ETV Bharat / bharat

ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಜಿಲ್ಲಾಧಿಕಾರಿ ಹುದ್ದೆಗೆ ರಾಜೀನಾಮೆ! - ಛತ್ತರ್​​ಪುರ ಜಿಲ್ಲಾಧಿಕಾರಿಗೆ ಕಾಂಗ್ರೆಸ್​ ಟಿಕೆಟ್

ಮಧ್ಯಪ್ರದೇಶದ ಛತ್ತರ್​​ಪುರದ ಜಿಲ್ಲಾಧಿಕಾರಿ ನಿಶಾ ಬಂಗ್ರೆ ಅವರು ಸಲ್ಲಿಸಿದ್ದ ರಾಜೀನಾಮೆಯನ್ನು ಸರ್ಕಾರ ಅಂಗೀಕರಿಸಿದೆ. ಆಮ್ಲಾ ವಿಧಾನಸಭಾ ಕ್ಷೇತ್ರದಲ್ಲಿ ತನ್ನ ಅಭ್ಯರ್ಥಿಯನ್ನು ಬದಲಿಸಿ ನಿಶಾ ಅವರಿಗೆ ಕಾಂಗ್ರೆಸ್‌ ಪಕ್ಷ ಟಿಕೆಟ್​ ನೀಡುವ ಸಾಧ್ಯತೆ ದಟ್ಟವಾಗಿದೆ ಎಂದು ವರದಿಯಾಗಿದೆ.

MP polls: Deputy Collector Nisha Bangres resignation accepted, will Congress replace Amla candidate?
ಮಧ್ಯಪ್ರದೇಶ ಚುನಾವಣಾ ಅಖಾಡಕ್ಕೆ ಇಳಿಯಲು ಜಿಲ್ಲಾಧಿಕಾರಿ ಹುದ್ದೆಗೆ ನಿಶಾ ರಾಜೀನಾಮೆ
author img

By ETV Bharat Karnataka Team

Published : Oct 24, 2023, 7:14 PM IST

ಭೋಪಾಲ್ (ಮಧ್ಯಪ್ರದೇಶ): ಮಧ್ಯಪ್ರದೇಶದಲ್ಲಿ ವಿಧಾನಸಭೆ ಚುನಾವಣೆಯ ಕಾವು ದಿನದಿನಕ್ಕೆ ಜೋರಾಗುತ್ತಿದೆ. ಚುನಾವಣಾ ಅಖಾಡಕ್ಕಿಳಿಯುವ ಉದ್ದೇಶದಿಂದಲೇ ಛತ್ತರ್​​ಪುರ ಜಿಲ್ಲಾಧಿಕಾರಿ ನಿಶಾ ಬಂಗ್ರೆ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದು, ನ್ಯಾಯಾಲಯದ ಮಧ್ಯಪ್ರವೇಶದ ನಂತರ ಸರ್ಕಾರ ಇವರ ರಾಜೀನಾಮೆಯನ್ನು ಅಂಗೀಕರಿಸಿತು. ಇದರಿಂದ ನಿಶಾ ಅವರ ಮುಂದಿನ ಹಾದಿ ಸುಗಮವಾಗಿದೆ. ಇವರು ಬೇತುಲ್ ಜಿಲ್ಲೆಯಲ್ಲಿ ಕಾಂಗ್ರೆಸ್​ ಪಕ್ಷದಿಂದ ಸ್ಪರ್ಧಿಸುವ ಸಾಧ್ಯತೆ ದಟ್ಟವಾಗಿದೆ.

ರಾಜ್ಯ ಆಡಳಿತ ಸೇವೆ ತೊರೆದು ರಾಜಕೀಯಕ್ಕೆ ಜಿಗಿಯಲು ಸಿದ್ಧತೆ ನಡೆಸಿದ್ದ ನಿಶಾ ಬಂಗ್ರೆ, ಬೇತುಲ್ ಜಿಲ್ಲೆಯ ಆಮ್ಲಾ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲು ಬಹಳ ದಿನಗಳಿಂದ ತಯಾರಿ ನಡೆಸುತ್ತಿದ್ದರು. ಚುನಾವಣಾ ಕಣದಲ್ಲಿ ತಮ್ಮ ಅದೃಷ್ಟ ಪರೀಕ್ಷಿಸಲೆಂದೇ ಅವರು ರಾಜ್ಯ ಸರ್ಕಾರಕ್ಕೆ ತಮ್ಮ ರಾಜೀನಾಮೆ ಸಲ್ಲಿಸಿದ್ದರು. ಆದರೆ, ತಮ್ಮ ರಾಜೀನಾಮೆ ಅಂಗೀಕಾರವಾಗಲು ತೀವ್ರ ಹೋರಾಟ ನಡೆಸಬೇಕಾಯಿತು. ಆಮ್ಲಾದಿಂದ ಭೋಪಾಲ್‌ಗೆ ಯಾತ್ರೆ ಕೈಗೊಂಡಿದ್ದ ಅವರು, ಮುಖ್ಯಮಂತ್ರಿ ಭವನದ ಮುಂದೆ ಆಮರಣಾಂತ ಉಪವಾಸ ಕೂರುವುದಾಗಿಯೂ ಎಚ್ಚರಿಕೆ ನೀಡಿದ್ದರು. ನಂತರ ಅವರನ್ನು ಭೋಪಾಲ್ ಪೊಲೀಸರು ವಶಕ್ಕೆ ಪಡೆದಿದ್ದರು. ಇದರಿಂದಾಗಿ ನಿಶಾ ಒಂದು ದಿನದ ಮಟ್ಟಿಗೆ ಜೈಲು ಶಿಕ್ಷೆಯನ್ನೂ ಅನುಭವಿಸಿದ್ದರು.

