಯಾಗಿದೆ. ರಾಷ್ಟ್ರೀಯ ಸಂಸತ್ತಿನ ಸದಸ್ಯರಾದ ಮಮತಾಜ್ ಬೇಗಂ ಅವರು ಹೊಸದಾಗಿ ಉದ್ಘಾಟನೆಗೊಂಡ ಪದ್ಮ ಸೇತುವೆಯ ಬಗ್ಗೆ ಶ್ಲಾಘನೆಗಳ ಸುರಿಮಳೆಯನ್ನೇ ಹರಿಸಿದ್ದಾರೆ . ತಮ್ಮ ಪಕ್ಷದ ಮುಖ್ಯಸ್ಥೆ ಶೇಖ್ ಹಸೀನಾ ಅವರನ್ನು ಹಾಡುಗಳು ಮತ್ತು ಕವಿತೆಗಳ ಮೂಲಕ ಹೊಗಳಿದರು.
ಇನ್ನು ಇತ್ತೀಚೆಗಷ್ಟೇ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರು ಪದ್ಮ ಸೇತುವೆಯನ್ನು ಉದ್ಘಾಟಿಸಿದ್ದರು. ಸೇತುವೆಯ ನಿರ್ಮಾಣವು ಎರಡು ದೇಶಗಳ ನಡುವಿನ ಅಂತರವನ್ನು ಕಡಿಮೆ ಮಾಡಲು ಸಹಾಯ ಮಾಡಿದೆ. ಮಮತಾಜ್ ಬೇಗಂ ಅವರು 2014 ರಿಂದ ಮಾಣಿಕ್‌ಗಂಜ್-2 ರಿಂದ ಆಯ್ಕೆಯಾಗಿ ಸಂಸತ್ತಿನಲ್ಲಿ ಜನಪ್ರತಿನಿಧಿಯಾಗಿದ್ದಾರೆ. ಅವರು ದೇಶದ ರಾಷ್ಟ್ರೀಯ ಪ್ರಶಸ್ತಿ ವಿಜೇತ ಜಾನಪದ ಸಂಗೀತ ಕಲಾವಿದೆ ಮತ್ತು 700 ಕ್ಕೂ ಹೆಚ್ಚು ಆಲ್ಬಮ್‌ಗಳನ್ನು ಮಾಡಿದ್ದಾರೆ.
ಇದನ್ನೂ ಓದಿ : ರೌಡಿಶೀಟರ್ಗಳ ಮನೆಗೆ ಪೊಲೀಸರ ದಿಢೀರ್ ಎಂಟ್ರಿ: ಮಾರಕಾಸ್ತ್ರಗಳ ಜಪ್ತಿ