ವಿದಿಶಾ (ಮಧ್ಯಪ್ರದೇಶ) : ಚುನಾವಣಾ ಆಯೋಗ ಗ್ರಾಮ ಪಂಚಾಯತ್ನಲ್ಲಿ ಸ್ಪರ್ಧಿಸಬೇಕು ಎಂದರೆ 21 ವರ್ಷವನ್ನು ನಿಗದಿ ಮಾಡಿದೆ. ಇಲ್ಲೋರ್ವರು 21ನೇ ವಯಸ್ಸಲ್ಲೇ ಪಂಚಾಯತ್ ಚುನಾವಣೆಯಲ್ಲಿ ಗೆದ್ದು ದಾಖಲೆ ಬರೆದಿದ್ದಾರೆ.
ಅನಿಲ್ ಎಂಬುವರು ವಿದಿಶಾದ ಸಿರೊಂಜ್ ತಹಸಿಲ್‌ನ ಗ್ರಾಮ ಪಂಚಾಯತ್‌ನ ಸರೆಖೋಹ್‌ನಿಂದ ಗೆದ್ದಿದ್ದಾರೆ. ನಾಮಪತ್ರದಲ್ಲಿ ಸಲ್ಲಿಕೆಯಾದ ಮಾಹಿತಿ ಪ್ರಕಾರ ಅನಿಲ್ ಅವರಿಗೆ 21 ವರ್ಷ ಮತ್ತು 6 ದಿನಗಳು. ಅನಿಲ್ ಬಿಜೆಪಿಯ ಯುವ ನಾಯಕರಾಗಿದ್ದು, ಬಿಜೆಪಿಯ ರಾಜ್ಯದ ಹಿರಿಯ ಶಾಸಕ ರಾಮೇಶ್ವರ್ ಶರ್ಮಾ ಅವರ ಸೋದರಳಿಯ ವಿವೇಕ್ ಶರ್ಮಾ ಅವರನ್ನು 12 ಮತಗಳಿಂದ ಸೋಲಿಸಿದ್ದಾರೆ. ಅನಿಲ್ ಯಾದವ್ ಒಟ್ಟು 562 ಮತಗಳನ್ನು ಪಡೆದರೆ, ಅವರ ಪ್ರತಿಸ್ಪರ್ಧಿ ವಿವೇಕ್ ಶರ್ಮಾ 550 ಮತಗಳನ್ನು ಪಡೆದಿದ್ದಾರೆ.

ಬಿಜೆಪಿಯ ಯುವ ಮುಖಂಡ ಅನಿಲ್ ಯಾದವ್ ಮಾಜಿ ಸಚಿವ ಲಕ್ಷ್ಮೀಕಾಂತ್ ಶರ್ಮಾ ಅವರ ಕಿರಿಯ ಸಹೋದರ ಶಾಸಕ ಉಮಾಕಾಂತ್ ಶರ್ಮಾ ಬಣದವರು. ಅವರು ತಮ್ಮ ಎದುರಾಳಿಯನ್ನು 12 ಮತಗಳಿಂದ ಸೋಲಿಸಿ ದೇಶದ ಮೊದಲ ಮತ್ತು ಅತಿ ಕಿರಿಯ ವಯಸ್ಸಿನ ಗ್ರಾಮ ಪಂಚಾಯತ್ ಸದಸ್ಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಮತದಾರರಿಗೆ ಕೃತಜ್ಞತೆ ಸಲ್ಲಿಸಿದ ಅನಿಲ್: ಇಂದು ಎಸ್‌ಡಿಎಂ ಸಾಹೇಬರು ನೀವು ದೇಶದ ಕಿರಿಯ ಸರಪಂಚ್ ಆಗಿದ್ದೀರಿ ಎಂದು ಹೇಳಿದರು. ಎಸ್‌ಡಿಎಂ ಸಾಹೇಬರ ಜೊತೆಗೆ ನಾನು ಎಲ್ಲರಿಗೂ ನನ್ನ ಕೃತಜ್ಞತೆಯನ್ನು ಸಲ್ಲಿಸುತ್ತೇನೆ ಎಂದು ಅನಿಲ್ ಸಂತಸ ವ್ಯಕ್ತಪಡಿಸಿದ್ದಾರೆ.

ಕಿರಿಯ ಸರಪಂಚ್ ಅನಿಲ್: ಸಿರೊಂಜ್ ಎಸ್‌ಡಿಎಂ ಪ್ರವೀಣ್ ಪ್ರಜಾಪತಿ ಮಾತನಾಡಿ, ಗ್ರಾಮ ಪಂಚಾಯತ್ ಸದಸ್ಯನ ಕನಿಷ್ಠ ವಯಸ್ಸು 21 ವರ್ಷಗಳು ಮತ್ತು ನಮ್ಮ ಯುವಕನಿಗೆ ನಾಮಪತ್ರ ಸಲ್ಲಿಸುವಾಗ 21 ವರ್ಷ ಮತ್ತು 6 ದಿನಳನ್ನು ಪೂರೈಕೆ ಮಾಡಿದ್ದರು. ಈ ಮೂಲಕ ದೇಶದ ಮೊದಲ ಚಿಕ್ಕವಯಸ್ಸಿನ ಗ್ರಾಮ ಪಂಚಾಯತ್ ಸದಸ್ಯನಾಗಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ: ಉಪರಾಷ್ಟ್ರಪತಿ ಸ್ಥಾನಕ್ಕೆ ವಿಪಕ್ಷದ ಅಭ್ಯರ್ಥಿಯಾಗಿ ಕನ್ನಡತಿ ಮಾರ್ಗರೇಟ್ ಆಳ್ವಾ ಆಯ್ಕೆ