ಹೈಕೋರ್ಟ್​ ಮೊರೆ ಹೋಗಿದ್ದ ಅಧಿಕಾರಿ: ಅಷ್ಟೇ ಅಲ್ಲ, ತಮ್ಮ ರಾಜೀನಾಮೆಯನ್ನು ಅಂಗೀಕರಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ನಿಶಾ ಜಬಲ್​ಪುರ ಹೈಕೋರ್ಟ್​ ಪೀಠದ ಮೊರೆ ಹೋಗಿದ್ದರು. ಅಕ್ಟೋಬರ್ 23ರೊಳಗೆ ನಿರ್ಧಾರ ತೆಗೆದುಕೊಳ್ಳುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಆದೇಶ ನೀಡಿತ್ತು. ಅ.27 ರೊಳಗೆ ರಾಜೀನಾಮೆಗೆ ಸಂಬಂಧಿಸಿದಂತೆ ವರದಿ ಸಲ್ಲಿಸುವಂತೆ ಸರ್ಕಾರಕ್ಕೆ ಸೂಚಿಸಿತ್ತು. ಇದರ ಬೆನ್ನಲ್ಲೇ ನಿಶಾ ಬಂಗ್ರೆ ರಾಜೀನಾಮೆ ಅಂಗೀಕಾರದ ಬಗ್ಗೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಕಾಂಗ್ರೆಸ್​ ಅಭ್ಯರ್ಥಿ ಬದಲಾಗುವ ಸಾಧ್ಯತೆ: ಮತ್ತೊಂದೆಡೆ, ರಾಜಕೀಯಕ್ಕೆ ಬರುವ ಸ್ಪಷ್ಟ ಗುರಿಯೊಂದಿಗೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ನಿಶಾ ಬಂಗ್ರೆ ಅವರತ್ತ ಮೊದಲಿನಿಂದಲೂ ಕಾಂಗ್ರೆಸ್​ ತನ್ನ ಚಿತ್ತ ನೆಟ್ಟಿತ್ತು. ಹೀಗಾಗಿ ಸೋಮವಾರದವರೆಗೂ ಆಮ್ಲಾ ವಿಧಾನಸಭಾ ಕ್ಷೇತ್ರದ ಟಿಕೆಟ್​ ಘೋಷಣೆ ಮಾಡದೆ ವಿಳಂಬ ಮಾಡಿತ್ತು. ನಿಶಾ ರಾಜೀನಾಮೆ ಅಂಗೀಕಾರದ ಬಗ್ಗೆ ಅಂತಿಮ ಕ್ಷಣದವರೆಗೂ ಕಾದಿದ್ದ ಕೈ ಪಾಳಯ, ನಿನ್ನೆ ಮನೋಜ್​ ಮಾಲ್ವೆ ಅವರಿಗೆ ಟಿಕೆಟ್​ ಘೋಷಿಸಿದೆ. ಇದೀಗ ನಿಶಾ ಬಂಗ್ರೆ ರಾಜೀನಾಮೆ ಅಂಗೀಕಾರವಾಗಿದ್ದು ಕಾಂಗ್ರೆಸ್​ ತನ್ನ ಅಭ್ಯರ್ಥಿಯನ್ನು ಬದಲಿಸುವ ಸಾಧ್ಯತೆ ಇದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ.

ಮಧ್ಯಪ್ರದೇಶದ 230 ಸದಸ್ಯ ಬಲದ ವಿಧಾನಸಭಾ ಚುನಾವಣೆಗೆ ನವೆಂಬರ್​ 17ರಂದು ಮತದಾನ ನಿಗದಿಯಾಗಿದೆ. ಕಾಂಗ್ರೆಸ್​ ಎಲ್ಲ ಕ್ಷೇತ್ರಗಳಿಗೆ ತಮ್ಮ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ. ಆಡಳಿತಾರೂಢ ಬಿಜೆಪಿ 228 ಕ್ಷೇತ್ರಗಳಿಗೆ ಹುರಿಯಾಳುಗಳನ್ನು ಪ್ರಕಟಿಸಿದ್ದು, ವಿದಿಶಾ ಮತ್ತು ಗುಣ ಕ್ಷೇತ್ರಗಳ ಅಭ್ಯರ್ಥಿಗಳನ್ನು ಘೋಷಿಸದೇ ಬಾಕಿ ಉಳಿಸಿಕೊಂಡಿದೆ.

ಇದನ್ನೂ ಓದಿ: ವಿಆರ್​ಎಸ್​ ಬೆನ್ನಲ್ಲೇ ಒಡಿಶಾ 5T ಅಧ್ಯಕ್ಷರಾಗಿ ನೇಮಕಗೊಂಡ ಮಾಜಿ ಐಎಎಸ್​ ಅಧಿಕಾರಿ ವಿ ಕೆ ಪಾಂಡಿಯನ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.