ಪನ್ನಾ (ಮಧ್ಯಪ್ರದೇಶ): ರಾಮಕೃಷ್ಣ ವಿಶ್ವಕರ್ಮ ಎಂಬ ಬಡ ಕಾರ್ಮಿಕನೋರ್ವನಿಗೆ 14.9 ಕ್ಯಾರೆಟ್ನ 70 ಲಕ್ಷ ರೂ. ಮೌಲ್ಯದ ವಜ್ರ ಸಿಕ್ಕಿದ್ದು, ಇದೀಗ ಅದನ್ನ ಅಧಿಕಾರಿಗಳಿಗೆ ಹಸ್ತಾಂತರ ಮಾಡಲಾಗಿದೆ.
ಇದನ್ನೂ ಓದಿ: ಅಮೇಥಿ ಜನರ ಕ್ಷಮೆ ಕೇಳಿ, ರಾಹುಲ್ ವಿರುದ್ಧ ಕಾಂಗ್ರೆಸ್ ಶಾಸಕಿ ಅದಿತಿ ಸಿಂಗ್ ವಾಗ್ದಾಳಿ!
ಮಧ್ಯಪ್ರದೇಶದ ಪನ್ನಾ ಜಿಲ್ಲೆಯ ಕಲ್ಯಾಣಪುರ್ದಲ್ಲಿ ಆಳವಿಲ್ಲದ ವಜ್ರದ ಗಣಿಯಲ್ಲಿ ಗಣಿಗಾರಿಕೆ ನಡೆಸುತ್ತಿದ್ದ ವೇಳೆ ಮೂರು ವಜ್ರಗಳು ಸಿಕ್ಕಿದ್ದು, ಇದಕ್ಕೂ ಮೊದಲು ಓರ್ವ ಕಾರ್ಮಿಕನಿಗೆ ಎರಡು ವಜ್ರದ ಹರಳು ಲಭ್ಯವಾಗಿದ್ದವು. ಇವುಗಳನ್ನ ವಜ್ರದ ಕಚೇರಿಗೆ ಹಸ್ತಾಂತರ ಮಾಡಲಾಗಿದ್ದು, ಮುಂದಿನ ತಿಂಗಳು ಹರಾಜಿಗೆ ಇಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎನ್ಎಂಡಿಸಿ ಕಾಲೋನಿಯ ನಿವಾಸಿ ರಾಮಕೃಷ್ಣ ಹಾಗೂ ಅವರ ಏಳು ಸಹಚರರು ವಜ್ರದ ಕಚೇರಿಯಿಂದ ಗಣಿ ಗುತ್ತಿಗೆ ಪಡೆದು ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಇದೀಗ ಕೆಲ ಹಣವನ್ನ ಕಡಿತಗೊಳಿಸಿ ಉಳಿದ ಹಣ ಕಾರ್ಮಿಕರಿಗೆ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.